ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿದಾನಂದ ಕಾಮತ್ ಕಾಸರಗೋಡು ನಿಧನ

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ಪುತ್ತೂರು: ಹಿರಿಯ ರಂಗಭೂಮಿ ಕಲಾವಿದ, ಚಲನಚಿತ್ರ ನಟ ಚಿದಾನಂದ ಕಾಮತ್ ಕಾಸರಗೋಡು (60) ಸೋಮವಾರ ನಸುಕಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ.

10 ವರ್ಷಗಳ ಹಿಂದೆ ಇಲ್ಲಿ ‘ಬೊಳುವಾರು ಸಾಂಸ್ಕೃತಿಕ ಕಲಾಕೇಂದ್ರ’ ಆರಂಭಿಸಿದ್ದ ಅವರು ನೂರಾರು ಮಕ್ಕಳಿಗೆ ವೇದಿಕೆ ಕಲ್ಪಿಸಿದ್ದರು.

ಪ್ರೇಮಾ ಕಾರಂತ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಚಿತ್ರ  ‘ಫಣಿಯಮ್ಮ’ ದಲ್ಲಿ ಕಂಠೀ ಭಟ್ಟನ ಪಾತ್ರ ವಹಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.

‘ಅಂತರಂಗದ ಮೃದಂಗ’ ‘ಮಡಿಲ ಮಂದಾರ’ ‘ಊರಿನ ಮಾರಿ’ಯಲ್ಲಿ  ‘ಪ್ರೀತಿ ಎಂಬ ಮಾಯೆ’  ‘ಗುಗ್ಗು ನನ್ನ ಮಕ್ಳು’ , ‘ಮಂಗಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ’ ಮೊದಲಾದ ಕನ್ನಡ ಧಾರಾವಾಹಿ ಮತ್ತು ‘ನಮ ತೆಲಿಪುಗ’ ‘ಬಾಬಣ್ಣ ಬೂಬಣ್ಣ’ ‘ಗೊತ್ತಾನಗ ಪೊರ್ತಾಂಡ್’ ಮೊದಲಾದ ತುಳು ಧಾರಾವಾಹಿ, ‘ಸತ್ಯೊದ ಕಲ್ಕುಡ-ಕಲ್ಲುರ್ಟಿ’, ಋಣ, ‘ಸಸ್ಪೆನ್ಸ್’ ಮೊದಲಾದ ಕಿರು ಚಿತ್ರಗಳಲ್ಲಿ ಹಾಗೂ  ಕೊಂಕಣಿ ಭಾಷೆ ‘ಉಜ್ಜಾಡು’, ಕನ್ನಡದ ಮಕ್ಕಳ ಚಿತ್ರ ‘ಕನಸು ಕಣ್ಣು ತೆರೆದಾಗ’ ತುಳುವಿನ ‘ಗುಡ್ಡೆದ ಭೂತ’, ‘ಪನೋಡಾ ಬೊಡ್ಚಾ’ ಚಿತ್ರಗಳಲ್ಲಿ ನಟಿಸಿರುವ ಅವರು ಇನ್ನಷ್ಟೇ ತೆರೆಕಾಣಬೇಕಾಗಿರುವ ಕೊಂಕಣಿ ಚಿತ್ರ ‘ಅಂತು’ ನಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT