ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೂ ಬಂತು ‘ಭೂಮಿ’ ಫಸ್ಟ್‌ ಲುಕ್‌

Last Updated 25 ಜುಲೈ 2017, 19:30 IST
ಅಕ್ಷರ ಗಾತ್ರ

ಸಂಜೂ ಭಾಯಿ ಜೈಲಿನಿಂದ ಹೊರಬಂದ ಮೇಲೆ ಮೊದಲ ಬಾರಿಗೆ ನಟಿಸಿರುವ ‘ಭೂಮಿ’ ಚಿತ್ರದ ಟೀಸರ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಮೂಗು ಮತ್ತು ಬಾಯಿಯಿಂದ ಧಾರಾಕಾರ ರಕ್ತ ಸೋರುತ್ತಿರುವ ಸಂಜಯ್‌ ದತ್‌ನ ಚಿತ್ರ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿದೆ.

‘ಭೂಮಿ’ ತಂದೆ ಮತ್ತು ಮಗಳ ಕತೆಯನ್ನೊಳಗೊಂಡಿದೆ. ಚಿತ್ರದ ಈ ‘ಫಸ್ಟ್‌ ಲುಕ್‌’ಗಾಗಿ ಕಾಯುತ್ತಿದ್ದ ಸಂಜೂ ಭಾಯಿ ಅಭಿಮಾನಿಗಳಿಗೆ ಈಗ ದಿಲ್‌ಖುಷ್‌ ಆಗಿದೆ.

ಪೋಸ್ಟರ್‌ ಕಪ್ಪು ಬಿಳುಪು ಬಣ್ಣದಲ್ಲಿದ್ದು, ಇದರಿಂದಾಗಿ ಸಂಜಯ್‌ ಬಾಯಿಯಲ್ಲಿ ಸೋರುತ್ತಿರುವ ರಕ್ತ ಕಣ್ಣಿಗೆ ರಾಚುವಂತೆ ಕಾಣುತ್ತಿದೆ. ಟೀಸರ್‌ ಪೋಸ್ಟರ್‌ ಬಹುಜನರ ಮೆಚ್ಚುಗೆ ಗಳಿಸಲು ಇದೂ ಕಾರಣವೆನ್ನಬಹುದು.

‘ತಂದೆ–ಮಗಳ ಭಾವನಾತ್ಮಕ ಕತೆಯನ್ನೊಳಗೊಂಡ ಸಿನಿಮಾವಿದು. ಚಿತ್ರೀಕರಣದ ಮೊದಲನೇ ದಿನದಿಂದಲೂ ನಾನು ಅತ್ಯಂತ ಖುಷಿಯಿಂದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದೆ. ಇದೀಗ ಸಿನಿಮಾ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದೇನೆ’ ಎಂದು ಟೀಸರ್‌ ಪೋಸ್ಟರ್‌ ಬಿಡುಗಡೆಯಾದ ಬೆನ್ನಲ್ಲಿ ಸಂಜಯ್‌ ದತ್‌ ಹೇಳಿಕೊಂಡಿದ್ದಾರೆ.

ಆಗ್ರಾ ಮತ್ತು ಚಂಬಲ್‌ ಸುತ್ತಮುತ್ತ ಸಿನಿಮಾದ ಬಹುತೇಕ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ. ಅದಿತಿ ರಾವ್ ಹೈದರಿ, ಶೇಖರ್‌ ಸುಮನ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT