ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಚಿತ್ ದಾಳಿಗೆ ಅಸ್ಸಾಂ ತತ್ತರ

Last Updated 24 ಜುಲೈ 2017, 18:41 IST
ಅಕ್ಷರ ಗಾತ್ರ

ಬೆಂಗಳೂರು: ಜೆ. ಸುಚಿತ್‌ ಅವರ ಪರಿ ಣಾಮಕಾರಿ ದಾಳಿಯ ನೆರವಿನಿಂದ ಕೆಎಸ್‌ಸಿಎ ಇಲೆವೆನ್ ತಂಡ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ ಯಲ್ಲಿ ಅಸ್ಸಾಂ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದೆ.

76.5 ಓವರ್‌ಗಳಲ್ಲಿ ಅಸ್ಸಾಂ ತಂಡ ಎಲ್ಲಾ ವಿಕೆಟ್ ಕಳೆದುಕೊಂಡು 209ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ತಂಡದ ವಾಸಿಕರ್‌ ರೆಹಮಾನ್‌ (53) ಹಾಗೂ ಅಬು ನೆಚಿಮ್‌ ಅಹಮ್ಮದ್ (45) ತಂಡವನ್ನು 200ರ ಗಡಿ ದಾಟಿಸುವಲ್ಲಿ ನೆರವಾದರು. ಉಳಿದ ಬ್ಯಾಟ್ಸ್‌ಮನ್‌ಗಳು ಕೆಎಸ್‌ಸಿಎ ಇವೆಲೆನ್‌ ತಂಡದ ಬೌಲರ್‌ ಗಳ ದಾಳಿಗೆ ತತ್ತರಿಸಿದರು.

ಕೇವಲ 32ರನ್‌ಗಳನ್ನು ನೀಡಿದ ಸುಚಿತ್‌ 4 ವಿಕೆಟ್‌ ಕಬಳಿಸಿ ಮಿಂಚಿದರು. ರೋನಿತ್ ಮೋರೆ 63 ರನ್‌ಗಳಿಗೆ 3 ವಿಕೆಟ್ ಪಡೆದರು. ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿ ರುವ ಅಸ್ಸಾಂ 45 ಓವರ್‌ಗಳಲ್ಲಿ 3ವಿಕೆಟ್‌ಗಳಿಗೆ 137ರನ್‌ ಗಳಿಸಿ ಸಂಕಷ್ಟದಲ್ಲಿದೆ. ಮೊದಲ ಇನಿಂಗ್ಸ್‌ನಲ್ಲಿ ಕೆಎಸ್‌ಸಿಎ ತಂಡ 7 ವಿಕೆಟ್‌ಗೆ 605 ರನ್‌ಗಳಿಸಿ ಡಿಕ್ಲೇರ್ಡ್ ಮಾಡಿಕೊಂಡಿತ್ತು.

ಸಂಕ್ಷಿಪ್ತ ಸ್ಕೋರು: ಕೆಎಸ್‌ಸಿಎ ಇಲೆವೆನ್: 143.5 ಓವರ್‌ಗಳಲ್ಲಿ 7 ವಿಕೆಟ್‌ಗೆ 605. ಅಸ್ಸಾಂ ಸಂಸ್ಥೆ: 76.5 ಓವರ್‌ಗಳಲ್ಲಿ 209 (ವಾಸಿಕರ್‌ ರೆಹ ಮಾನ್53, ಅಬು ನೆಚಿಮ್‌ ಅಹಮ್ಮದ್ 45; ರೋನಿತ್‌ ಮೋರೆ 63ಕ್ಕೆ3, ಜೆ. ಸುಚಿತ್‌ 32ಕ್ಕೆ4). ದ್ವಿತೀಯ ಇನಿಂಗ್ಸ್‌: 45 ಓವರ್‌ಗಳಲ್ಲಿ 3 ವಿಕೆಟ್‌ಗೆ 137 (ರಿಶವ್‌ ದಾಸ್‌ 67, ತರಿಂದರ್ ಸಿಂಗ್ 35).

ಬಂಗಾಳ ಸಂಸ್ಥೆ: 130.2 ಓವರ್‌ಗಳಲ್ಲಿ 426. ಕೆಎಸ್‌ಸಿಎ ಕೋಲ್ಟ್ಸ್‌:139 ಓವರ್‌ಗಳಲ್ಲಿ 7 ವಿಕೆಟ್‌ಗೆ 139 (ಡಿ ನಿಶ್ಚಲ್‌ 101, ನಾಗ ಭರತ್‌ 59,ವೈಶಾಖ್‌ 30, ಕೆನಿಶ್‌ ಸೇತ್‌ 59ಕ್ಕೆ3, ಅಮಿತ್ ಕುಲಿಯಾ 83ಕ್ಕೆ2).

ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್‌: 96.5 ಓವರ್‌ಗಳಲ್ಲಿ 393. ದ್ವಿತೀಯ ಇನಿಂಗ್ಸ್‌: 49 ಓವರ್‌ಗಳಲ್ಲಿ 3 ವಿಕೆಟ್‌ಗೆ 156 (ಕೆ.ಬಿ ಪವನ್‌ 61, ಅರ್ಜುನ್ ಹೊಯ್ಸಳ 21, ಕುನಾಲ್‌ ಕಪೂರ್‌ 20).  ಆಂಧ್ರ ಸಂಸ್ಥೆ: 119.1 ಓವರ್‌ಗಳಲ್ಲಿ 461 (ಭರತ್‌ 158;ಮಿತ್ರಾಕಾಂತ್‌ ಯಾದವ್‌ 113ಕ್ಕೆ5, ಟಿ. ಪ್ರದೀಪ್‌ 95ಕ್ಕೆ3).

ಹರಿಯಾಣ ಸಂಸ್ಥೆ: 108.4 ಓವರ್‌ಗಳಲ್ಲಿ 458. ದ್ವಿತೀಯ ಇನಿಂಗ್ಸ್‌: 60.5 ಓವರ್‌ಗಳಲ್ಲಿ 3 ವಿಕೆಟ್‌ಗೆ 294. ಮಧ್ಯಪ್ರದೇಶ ಸಂಸ್ಥೆ: 85.5 ಓವರ್‌ಗಳಲ್ಲಿ 245. ದ್ವಿತೀಯ ಇನಿಂಗ್ಸ್‌: 8 ಓವರ್‌ಗಳಲ್ಲಿ 8.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT