ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ ಇದೆಯೇ?

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ಮಹಿಳಾ ಗುರುಗಳು ಮತ್ತು ಮಹಿಳಾ ನೌಕರರು ಉಡುವ ಬಟ್ಟೆ ಮತ್ತು ತೊಡುವ ಚಪ್ಪಲಿಗಳನ್ನು ಕುರಿತು ಅತ್ಯಂತ ಆಕ್ರೋಶಭರಿತವಾದ ನುಡಿಗಳಿಂದ ಅವಹೇಳನ ಮಾಡುತ್ತ ‘ಇವರಿಗೆ ಸ್ವಲ್ಪ ಮರ್ಯಾದೆ ಬೇಡವೇ?’ ಎಂದು ಪ್ರಶ್ನಿಸಿರುವ ವ್ಯಕ್ತಿಗಳ ಪತ್ರವನ್ನು (ವಾ.ವಾ., ಜುಲೈ 21) ಓದಿ ಅಚ್ಚರಿಗಿಂತ ಹೆಚ್ಚಾಗಿ, ಪತ್ರವನ್ನು ಬರೆದಿರುವವರಲ್ಲಿ ಮಾನವೀಯತೆ ಇದೆಯೇ ಎಂಬ ಭಾವನೆ ನನ್ನಲ್ಲಿ ಮೂಡಿತು.

ಮಾನವೀಯತೆ ಎಂದರೆ ಸಹಮಾನವರ ಬಗ್ಗೆ ಪ್ರೀತಿ, ಕರುಣೆ ಮತ್ತು ಗೌರವದಿಂದ ನಡೆದುಕೊಳ್ಳುವಂತಹ ಸಾಮಾಜಿಕ ವರ್ತನೆಗಳು. ನಮ್ಮ ಸಮಾಜದಲ್ಲಿನ ಕುಂದುಕೊರತೆಗಳನ್ನು ಅಥವಾ ಸಮಸ್ಯೆಗಳನ್ನು ಕುರಿತು ಚಿಂತಿಸುವವರಿಗೆ, ಅದರಲ್ಲಿನ ಸರಿ–ತಪ್ಪುಗಳನ್ನು ಇಲ್ಲವೇ ಒಳಿತು–ಕೆಡುಕುಗಳನ್ನು ಜನರು ಸಮಚಿತ್ತದಿಂದ ಅರಿತುಕೊಳ್ಳುವಂತಹ ಭಾಷೆಯನ್ನು ಬಳಸಬೇಕೆಂಬ ಎಚ್ಚರವಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT