ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ ‘ಭಾಗ್’ ಈಗ ಕೈದಿ ಫರ್‍ಹಾನ್‌ ಹೊಸ ಅವತಾರ

Last Updated 25 ಜುಲೈ 2017, 19:30 IST
ಅಕ್ಷರ ಗಾತ್ರ

ಫರ್‍ಹಾನ್‌ ಅಖ್ತರ್ ಅಭಿನಯದ ಹಿಂದಿ ಸಿನಿಮಾ ‘ಲಖನೌ ಸೆಂಟ್ರಲ್‌’ನ ಫಸ್ಟ್‌ಲುಕ್‌ ಪೋಸ್ಟರ್‌ ಅನ್ನು ಅಂತರ್ಜಾಲದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್‌ ನೋಡಿದ ಅಭಿಮಾನಿಗಳನ್ನು ಸಿನಿಮಾದ ಟ್ರೇಲರ್‌ ಬಿಡುಗಡೆಗಾಗಿ ಕಾತರದಿಂದ ಕಾಯುವಂತೆ ಮಾಡಿದೆ.

ರಂಜಿತ್‌ ತಿವಾರಿ ನಿರ್ದೇಶನದ ಈ ಚಿತ್ರ, ಲಖನೌ ಸೆಂಟ್ರಲ್‌ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬನ ಜೀವನವನ್ನು ಆಧರಿಸಿದ ಕತೆ ಹೊಂದಿದೆ. ನಟ ಫರ್‍ಹಾನ್ ಅಖ್ತರ್ ಅವರು, ಕೈದಿ ಕಿಶನ್‌ ಮೋಹನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೈದಿಯ ಹೆಸರು, ಕೈದಿಯ ಸಂಖ್ಯೆ ಇರುವ ಸ್ಲೇಟನ್ನು ಫರ್‍ಹಾನ್‌ ಅವರು ಕೈಯಲ್ಲಿ ಹಿಡಿದು ನಿಂತಿರುವ ಪೋಸ್ಟರ್‌ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುವಂತೆ ಮಾಡಿದೆ. ಲಖನೌ ಸೆಂಟ್ರಲ್‌ನಲ್ಲಿ ಡಯಾನ ಪೆಂಟಿ, ಗಿಪ್ಪಿ ಗಿರ್ವಾಲ್‌, ದೀಪಕ್‌ ದೊಬ್ರಿಯಲ್‌, ರೋನಿತ್‌ ರಾಯ್‌, ರಾಜೇಶ್‌ ಶರ್ಮ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸೆಪ್ಟೆಂಬರ್‌ 15ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT