ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣನ ತಪ್ಪಿಗೆ ತಂಗಿಗೆ ಅತ್ಯಾಚಾರದ ಶಿಕ್ಷೆ!

Last Updated 26 ಜುಲೈ 2017, 19:30 IST
ಅಕ್ಷರ ಗಾತ್ರ

ಲಾಹೋರ್‌: ಪಂಜಾಬ್‌ ಪ್ರಾಂತ್ಯದ ಗ್ರಾಮ ಮಂಡಳಿಯ ಆದೇಶದ ಅನ್ವಯ, ಯುವಕನೊಬ್ಬ 16 ವರ್ಷದ ಹುಡುಗಿಯ ಮೇಲೆ ಆಕೆಯ ಕುಟುಂಬದವರ ಎದುರೇ ಅತ್ಯಾಚಾರ ನಡೆಸಿದ್ದಾನೆ.

ಸಂತ್ರಸ್ತೆಯ ಅಣ್ಣ ಉಮರ್‌ ವಡ್ಡಾ ಇತ್ತೀಚೆಗೆ ಅಶ್ಫಾಕ್‌ ಎಂಬ ಯುವಕನ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಉಮರ್‌ನ ತಂಗಿಯ ಮೇಲೆ ಅಶ್ಫಾಕ್‌ ಅತ್ಯಾಚಾರ ನಡೆಸಬೇಕೆಂದು ಮಂಡಳಿ ಆದೇಶಿಸಿತ್ತು.

ಇದಕ್ಕೆ ಉಮರ್‌ ಕುಟುಂಬ ವಿರೋಧ ವ್ಯಕ್ತಪಡಿಸಿದಾಗ, ಆರೋಪಿ ತಂಗಿಯ ಮೇಲೂ ಅಂತಹುದೇ ಕೃತ್ಯ ಎಸಗಿದಾಗಷ್ಟೇ ನ್ಯಾಯ ದೊರಕಲು ಸಾಧ್ಯ ಎಂದು ಮಂಡಳಿ ಹೇಳಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಎರಡು ದಿನಗಳ ಬಳಿಕ ಸಂತ್ರಸ್ತೆಯ ಕುಟುಂಬ ಪೊಲೀಸರಿಗೆ ವಿಷಯ ತಿಳಿಸಿದ್ದು, ಅಶ್ಫಾಕ್‌, ಉಮರ್‌ ಹಾಗೂ ಗ್ರಾಮ ಮಂಡಳಿಯ 30ಕ್ಕೂ ಹೆಚ್ಚು ಸದಸ್ಯರ ಮೇಲೆ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಲಾಗಿದೆ. ಪರಸ್ಪರ ಸಂಧಾನಕ್ಕೆ ಅವಕಾಶ ಆಗದಂತೆ ಪೊಲೀಸ್‌ ಅಧಿಕಾರಿಯೊಬ್ಬರನ್ನು ದೂರುದಾರರನ್ನಾಗಿ ಮಾಡಲಾಗಿದೆ.

***

ವರದಿಯಾಗದ ಪ್ರಕರಣ
‘ಇಲ್ಲಿ ನಡೆಯುವ ಇಂತಹ ಸಾಕಷ್ಟು ಪ್ರಕರಣಗಳು ವರದಿಯಾಗುವುದೇ ಇಲ್ಲ. ಬಹುತೇಕ ಸಂತ್ರಸ್ತರು ಪೊಲೀಸರನ್ನು ಸಂಪರ್ಕಿಸದೇ ಇರುವುದು ದುರದೃಷ್ಟಕರ. ಗ್ರಾಮೀಣರಲ್ಲಿ ಸಾಕಷ್ಟು ಜಾಗೃತಿ ಮೂಡಿಸಬೇಕಾಗಿದೆ’
ಆಸ್ಮಾ ಜಹಾಂಗೀರ್‌ ,ಸಾಮಾಜಿಕ ಕಾಯಕರ್ತೆ ಹಾಗೂ ವಕೀಲೆ, ಲಾಹೋರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT