ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದ ಸೀಸೆಯ ಮೇಲೆ ಎಚ್ಚರಿಕೆಯ ಚಿತ್ರ!

ಕುಡಿದು ವಾಹನ ಚಾಲನೆ ವಿರುದ್ಧ ಜಾಗೃತಿಗೆ ಹೊಸ ತಂತ್ರ; ಎರಡು ಎನ್‌ಜಿಒಗಳ ಪ್ರಯತ್ನದ ಫಲ
Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಧೂಮಪಾನ, ತಂಬಾಕು ಸೇವನೆ ದುಷ್ಪರಿಣಾಮ ಬಿಂಬಿಸುವ ಸಿಗರೇಟ್‌, ಗುಟ್ಕಾ ಪೊಟ್ಟಣಗಳ ಮೇಲಿನ  ಚಿತ್ರಗಳ ಮಾದರಿಯಲ್ಲಿಯೇ  ಮದ್ಯದ ಸೀಸೆಗಳ ಮೇಲೂ ಚಿತ್ರಗಳು ರಾರಾಜಿಸಲಿವೆ.

ಭಾರತದಲ್ಲಿ ಪ್ರತಿವರ್ಷ ಸಂಭವಿಸುವ  ರಸ್ತೆ ಅಪಘಾತಗಳಲ್ಲಿ ಕುಡಿದು ವಾಹನ ಚಾಲನೆ ಮಾಡುವವರ ಸಾವಿನ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ.
ಹೀಗಾಗಿ ಈ ಬಗ್ಗೆ  ಜಾಗೃತಿ ಮೂಡಿಸುವ ಚಿತ್ರಗಳನ್ನು ಮದ್ಯದ ಬಾಟಲುಗಳ ಮೇಲೆ ಮುದ್ರಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮುಂದಾಗಿದೆ.

ಮದ್ಯದ ಸೀಸೆಗಳ ಮೇಲೆ ಸಂದೇಶ ಚಿತ್ರಗಳನ್ನು ಕಡ್ಡಾಯವಾಗಿ ಮುದ್ರಿಸುವಂತೆ  ಕೋರಿ ಕಮ್ಯುನಿಟಿ ಅಗೇನಸ್ಟ್‌ ಡ್ರಂಕನ್‌ ಡ್ರೈವಿಂಗ್‌ (ಸಿಎಡಿಡಿ) ಸಂಸ್ಥೆ ಸೇರಿ ಎರಡು ಎನ್‌ಜಿಒಗಳು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದವು.

ಈ ವಿಷಯ ಸರ್ಕಾರಕ್ಕೆ ಸಂಬಂಧಿಸಿದ್ದು, ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಲು ನಿರಾಕರಿಸಿತ್ತು. ಆದರೆ, ಈ ಎರಡು ಅರ್ಜಿಗಳನ್ನು ಸಲಹೆ ಎಂದು ಪರಿಗಣಿಸುವಂತೆ ಎಫ್ಎಸ್‌ಎಸ್ಎಐಗೆ ಹೈಕೋರ್ಟ್ ಸೂಚನೆ ನೀಡಿತ್ತು. 

ಹೈಕೋರ್ಟ್ ಆದೇಶದಂತೆ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳನ್ನು ಕಂಡ ಸಿಎಡಿಡಿ ಸ್ವಯಂ ಸೇವಾಸಂಸ್ಥೆ  ಸದಸ್ಯರು  ಮದ್ಯದ  ಸೀಸೆಗಳ ಮೇಲೆ ಮುದ್ರಿಸಲು ಬೇಕಾದ  ನಾಲ್ಕು ಎಚ್ಚರಿಕೆ ಸಂದೇಶ ಮತ್ತು ಚಿತ್ರಗಳನ್ನು ಪ್ರಾಧಿಕಾರಕ್ಕೆ ನೀಡಿದ್ದಾರೆ.

ಕುಡಿದು ವಾಹನ ಚಾಲನೆ ಮಾಡುವುದರ  ದುಷ್ಪರಿಣಾಮಗಳನ್ನು ಈ ಚಿತ್ರಗಳು ಮನಮುಟ್ಟುವಂತೆ ವಿವರಿಸುತ್ತವೆ. ಯಾವುದೇ ಭಾಷೆಯ ಹಂಗಿಲ್ಲದೆ ಸರಳ ಮತ್ತು ಸುಲಭವಾಗಿ ಈ ಚಿತ್ರಗಳನ್ನು ಅರ್ಥ ಮಾಡಿಕೊಳ್ಳಬಹುದು ಎಂದು ಸಿಎಡಿಡಿ ಸಂಸ್ಥಾಪಕ ಪ್ರಿನ್ಸ್‌ ಸಿಂಘಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT