ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾಸಗಿ ಆಸ್ಪತ್ರೆಗೆ ತೆರಳಲು ಸೂಚನೆ’

ಜಿಲ್ಲಾ ಆಸ್ಪತ್ರೆ ಮುಂದೆ ಗರ್ಭಿಣಿಯ ಸಂಬಂಧಿಕರಿಂದ ಪ್ರತಿಭಟನೆ
Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳದೇ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ ಸಂಗತಿ ಸೋಮವಾರ ವರದಿಯಾಗಿದೆ.

ಮುಧೋಳ ತಾಲ್ಲೂಕಿನ ವರ್ಚುಗಲ್ ಗ್ರಾಮದ ಮಾಲಾಶ್ರೀ ಚಂಚಗಂಡಿ, ಭಾನುವಾರ ಸಂಜೆ 5 ಗಂಟೆಗೆ ಹೆರಿಗೆಗಾಗಿ ಜಿಲ್ಲಾ ಆಸ್ಪತ್ರೆಗೆ ಬಂದಿದ್ದಾರೆ. ಆದರೆ, ವೈದ್ಯರು ಅವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡದೇ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾಗಿ ಸಂಬಂಧಿಕರು ಆರೋಪಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯ ಖಂಡಿಸಿ ಮಾಧ್ಯಮದವರಿಗೆ ಕರೆ ಮಾಡಿದ ಸಂಬಂಧಿಕರು, ಸೋಮವಾರ ಬೆಳಿಗ್ಗೆಯಿಂದಲೂ ಆಸ್ಪತ್ರೆಯ ವರಾಂಡದಲ್ಲಿ ಹಾಸಿಗೆ ಇಲ್ಲದೇ ನೆಲದ ಮೇಲೆ ನೋವಿನಿಂದ ನರಳಾಡುತ್ತಿದ್ದ ಗರ್ಭಿಣಿಗೆ ಆಸ್ಪತ್ರೆಯ ಯಾವೊಬ್ಬ ಸಿಬ್ಬಂದಿಯೂ ಚಿಕಿತ್ಸೆ ನೀಡಲು ಮುಂದಾಗಿಲ್ಲ ಎಂಬ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಆಸ್ಪತ್ರೆಗೆ ದೌಡಾಯಿಸಿದ ಮಾಧ್ಯಮದವರನ್ನು ಕಾಣುತ್ತಲೇ ಎಚ್ಚೆತ್ತ ಜಿಲ್ಲಾ ಸರ್ಜನ್ ಅನಂತರೆಡ್ಡಿ, ಗರ್ಭಿಣಿಯನ್ನು ದಾಖಲಿಸಿಕೊಳ್ಳಲು ಮುಂದಾಗಿ, ಡಾ.ಜಯಶ್ರೀ ಎಮ್ಮಿ ಅವರಿಗೆ ಕರೆಮಾಡಿ ಕರೆಯಿಸಿಕೊಂಡರು. ಆ ಬಳಿಕ ಚಿಕಿತ್ಸೆ ನೀಡಲಾಯಿತು.

ಬೆಳಿಗ್ಗೆ, ಮಂಜುಳಾ ಮತ್ತು ನಾಗವ್ವ ಎಂಬ ಇಬ್ಬರು ಗರ್ಭಿಣಿಯರನ್ನು ಕೂಡ ದಾಖಲಿಸಿಕೊಳ್ಳದೇ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದಾಗಿ ತಿಳಿದುಬಂದಿದೆ.

***

‘ಖಾಸಗಿ ಆಸ್ಪತ್ರೆಗೆ ಹೋಗಲು ಸೂಚಿಸಿಲ್ಲ’
ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿಲ್ಲ. ನಮ್ಮಲ್ಲಿ ವೈದ್ಯರ ಕೊರತೆ ಇದ್ದು, ಮೂರು ಜನ ಮಾತ್ರ ಸ್ತ್ರೀರೋಗ ತಜ್ಞರಿದ್ದಾರೆ. ಈ ವಿಷಯವನ್ನು ಜಿಲ್ಲಾ ಆರೋಗ್ಯ ಸಮಿತಿಯ ಗಮನಕ್ಕೆ ತಂದಿದ್ದು, ಹೆಚ್ಚುವರಿ ವೈದ್ಯರ ನೆರವು ನೀಡುವ ಭರವಸೆ ಸಿಕ್ಕಿದೆ ಎಂದು  ಜಿಲ್ಲಾ ಸರ್ಜನ್ ಅನಂತರಡ್ಡಿ ಅವರು
ತಿಳಿಸಿದ್ದಾರೆ.

***

ಚಿಕಿತ್ಸೆಗಾಗಿ ಭಾನುವಾರ ಸಂಜೆಯೇ ಬಂದಿದ್ದೇವೆ. ಯಾವುದೇ ವೈದ್ಯರು ಹಾಗೂ ಸಿಬ್ಬಂದಿ ಚಿಕಿತ್ಸೆ ನೀಡಲು ಮುಂದಾಗಿಲ್ಲ. ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದರು.
ಮೀನಾಕ್ಷಮ್ಮ,  ಗರ್ಭಿಣಿಯ ಸಂಬಂಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT