ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

29ರಂದು ‘ಕಮಲಶಿಲೆ ಗುಪ್ಪಿ ಗುಹಾಲಯ ಚಲೋ

Last Updated 27 ಜುಲೈ 2017, 7:11 IST
ಅಕ್ಷರ ಗಾತ್ರ

ಉಡುಪಿ: ‘ನಾಥಪಂಥ ಜೋಗಿ ಸಮಾಜದ ಗುಪ್ಪಿ ಗುಹಾಲಯವನ್ನು, ಕಮಲ ಶಿಲೆ ದೇವಸ್ಥಾನ ಆಡಳಿತ ವರ್ಗ ತನ್ನ ಸುರ್ಪದಿಗೆ ತರಲು ಪ್ರಯತ್ನಿಸುತ್ತಿರುವುದನ್ನು ಖಂಡಿಸಿ ಜುಲೈ 29ರಂದು ಧಾರ್ಮಿಕ ಹಕ್ಕಿಗಾಗಿ ‘ಕಮಲಶಿಲೆ ಗುಪ್ಪಿ  ಗುಹಾಲಯ ಚಲೊ’   ಹಮ್ಮಿಕೊಳ್ಳಲಾಗಿದೆ’ ಎಂದು ನಾಥ ಪಂಥ ಜೋಗಿ ಸಮಾಜ ಸೇವಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕೇಶವ ಕೋಟೇಶ್ವರ ತಿಳಿಸಿದರು.

ಬುಧವಾರ  ನಡೆದ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದರು. ‘ಹಲವಾರು ವರ್ಷಗಳಿಂದ ಗುಪ್ಪಿ ಗುಹೆಗೆ ಬರುವ ಪ್ರವಾಸಿಗರನ್ನು ವೀಕ್ಷಣೆಗೆ ಕರೆದ್ಯೂವ ಕಾರ್ಯವನ್ನು ಹಲವಾರು ವರ್ಷಗಳಿಂದ ಇಲ್ಲಿ ನೆಲೆಸಿರುವ ಜೋಗಿ ಕುಟುಂಬ ನಿರ್ವಹಿಸುತಿತ್ತು. ಭಕ್ತ ಪ್ರವಾಸಿಗರ ಸಂಖ್ಯೆ ಜಾಸ್ತಿಯಾದಂತೆ,  ಕಮಲಶಿಲೆ ಬ್ರಾಹ್ಮೀ  ದುರ್ಗಾ ಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಯಾರ ಗಮನಕ್ಕೆ ಬಾರದಂತೆ, ದೇವಳದ ವತಿಯಿಂದ ಕಾಣಿಕೆ ಹುಂಡಿಯನ್ನು ಗುಪ್ಪಿ  ಗುಹಾಲಯ ಒಳಗೆ ಪ್ರತಿಷ್ಠಾಪಿಸಿ ದೇವಸ್ಥಾನದ ಜೀರ್ಣೋದ್ಧಾರವೆಂಬ ಫಲಕ ಹಾಕಿಕೊಂಡಿತ್ತು.

ನಂತರದ ದಿನದಲ್ಲಿ ಈ ಗುಹಾಲಯ ವೀಕ್ಷಣೆಗೆ ಬರುವ ಪ್ರವಾಸಿಗರಿಗಾಗಿ ಆಡಳಿತ ಮಂಡಳಿ ಗುಹಾಲಯ ಮಾರ್ಗದರ್ಶಕರನ್ನು ನೇಮಿಸಿಕೊಂಡಿದ್ದರ ಬಗ್ಗೆ ಆಡಳಿತ ಮಂಡಳಿ ಪ್ರಶ್ನಿಸಿದಾಗ ಉಡಾಫೆ ಉತ್ತರ ನೀಡಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಯಾರ ಬಳಿ ತೆರಳಿದರೂ ಸಮಂಜಸ ಉತ್ತರ ಜೋಗಿ ಕುಟುಂಬಗಳಿಗೆ ಸಿಕ್ಕಿಲ್ಲ’ ಎಂದರು.

‘ಗುಪ್ಪಿ ಗುಹಾಲಯದಲ್ಲಿ ಧಾರ್ಮಿಕ ಹಕ್ಕಿನ ಮರುಸ್ಥಾಪನೆಯಾಗುವುದರ ಜೊತೆಗೆ ಕಮಲ ಶಿಲೆ ಆಡಳಿತ ಮಂಡಳಿ ಇಲ್ಲಿ ತನಕ ಮಾಡಿರುವ ಹಸ್ತಕ್ಷೇಪವನ್ನು ಹಿಂದೆ ತೆಗೆದುಕೊಳ್ಳುವುದರ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ನಾಥಪಂಥ ಯೋಗಿ ನಿರ್ಮಲನಾಥ್ ಹಾಗೂ ಯೋಗಿ ಅದಿತ್ಯ ನಾಥ ಸ್ವಾಮಿಗಳ ಜೊತೆಗೂಡಿ ಉಗ್ರ ಹೋರಾಟ ನಡೆಯಲಿದೆ’ ಎಂದು ಎಚ್ಚರಿಸಿದರು.

‘ಸಿದ್ದಪೀಠ ಕೊಡಚಾದ್ರಿ ಹಲವರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ್ ಬಳೆಗಾರ, ನಾಥಪಂಥ ಜೋಗಿ ಸಮಾಜ ಸೇವಾ ಸಮಿತಿ ಕಾರ್ಯದರ್ಶಿ ಶಿವರಾಮ ಬಳೆಗಾರ್, ಜೋಗಿ ಪಂಥದ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಯ್ಯ, ಅರ್ಚಕ ರಾಘವೇಂದ್ರ ಜೋಗಿ’ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT