ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇರಿಕೆ ಬೇಡ

Last Updated 26 ಜುಲೈ 2017, 19:30 IST
ಅಕ್ಷರ ಗಾತ್ರ

ಸಂವಿಧಾನದ 8ನೇ ಪರಿಚ್ಛೇದದಲ್ಲಿ ನಮೂದಿಸಲಾದ 22 ಭಾಷೆಗಳಲ್ಲಿ  ಹಿಂದಿಯೂ ಒಂದು. ಹಿಂದಿ ‘ಕಲಿಕೆ’ಯ ಕುರಿತು ಯಾರಿಗೂ ತಕರಾರಿಲ್ಲ. ಆದರೆ ಅದನ್ನು ‘ರಾಷ್ಟ್ರಭಾಷೆ’ ಎಂದು ಘೋಷಿಸಿ ದಕ್ಷಿಣದ ರಾಜ್ಯಗಳ ಮೇಲೆ ಹೇರಿಕೆಗೆ ಮುಂದಾದರೆ ಅದನ್ನು ವಿರೋಧಿಸಲೇಬೇಕಾಗುತ್ತದೆ.

ಭಾಷೆ ಆಯಾ ಪ್ರದೇಶದ ಸಂಸ್ಕೃತಿ, ಮೌಲ್ಯಗಳ ಪ್ರತೀಕ. ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಸಲ್ಲಬೇಕು. ಒಬ್ಬ ವ್ಯಕ್ತಿ ಬೇಕಾದಷ್ಟು ಭಾಷೆ ಕಲಿಯಲಿ. ಆದರೆ ತನ್ನ ಭಾಷೆ ‘ಅನಾಥ ಪ್ರಜ್ಞೆ’ಯಿಂದ ಬಳಲುವಂತೆ ಮಾಡಬಾರದು.

ಹಿಂದೊಮ್ಮೆ ಸೇಠ್ ಗೋವಿಂದ ದಾಸ್ ಎಂಬುವರು ‘ಹಿಂದಿ ಒಪ್ಪದಿದ್ದವರನ್ನು ಒಪ್ಪಿಸಲು ಮಿಲಿಟರಿ ಕಳುಹಿಸಬೇಕು’ ಎಂದಿದ್ದರು. ‘ಹಿಂದಿ ಒಪ್ಪದಿದ್ದವರು ದೇಶಭಕ್ತರಲ್ಲ’ ಎಂದು ಮೊರಾರ್ಜಿ ದೇಸಾಯಿ ಹೇಳಿದ್ದು ಈಗ ಇತಿಹಾಸ.

ಪ್ರೊ.ಆರ್‌.ವಿ. ಹೊರಡಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT