ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಮ್ಮನ ಕರೆದೊಯ್ಯಲು ಏರ್‌ ಆಂಬುಲೆನ್ಸ್ ಬಳಕೆ

Last Updated 24 ಜುಲೈ 2017, 19:54 IST
ಅಕ್ಷರ ಗಾತ್ರ

ಬೆಂಗಳೂರು: ಹೃದಯ ಕಾಯಿಲೆ (ಬ್ರಾಂಕೈಟಿಸ್‌)ನಿಂದ ತೀವ್ರವಾಗಿ ಬಳಲುತಿದ್ದ 2 ತಿಂಗಳ ಕೂಸನ್ನು ನಗರದ ಎಂ.ಎಸ್‌.ರಾಮಯ್ಯ ಆಸ್ಪತ್ರೆಯಿಂದ ನಾರಾಯಣ ಹೆಲ್ತ್‌ ಸಿಟಿಗೆ ಏರ್‌ ಆಂಬುಲೆನ್ಸ್‌ ಮೂಲಕ ಕರೆದೊಯ್ಯಲಾಯಿತು.

ನಾರಾಯಣ ಹೆಲ್ತ್‌ ಸಿಟಿಯಲ್ಲಿ ಹೆಣ್ಣು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಂದಮ್ಮನನ್ನು ಹೊತ್ತು ಹೊರಟ ಏರ್‌ ಆಂಬುಲೆನ್ಸ್‌ ಕೇವಲ 7 ನಿಮಿಷದಲ್ಲಿ ನಾರಾಯಣ ಹೆಲ್ತ್‌ ಸಿಟಿ ತಲುಪಿತು.

‘ಮಗುವನ್ನು ರಸ್ತೆ ಮೂಲಕ ಕರೆದುಕೊಂಡು ಹೋಗಿದ್ದರೆ, ಒಂದೂವರೆ ತಾಸು ಹಿಡಿಯುತ್ತಿತ್ತು. ಕೂಸಿನ ಜೀವಕ್ಕೂ ಆಪತ್ತು ಒದಗುವ ಸಂಭವವಿತ್ತು. ಏರ್‌ ಆಂಬುಲೆನ್ಸ್‌ನಿಂದ ತುಂಬ ಅನುಕೂಲವಾಯಿತು’ ಎಂದು ಮಗುವಿಗೆ ಚಿಕಿತ್ಸೆ ನೀಡುತ್ತಿರುವ ಮಕ್ಕಳ ತಜ್ಞ ಡಾ.ಹಿರೇಮಠ ಸಾಗರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT