ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ದಿನಗಳಂತೆಯೇ ಇದೆ: ಸಿನಿಮಾ ನೋಡಿದ 97 ವರ್ಷದ 'ಡನ್‌ಕಿರ್ಕ್‌' ಯೋಧ

Last Updated 26 ಜುಲೈ 2017, 11:12 IST
ಅಕ್ಷರ ಗಾತ್ರ
ADVERTISEMENT

ಹಾಲಿವುಡ್‌: ಎರಡನೇ ಮಹಾಯುದ್ಧದ ಸಮಯದಲ್ಲಿ ಲಕ್ಷಾಂತರ ಯೋಧರ ಉಳಿವಿನಲ್ಲಿ ಶ್ರಮಿಸಿದ್ದ ರಾಯಲ್‌ ನೇವಿಯ 97 ವರ್ಷದ ಕೆನ್‌ ಸ್ಟರ್ಡಿ ಕ್ರಿಸ್ಟೊಫರ್‌ ನೊಲಾನ್‌ ನಿರ್ದೇಶನ ‘ಡನ್‌ಕಿರ್ಕ್‌’ ಸಿನಿಮಾ ವೀಕ್ಷಿಸಿ ಭಾವುಕರಾದರು. ಈ ಕುರಿತು ಗ್ಲೋಬಲ್‌ ನ್ಯೂಸ್ ವರದಿ ಮಾಡಿದೆ.

‘ಥೇಟ್‌ ಆ ದಿನಗಳಂತೆಯೇ ಇದೆ. ಮತ್ತೆ ನಾನು ಅದನ್ನು ಕಾಣುತ್ತೇನೆಂದು ಯೋಚಿಸಿರಲಿಲ್ಲ’ ಎಂದು ಕೆನ್‌ ಸ್ಟರ್ಡಿ ಕಣ್ತುಂಬಿಕೊಂಡರು. ಎರಡನೇ ಮಹಾಯುದ್ಧದ ಕಥೆಯನ್ನು ಒಳಗೊಂಡ ಡನ್‌ಕಿರ್ಕ್‌ ಇತ್ತೀಚೆಗೆ ತೆರೆಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ನೀರಿನಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಯೋಧರು, ತೇಲಿ ಬರುತ್ತಿದ್ದ ಪುಟ್ಟ ದೋಣಿಗಳನ್ನು ನೆನಪಿಸಿಕೊಳ್ಳುವ ಸ್ಟರ್ಡಿ, ಆ ಯುದ್ಧದ ಸಮಯದಲ್ಲಿ 20 ವರ್ಷದ ಯುವಕ. ರಾಯಲ್‌ ನೌಕಾದಳದಲ್ಲಿ ಸೂಚನೆ ಕೊಡುವ ಕಾರ್ಯದಲ್ಲಿ ನಿರತರಾಗಿದ್ದರು. ಡನ್‌ಕಿರ್ಕ್‌ನ ಸಮುದ್ರ ತೀರದಲ್ಲಿ ಬೀಡುಬಿಟ್ಟಿದ್ದ ಫ್ರೆಂಚ್‌ ಮತ್ತು ಬ್ರಿಟಿಷ್‌ ಸೇನೆ ಮೇಲೆ ಜರ್ಮನಿ ಸೇನೆ ಆಕ್ರಮಣ ನಡೆಸುತ್ತಿತ್ತು. 4 ಲಕ್ಷಕ್ಕೂ ಅಧಿಕ ಯೋಧರು ಸಮುದ್ರ ದಾಟಿ ತಮ್ಮ ನೆಲೆಯನ್ನು ಸೇರುವ ತವಕದಲ್ಲಿದ್ದಾಗ ಆದಂತಹ ದುರಂತ, ರಕ್ಷಣಾ ಕಾರ್ಯ, ಹೋರಾಟದ ಮರುಸೃಷ್ಟಿ ಈ ಸಿನಿಮಾದಲ್ಲಿ ಆಗಿದೆ.

</p><p>ಯುದ್ಧದ ಸಂದರ್ಭದಲ್ಲಿ ಬದುಕುಳಿದ ಸ್ಟರ್ಡಿ ಸೇರಿದಂತೆ ಅನೇಕರನ್ನು ಪೋಲೆಂಡ್‌ ವರೆಗೂ ಕರೆತಂದು ಜರ್ಮನ್‌ ಶಿಬಿರದಲ್ಲಿ ಐದು ವರ್ಷಗಳು ಬಂಧನದಲ್ಲಿ ಇಡಲಾಗಿತ್ತು. ಜಗತ್ತಿನ ಬಹುತೇಕ ಎಲ್ಲ ಭಾಗಗಳಲ್ಲಿ ಇದೇ 21ರಂದು ತೆರೆಕಂಡ ಡನ್‌ಕಿರ್ಕ್‌ ಈವರೆಗೆ ₹727 ಕೋಟಿ (113 ಮಿಲಿಯನ್‌ ಡಾಲರ್‌) ಗಳಿಕೆ ಕಂಡಿದೆ.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT