ವಾರದ ಆ್ಯಪ್‌

ಕನ್ನಡ ಮೀಮ್ ತಯಾರಿಸಿ

ಫೋಟೊಗಳ ಮೇಲೆ ಅಥವಾ ಕಲಾಚಿತ್ರಗಳ ಮೇಲೆ ಅಥವಾ ಕೆಳಗೆ ವಿಚಿತ್ರ ವಾಕ್ಯಗಳನ್ನು ಅಥವಾ ಉಕ್ತಿಗಳನ್ನು ಬರೆದು ಹಂಚುವುದನ್ನು ನೋಡಿರುತ್ತೀರಿ. ಇವು ಮುಖ್ಯವಾಗಿ ಸಾಮಾಜಿಕ ಜಾಲತಾಣ ಮತ್ತು ವಾಟ್ಸ್‌ಆ್ಯಪ್ ಮೂಲಕ ಹಂಚಲ್ಪಡುತ್ತವೆ. ಇವುಗಳಿಗೆ ಮೀಮ್ ಎಂಬ ಹೆಸರಿದೆ.

ಕನ್ನಡ ಮೀಮ್ ತಯಾರಿಸಿ

ಫೋಟೊಗಳ ಮೇಲೆ ಅಥವಾ ಕಲಾಚಿತ್ರಗಳ ಮೇಲೆ ಅಥವಾ ಕೆಳಗೆ ವಿಚಿತ್ರ ವಾಕ್ಯಗಳನ್ನು ಅಥವಾ ಉಕ್ತಿಗಳನ್ನು ಬರೆದು ಹಂಚುವುದನ್ನು ನೋಡಿರುತ್ತೀರಿ. ಇವು ಮುಖ್ಯವಾಗಿ ಸಾಮಾಜಿಕ ಜಾಲತಾಣ ಮತ್ತು ವಾಟ್ಸ್‌ಆ್ಯಪ್ ಮೂಲಕ ಹಂಚಲ್ಪಡುತ್ತವೆ. ಇವುಗಳಿಗೆ ಮೀಮ್ ಎಂಬ ಹೆಸರಿದೆ. ಮೀಮ್‌ಗಳನ್ನು ತಯಾರಿಸಲು ಹಲವು ಕಿರುತಂತ್ರಾಂಶಗಳು (ಆ್ಯಪ್) ಲಭ್ಯವಿವೆ. ಬಹುತೇಕ ಕನ್ನಡ ಮೀಮ್‌ಗಳು ಕನ್ನಡ ಪಠ್ಯವನ್ನು ಇಂಗ್ಲಿಷ್ ಲಿಪಿಯಲ್ಲಿ ಬರೆದಿರುತ್ತವೆ –ಅಂದರೆ ಕಂಗ್ಲಿಷ್ ಮೀಮ್‌ಗಳು. ಕನ್ನಡ ಪಠ್ಯವು ಕನ್ನಡ ಲಿಪಿಯಲ್ಲಿದ್ದರೇ ಒಳ್ಳೆಯದಲ್ಲವೇ? ಅಂದರೆ ನಮಗೆ ಬೇಕು ಕನ್ನಡದಲ್ಲೇ ಮೀಮ್ ತಯಾರಿಸುವ ಕಿರುತಂತ್ರಾಂಶ. ಅದೂ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರಿನಲ್ಲಿ Kannada Image Editor - Troll Meme Text Creator ಎಂದು ಹುಡುಕಿ ಅಥವಾ bit.ly/gadgetloka288 ಜಾಲತಾಣಕ್ಕೆ ಭೇಟಿ ನೀಡಿ ಇದನ್ನು ಪಡೆಯಬಹುದು. ಇದು ಮೀಮ್ ತಯಾರಕ ಮಾತ್ರವಲ್ಲ. ಹಲವು ರೀತಿಯಲ್ಲಿ ಚಿತ್ರಗಳನ್ನು ಬದಲಾವಣೆ ಮಾಡಬಹುದು ಮತ್ತು ಪಠ್ಯ ಸೇರ್ಪಡೆ ಮಾಡಬಹುದು. ಇದರಲ್ಲಿ ಕನ್ನಡ ಯುನಿಕೋಡ್‌ನಲ್ಲೇ ಪಠ್ಯ ಸೇರಿಸಬಹುದು.

Comments
ಈ ವಿಭಾಗದಿಂದ ಇನ್ನಷ್ಟು

ತಂತ್ರಜ್ಞಾನ
ಸ್ಮಾರ್ಟ್‌ಫೋನ್‌ ಬ್ಯಾಟರಿ ಉಳಿಸುವುದು ಹೇಗೆ?

ಮೊಬೈಲ್ ವೈಬ್ರೇಷನ್ ಮೋಡ್‍ನಲ್ಲಿದ್ದರೆ ಹೆಚ್ಚು ಬ್ಯಾಟರಿ ವಿನಿಯೋಗವಾಗುತ್ತದೆ. ಹಾಗಾಗಿ ಅತ್ಯಗತ್ಯವೆಂದಾಗ ಮಾತ್ರ ವೈಬ್ರೇಷನ್‍ನಲ್ಲಿಟ್ಟರೆ ಸಾಕು. ವೈಬ್ರೇಟ್ ಮಾಡಿ ರಿಂಗ್ ಆಗುವ ರೀತಿ ಇಟ್ಟುಕೊಳ್ಳುವುದು ಬೇಡವೇ...

15 Mar, 2018
ಗೂಗಲ್‍ನ ಸುಧಾರಿತ ‘ಹ್ಯಾಂಗ್‍ಔಟ್ಸ್’ ಚಾಟ್

ಸಾಫ್ಟ್‌ವೇರ್‌
ಗೂಗಲ್‍ನ ಸುಧಾರಿತ ‘ಹ್ಯಾಂಗ್‍ಔಟ್ಸ್’ ಚಾಟ್

14 Mar, 2018
ವೇಗ ಹೆಚ್ಚಿಸಲಿದೆ 5ಜಿ

ದೂರ ಸಂಪರ್ಕ ಕ್ಷೇತ್ರ
ವೇಗ ಹೆಚ್ಚಿಸಲಿದೆ 5ಜಿ

14 Mar, 2018
ಚಂದ್ರನ ಮೇಲೆ 4ಜಿ

ನೆಟ್‌ವರ್ಕ್‌
ಚಂದ್ರನ ಮೇಲೆ 4ಜಿ

14 Mar, 2018

ತಂತ್ರಜ್ಞಾನ
ಫೇಸ್‌ಬುಕ್‌ನಲ್ಲಿ ನಿಮ್ಮ ಮುಖ ಗುರುತಿಸುವ ಹೊಸ ಫೀಚರ್

ಫೋಟೊಗಳ ದುರ್ಬಳಕೆ ತಡೆಯುವುದಕ್ಕಾಗಿ ಈ ಫೀಚರ್ ಸಹಾಯ ಮಾಡುತ್ತದೆ. ನಕಲಿ ಖಾತೆಗಳನ್ನು ಕ್ರಿಯೇಟ್ ಮಾಡಿ ಅದರಲ್ಲಿ ಇನ್ಯಾರದ್ದೋ ಫೋಟೊ ಬಳಸುವುದನ್ನು ಮತ್ತು ‘ರಿವೆಂಜ್ ಪೋರ್ನೊಗ್ರಫಿ’...

8 Mar, 2018