ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿತಾ ‘ರಿಲ್ಯಾಕ್ಸ್‌’ ಲುಕ್‌!

Last Updated 24 ಜುಲೈ 2017, 14:04 IST
ಅಕ್ಷರ ಗಾತ್ರ

ಅವತ್ತು ಒಂದು ಯೂಟ್ಯೂಬ್‌ ಚಾನಲ್‌ ಒಂದರ ಸಂದರ್ಶನ ಇತ್ತು. ನಾನು, ಶ್ರದ್ಧಾ ಶ್ರೀನಾಥ್‌ ಮತ್ತು ಮೇಘನಾ ರಾಜ್‌ ಮೂವರೂ ಆ ಸಂದರ್ಶನದಲ್ಲಿ ಭಾಗವಹಿಸಬೇಕಾಗಿತ್ತು. ಅದು ನಿಗದಿಯಾದ ಸ್ಥಳ ಡಾಲರ್ಸ್‌ ಕಾಲೋನಿಯ ಸ್ಟೋನ್‌ ಮಂಕಿ ಐಸ್‌ಕ್ರೀಂ ಪಾರ್ಲರ್‌. ನಾನಾಗ ‘ರಿಲಾಕ್ಸ್‌ ಸತ್ಯ’ ಸಿನಿಮಾದ ಲುಕ್‌ನಲ್ಲಿಯೇ ಅಲ್ಲಿಗೆ ಹೋಗಿದ್ದೆ. ಅಲ್ಲಿ ನನಗೆ ಮೊದಲು ಕಂಡಿದ್ದು ಶ್ರದ್ಧಾ. ಖುಷಿಯಿಂದ ಮಾತಾಡಿಸಿದೆ. ನಂತರ ಮೇಘನಾ ಕೂಡ ಸೇರಿಕೊಂಡ್ರು. ಸಂದರ್ಶನ ಎಲ್ಲ ಮುಗಿಸಿ ವಾಪಸ್‌ ಬಂದ್ವಿ.

ಇದೆಲ್ಲ ನಡೆದಿದ್ದು ತಿಂಗಳ ಹಿಂದೆ. ಮೊನ್ನೆ ‘ಆಪರೇಷನ್‌ ಅಲಮೇಲಮ್ಮ’ ಸಿನಿಮಾ ನೋಡಲು ಹೋಗಿದ್ದೆ. ಅಲ್ಲಿ ಕ್ಯಾಂಡಿಡ್‌ ಫೋಟೊಗ್ರಫಿಯಲ್ಲಿ ಪರಿಣತರಾದ ರಾಘವ್‌ ನನ್ನ ಕೆಲವು ಫೋಟೊ ತೆಗೆದು ಮರುದಿನ ಕಳಿಸಿದ್ದರು. ಅವರಿಗೆ ಥ್ಯಾಂಕ್ಸ್‌ ಹೇಳಲು ಸಂಪರ್ಕಿಸಿದಾಗ ಇನ್ನಷ್ಟು ಫೋಟೊಗಳನ್ನು ಕಳಿಸಿಕೊಟ್ಟರು. ಅದು ತಿಂಗಳ ಹಿಂದೆ ಯೂ ಟ್ಯೂಬ್ ಸಂದರ್ಶನ ಚಿತ್ರಗಳು! ಅವುಗಳನ್ನು ನೋಡಿ ನನಗೆ ಆಶ್ಚರ್ಯವಾಯ್ತು. ಅಲ್ಲಿ ನನ್ನ ಹಲವು ಅಪರೂಪದ ಭಾವಗಳನ್ನು ಯಾವುದೋ ಮಾಯದಲ್ಲಿ ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದುಬಿಟ್ಟಿದ್ದರು.

ರಾಘವ್‌ ಕ್ಯಾಮೆರಾ ಪರಿಣತಿಯೇ ಅಂಥದ್ದು, ಅವರು ಯಾವಾಗ ಕ್ಯಾಮೆರಾ ಹಿಡಿದಿರುತ್ತಾರೆ, ಯಾವಾಗ ಕ್ಲಿಕ್ಕಿಸುತ್ತಾರೆ ಗೊತ್ತೇ ಆಗುವುದಿಲ್ಲ. ಅವರೇ ತಂದು ತೋರಿಸಿದಾಗಲೇ ತಿಳಿಯುವುದು. ಅವರ ಛಾಯಾಗ್ರಹಣ ನಿಪುಣತೆಗೆ ಇಲ್ಲಿನ ಚಿತ್ರಗಳೇ ನಿದರ್ಶನ.

–ಮಾನ್ವಿತಾ ಹರೀಶ್‌, ನಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT