ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಕ್ಷೇತ್ರ ಉದ್ಯಮಿಗಳ ಕೈ ವಶವಾಗಿದೆ

Last Updated 27 ಜುಲೈ 2017, 8:52 IST
ಅಕ್ಷರ ಗಾತ್ರ

ತುಮಕೂರು: ಶಿಕ್ಷಣ ಕ್ಷೇತ್ರ ವಾಣಿಜ್ಯೀಕರಣದೊಂದಿಗೆ ಬೇರೆ ರಂಗಗಳ ತರಹ ದೊಡ್ಡ ಬಿಕ್ಕಟ್ಟು ಎದುರಿಸುತ್ತಿದೆ. ಶಿಕ್ಷಣ ಕ್ಷೇತ್ರ ದೊಡ್ಡ ಉದ್ಯಮಿಗಳ ಕೈ ವಶವಾಗಿದೆ  ಎಂದು ಪರಿಸರವಾದಿ ಸಿ.ಯತಿರಾಜು ವಿಷಾದಿಸಿದರು. ಕನ್ಯಾಕುಮಾರಿಯಿಂದ ನಗರಕ್ಕೆ  ಬುಧವಾರ ಬಂದ ಎಐಎಸ್ಎಫ್ ಹಾಗೂ ಎಐವೈಎಫ್‌ನ ವಿದ್ಯಾರ್ಥಿ ಯುವಜನರ ರಾಷ್ಟ್ರೀಯ ಜಾಥಾ ಉದ್ದೇಶಿಸಿ ಮಾತಾನಾಡಿದರು.

‘ಬೇಬಿ ನರ್ಸರಿಯಿಂದ ಉನ್ನತ ಶಿಕ್ಷಣದವರೆಗೆ ವ್ಯಾಪಾರೀಕರಣ ಹಬ್ಬಿದೆ. ಇಂದು ಜ್ಞಾನ ಕೇವಲ ಹಣವಿರುವವರಿಗೆ ಮಾತ್ರ ಸಿಮೀತವಾಗಿದೆ. ಆರ್ಥಿಕವಾಗಿ ಯಾರು ಸಬಲರಿದ್ದಾರೋ ಅವರು ಶಿಕ್ಷಣ ಪಡೆಯುತ್ತಿದ್ದಾರೆ. ಉದ್ಯೋಗಾವಕಾಶ ಹಾಗೂ ಶಿಕ್ಷಣವನ್ನು ಬಳಸಿಕೊಂಡು ಬಡವರ ಹಣ ಲೂಟಿ ಮಾಡುತ್ತಿದ್ದಾರೆ’ ಎಂದು ದೂರಿದರು.

ಎಐವೈಎಫ್‌ ರಾಷ್ಟ್ರೀಯ ಮಂಡಳಿ ಅಧ್ಯಕ್ಷ ಅಫ್ತಬ್‌ ಆಲಂ ಖಾನ್‌ ಮಾತನಾಡಿ, ‘ಶುದ್ಧ ವ್ಯವಹಾರ – ವ್ಯಾಪಾರದ ರೂಪ ಪಡೆದು ಶಿಕ್ಷಣ ರಂಗ ವ್ಯಾಪಾರೀಕರಣವಾಗಿದೆ. ಉದ್ಯಮಿಗಳೆಲ್ಲ ಶಿಕ್ಷಣ ಕ್ಷೇತ್ರದ ಕಡೆಗೆ ಮುಖ ಮಾಡಿರುವುದರಿಂದ ಖಾಸಗಿ ಶಾಲೆಗಳು ತಲೆ ಎತ್ತುತ್ತಿವೆ’ ಎಂದು ಅವರು ತಿಳಿಸಿದರು.

ಎಐಎಸ್‌ಎಫ್‌ ರಾಷ್ಟ್ರೀಯ ಕಾರ್ಯದರ್ಶಿ ವಿಕ್ಕಿ ಮಾತನಾಡಿ, ‘ಶಿಕ್ಷಣ ಪ್ರಸಾರಕ್ಕೆ ಸಂಸ್ಥೆಗಳು ಕೆಲಸ ಮಾಡಬೇಕೆ ಹೊರತು ಹಣ ಮಾಡುವ ಉದ್ದೇಶಕ್ಕಲ್ಲ. ಹಣ ಮಾಡಲೆಂದೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಇರುವ ಅಕ್ರಮಗಳಿಗೆ ಕಡಿವಾಣ ಬಿಳಬೇಕು. ಆರ್ಹತೆ ಆಧರಿಸಿ ಅವಕಾಶ ಕಲ್ಪಿಬೇಕು. ಸರ್ಕಾರ ಪಾರದರ್ಶಕತೆ ಕಾಯ್ದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಗಿರೀಶ್‌ ಮಾತನಾಡಿ, ‘ಶಿಕ್ಷಣದಲ್ಲಿನ ವ್ಯಾಪಾರೀಕರಣ ವಿರುದ್ಧ ಹೋರಾಟ ಮಾಡುವ ಸಂದರ್ಭ ಒದಗಿದೆ. ಉದ್ಯೋಗ ಅವಕಾಶ ಕಲ್ಪಿಸಿ ಎಂದು ಕೇಳುವ ಪರಿಸ್ಥಿತಿ ತಲೆದೋರಿದೆ. ಇವೆಲ್ಲವುಗಳ ಬದಲಾವಣೆಗೆ ದೇಶ ಬದಲಾಗಬೇಕು.  ಇದಕ್ಕಾಗಿ ದೇಶದಾದ್ಯಂತ 56 ದಿನಗಳ ಜನ ಜಾಗೃತಿ ಜಾಥಾ ನಡೆಸಲಾಗುತ್ತಿದೆ ಎಂದರು.

ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಣ್ಣ ಮಾತನಾಡಿದರು. ಎಐಎಸ್‌ಎಫ್‌ ರಾಜ್ಯ ಘಟಕದ ಅಧ್ಯಕ್ಷೆ ಕೆ.ಜ್ಯೋತಿ, ಎಐಎಸ್‌ಎಫ್‌ ರಾಜ್ಯ ಸಮಿತಿ ಸದಸ್ಯ ಚಂದ್ರಶೇಖರ್‌ ಗೌಡ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ, ಎಐಎಸ್‌ಎಫ್‌ ರಾಷ್ಟ್ರೀಯ ಮಂಡಳಿ ಅಧ್ಯಕ್ಷ ಸೈಯದ್‌ ವಲಿವುಲ್ಲಾ ಖಾದ್ರಿ, ಪ್ರಾಧ್ಯಾಪಕಿ ಅಕ್ಕಮ್ಮ, ಎಸ್ಎಫ್‌ಐನ ಇ.ಶಿವಣ್ಣ, ಎಚ್‌.ಎನ್‌.ಸಂತೋಷ್‌, ವಿಶ್ವಜಿತ್‌ ಕುಮಾರ್‌, ರೇವಣ್ಣ, ಉಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT