ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಟ್‌ಗೆ ಫ್ರೆಂಚ್‌ ಫ್ರೈಸ್‌ ತ್ಯಾಗ

Last Updated 25 ಜುಲೈ 2017, 19:30 IST
ಅಕ್ಷರ ಗಾತ್ರ

‘ಸ್ಟೂಡೆಂಟ್‌ ಆಫ್‌ ದಿ ಇಯರ್‌‘ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದವರು ನಟಿ ಅಲಿಯಾ ಭಟ್‌. ಸತತ ಹಿಟ್‌ ಚಿತ್ರಗಳನ್ನು ನೀಡುವ ಮೂಲಕ ಚಿತ್ರರಂಗದಲ್ಲಿ ಭರವಸೆಯ ನಟಿ ಎಂದು ಗುರುತಿಸಿಕೊಂಡಿದ್ದಾರೆ. ಸಪೂರ ದೇಹ, ಆಕರ್ಷಕ ಮೈಮಾಟ ಹೊಂದಿರುವ ಅಲಿಯಾ ಸಿನಿಮಾಕ್ಕೂ ಆಯ್ಕೆಯಾಗುವ ಮೊದಲು ದುಂಡು ದುಂಡಾಗಿದ್ದರು ಎಂದರೆ ಯಾರೂ ನಂಬಲ್ಲ.

ಸಿನಿಮಾಕ್ಕೆ ಬರುವ ಮುಂಚೆ ಅಲಿಯಾ ಅವರ ತೂಕ ಬರೋಬ್ಬರಿ 68 ಕೆ.ಜಿ. ನಿರ್ದೇಶಕ ಕರಣ್‌ ಜೋಹರ್‌ ಅವರು ತಮ್ಮ ‘ಸ್ಟೂಡೆಂಟ್‌ ಆಫ್‌ ದಿ ಇಯರ್‌‘ ಚಿತ್ರಕ್ಕೆ ಇವರನ್ನು ನಾಯಕಿಯಾಗಿ ಆಯ್ಕೆ ಮಾಡಿದ ಮೇಲೆ ಆರು ತಿಂಗಳಲ್ಲಿ 20 ಕೆ.ಜಿ ಸಣ್ಣ ಆಗುವಂತೆ ಷರತ್ತು ವಿಧಿಸಿದ್ದರು. ನಟಿ ಆಗಬೇಕೆಂಬುದು ಬಾಲ್ಯದ ಕನಸು. ಕರಣ್‌ ಜೋಹರ್ ಮಾತನ್ನು ಗಂಭೀರವಾಗಿ ತೆಗದುಕೊಂಡು ಸಣ್ಣಗಾಗಿದ್ದರು.

ಇಂತಿಪ್ಪ ಅಲಿಯಾ ಭಟ್‌ ಈಗ ಕಠಿಣ ಡಯಟ್‌ ಪ್ಲಾನ್‌ ಹಾಗೂ ವ್ಯಾಯಾಮಗಳನ್ನು ಮಾಡುತ್ತಾರೆ. ಆಕೆಯ ಪ್ರತಿದಿನದ ವ್ಯಾಯಾಮ ತರಬೇತಿ, ಸಮುದ್ರ ತೀರದಲ್ಲಿ ಓಟ, ಈಜು, ಕಿಕ್‌ ಬಾಕ್ಸಿಂಗ್‌ ಮಾಡುತ್ತಾರೆ. ಇದಲ್ಲದೇ ಬೆಳಿಗ್ಗೆ ಎದ್ದ ಬಳಿಕ ಟ್ರೆಡ್‌ಮಿಲ್‌ನಲ್ಲಿ ಓಟ, ಡಂಬೆಲ್‌ ವ್ಯಾಯಾಮಗಳು, ಪುಶ್‌ ಅಪ್ಸ್ ಒಂದು ದಿನವೂ ತಪ್ಪಿಸಲಾರರು.

ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಜಿಮ್‌ಗೆ ಹೋಗುತ್ತಾರೆ. ಪ್ರತಿದಿನವೂ 30ರಿಂದ 40 ನಿಮಿಷಗಳ ಕಾಲ ಕಾರ್ಡಿಯೊ, ಪ್ರತಿದಿನ ಯೋಗ ಮಾಡುತ್ತಾರೆ. ವಾರದಲ್ಲಿ ಎರಡು ಬಾರಿ ಅಷ್ಟಾಂಗ ಯೋಗ ಮಾಡುತ್ತಾರೆ. ನೃತ್ಯವನ್ನು ತುಂಬ ಇಷ್ಟ ಪಡುವ ಅಲಿಯಾ ಬ್ಯಾಲೆ, ಕಥಕ್‌ ಅಭ್ಯಾಸ ಮಾಡುತ್ತಾರೆ. ತಮ್ಮ ಇಷ್ಟದ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸಿರುವ ಅವರು ಈಗಲೂ ಕಟ್ಟುನಿಟ್ಟಿನ ಡಯಟ್‌ ಪ್ಲಾನ್‌ ಅನುಸರಿಸುತ್ತಾರೆ.

‘ನಾನು ನನ್ನ ಫಿಟ್‌ನೆಸ್‌ ತರಬೇತುದಾರರು ಹೇಳಿದಂತೆ ಡಯಟ್‌ ಮಾಡುತ್ತೇನೆ. ತರಕಾರಿ ಹಾಗೂ ಕೋಳಿ ಮಾಂಸದ ಖಾದ್ಯಗಳನ್ನು ಹೆಚ್ಚು ಸೇವಿಸುತ್ತೇನೆ’ ಎಂದು ಅಲಿಯಾ ಭಟ್‌ ಹೇಳಿಕೊಂಡಿದ್ದಾರೆ. ಅತಿ ಹೆಚ್ಚು ನೀರು ಕುಡಿಯುವ ಇವರು ಸಕ್ಕರೆ, ಕೊಬ್ಬು, ಎಣ್ಣೆ ಹಾಗೂ ಜಂಕ್‌ ಆಹಾರಗಳಿಂದ ದೂರ. ಡಯೆಟ್‌ಗಾಗಿ ತಮ್ಮ ಫೇವರಿಟ್‌ ’ಫ್ರೆಂಚ್‌ ಫ್ರೈಸ್‌’ ತ್ಯಾಗ ಮಾಡಿದ್ದೇನೆ ಎಂದು ಅಲಿಯಾ ಬೇಸರಿಸುತ್ತಾರೆ. ಆದರೆ ’ಐಸ್‌ಕ್ರೀಂ, ಸ್ವೀಟ್ಸ್‌ ನನ್ನ ದೌರ್ಬಲ್ಯ. ಅದನ್ನು ತಿನ್ನದೇ ಇರುವುದಿಲ್ಲ’ ಎನ್ನುತ್ತಾರೆ.

ಅಲಿಯಾ ಬ್ರೇಕ್‌ಫಾಸ್ಟ್: ಬ್ರೆಡ್‌ ಟೋಸ್ಟ್, ಕಾರ್ನ್‌ಫ್ಲೆಕ್ಸ್‌, ಪೋಹಾ, ತರಕಾರಿ, ಮೊಟ್ಟೆಯ ಬಿಳಿಭಾಗ ಸೇವಿಸುತ್ತಾರೆ. ಇದರ ಜೊತೆಗೆ ಸಕ್ಕರೆ ಹಾಕದ ಒಂದು ಕಪ್‌ ಕಾಫಿ ಅಥವಾ ಟೀ ಕುಡಿಯುತ್ತಾರೆ.

10 ಗಂಟೆಗೆ: ಒಂದು ಗ್ಲಾಸ್‌ ತರಕಾರಿ ಜ್ಯೂಸ್‌, ಇಡ್ಲಿ–ಸಾಂಬಾರ್‌

ಮಧ್ಯಾಹ್ನ: ಡಾಲ್‌, ರೋಟಿ ಹಾಗೂ ಅರ್ಧ ಬೇಯಿಸಿದ ತರಕಾರಿಗಳು.

ಸಂಜೆ: ಹಣ್ಣುಗಳು, ಒಂದು ಕಪ್‌ ಕಾಫಿ ಅಥವಾ ಟೀ.

ರಾತ್ರಿ: ರೋಟಿ, ತರಕಾರಿ, ಸಣ್ಣ ಕಪ್‌ ಅನ್ನ.

**

‌ಹುಟ್ಟಿದ ದಿನ: 15 ಮಾರ್ಚ್‌ 1993

ಎತ್ತರ: 5 ಅಡಿ ಮೂರು ಇಂಚು

ತೂಕ: 54 ಕೆ.ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT