ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆ ಪ್ರಕರಣ: ಮೂವರ ವಿರುದ್ಧ ಪ್ರಕರಣ ದಾಖಲು

Last Updated 25 ಜುಲೈ 2017, 9:24 IST
ಅಕ್ಷರ ಗಾತ್ರ

ಉಳ್ಳಾಲ: ಉಳ್ಳಾಲದ ಮುಕ್ಕ ಚೇರಿ ಜುಮಾ ಮಸೀದಿಯ ಆಡಳಿತ ಸಮಿತಿ ಸದಸ್ಯ ಅಬ್ದುಲ್ ಖಾದರ್  ಅವರ ಮೇಲೆ ಎಸ್ಸೆಸ್ಸೆಫ್ ಮುಖಂಡ  ಬಳ್ಳಾರಿ ಅಶ್ರಫ್ , ಟಾರ್ಗೆಟ್ ರೌಡಿ ಗ್ರೂಪಿನ ಸಕ್ರಿಯ ಸದಸ್ಯ  ರೌಡಿ ಮಂದ ಆಶೀಫ್,   ಅಹ್ಸನಿ ಬಶೀರ್, ರಿಯಾಝ್, ಮುಂತಾದವರಿದ್ದ ತಂಡ ಗಂಭೀರ ಹಲ್ಲೆ ನಡೆಸಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಾಳು ಖಾದರ್ ಅವರ ಕಾಲಿಗೆ ತೀವ್ರವಾದ ಗಾಯವಾಗಿದ್ದು, ಆಸ್ಪತ್ರೆ ಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಸೀದಿ ಆಡಳಿತ  ಸಮಿತಿಯ ಸಭೆ ನಡೆಯುತ್ತಿದ್ದ  ಸಂದರ್ಭ ಏಕಾಏಕಿ ಸಭೆಗೆ ಅಡ್ಡಿಯುನ್ನುಂಟು ಮಾ ಡಿದ 25ಕ್ಕೂ  ಹೆಚ್ಚಿನ ಜನರಿದ್ದ   ತಂಡ ಸಭೆಯ ತೀರ್ಮಾನ ಬದಲಿಸಲು ಒತ್ತಾ ಯಿಸಿತ್ತು.  ಅದು ಸಾಧ್ಯವಿಲ್ಲ ಎಂದು ಆಡಳಿತ ಸಮಿತಿಯ ಖಾದರ್ ವಿರೋ ಧಿಸಿದಾಗ ತಂಡ  ಹಲ್ಲೆ ನಡೆಸಿದೆ.

‘ಉಳ್ಳಾಲ ದರ್ಗಾ ಸಮಿತಿ ಪ್ರಕಟಿಸಿದ ನೂತನ ಮದ್ರಸ ಪಠ್ಯ ಪುಸ್ತಕಗಳನ್ನು ಸ್ವಾಗತಿಸಿ, ಮುಕ್ಕಚೇರಿ ಮದ್ರಸದಲ್ಲಿ ಹೊಸ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡುವ ತೀರ್ಮಾನವನ್ನು ಬಹುಮತ ದಿಂದ ತೀರ್ಮಾನಿಸಿದ ಕ್ರಮದ ವಿರುದ್ಧ ಸಭೆ ಬಹಿಷ್ಕರಿಸಿ ಹೊರ ನಡೆದ ಬಳ್ಳಾರಿ ಅಶ್ರಫ್ ತನ್ನ ಬೆಂಬಲಿಗರೊಂದಿಗೆ ಈ ಹಲ್ಲೆ ನಡೆಸಿದ್ದಾನೆ’ ಎಂದು ದೂರಲಾಗಿದೆ.

ಕೆಲ ದಿನಗಳ ಹಿಂದೆ  ದರ್ಗಾ ಕಾಂಪೌಂಡಿನಲ್ಲಿ ನಡೆದ ಗಲಭೆಯಲ್ಲಿ ಮತ್ತು  2013ರಲ್ಲಿ  ಮೇಲಂಗಡಿ ಮೊಹಿಯ್ಯುದ್ದೀನ್ ಜುಮಾ ಮಸೀದಿ ಜುಮಾ ಆರಂಭದ ದಿನ ಮಸೀದಿಗೆ ಅಕ್ರಮವಾಗಿ ಪ್ರವೇಶಿಸಿ ಸಂಶುದ್ದೀನ್ ಮತ್ತು ಸೌಹಾದ್ ಎಂಬವರನ್ನು ಚೂರಿ ಯಿಂದ ಗಂಭೀರವಾಗಿ ಗಾಯಗೊಳಿಸಿದ  ಪ್ರಕರಣದಲ್ಲಿ  ಬಳ್ಳಾರಿ ಅಶ್ರಫ್ ಎರಡನೇ ಆರೋಪಿಯಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT