ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರ್ಬೋಕಿಗಳು ಬರುತ್ತಿದ್ದಾರೆ ದಾರಿಬಿಡಿ!

Last Updated 27 ಜುಲೈ 2017, 19:30 IST
ಅಕ್ಷರ ಗಾತ್ರ

ಒಂದೂರಿನ ನಾಲ್ಕು ಜನ ತಿರ್ಬೋಕಿಗಳ ಕಥೆ ಹೇಳುವ ಸಿನಿಮಾವೊಂದು ಚಂದನವನದಲ್ಲಿ ಸಿದ್ಧವಾಗುತ್ತಿದೆ. ಈ ಸಿನಿಮಾದ ಹೆಸರು ಕೂಡ ‘ತಿರ್ಬೋಕಿಗಳು’ ಎಂದು! ಕೆಂಪೇಗೌಡ ಅವರು ಇದರ ನಿರ್ದೇಶಕರು.

ರಿಯಾಲಿಟಿ ಶೋಗಳಲ್ಲಿ ಡಾನ್ಸ್ ಪ್ರದರ್ಶನ ನೀಡಿರುವ ಭೂಷಣ್ ಮಾಸ್ಟರ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ. ಇವರ ಜೊತೆ ರಣಧೀರ, ಮನೋಜ್ ಮತ್ತು ಸಂತೋಷ್ ಎನ್ನುವವರು ಅಭಿನಯಿಸುತ್ತಿದ್ದಾರೆ. ಮಾನ್ಯಾ ಅವರು ಈ ಸಿನಿಮಾದ ನಾಯಕಿ.

‘ಚಿತ್ರದ ಚಿತ್ರೀಕರಣ ನಡೆಯುತ್ತಿರುವುದು ತುಮಕೂರು ಜಿಲ್ಲೆಯ ಗುಬ್ಬಿ ಸಮೀಪದ ಹಳ್ಳಿಯೊಂದರಲ್ಲಿ. ಚಿತ್ರೀಕರಣ ಇನ್ನೂ ಪೂರ್ಣಗೊಂಡಿಲ್ಲ’ ಎಂದರು ಕೆಂಪೇಗೌಡ ಅವರು.

(ಸುಂದರಂ ಮಾಸ್ಟರ್, ಎಂ.ಡಿ. ಕೌಶಿಕ್, ಕೆಂಪೇಗೌಡ)

‘ಈಗಿನ ಟ್ರೆಂಡ್ ಆಧರಿಸಿ ಸಿನಿಮಾದ ಕಥೆ ರೂಪಿಸಿದ್ದೇವೆ. ಕಥೆಯು ಸಿನಿಮಾದ ಶೀರ್ಷಿಕೆಗೆ ಸೂಕ್ತವಾಗಿಯೇ ಇದೆ. ನಾಲ್ಕೂ ಜನ ಹುಡುಗರು, ಈ ಹುಡುಗಿ ತನ್ನನ್ನೇ ಪ್ರೀತಿಸುತ್ತಿದ್ದಾಳೆ ಎಂದು ಭಾವಿಸಿರುತ್ತಾರೆ’ ಎಂದರು ಭೂಷಣ್. ಆದರೆ, ‘ಚಿತ್ರದ ನಾಯಕಿ ಪ್ರೀತಿಸುವುದು ನಾಲ್ಕು ಜನ ತಿರ್ಬೋಕಿಗಳಲ್ಲಿ ತುಸು ಪರವಾಗಿಲ್ಲ ಎನ್ನುವ ಒಬ್ಬ ತಿರ್ಬೋಕಿಯನ್ನು ಮಾತ್ರ’ ಎಂಬ ಸಮಜಾಯಿಷಿ ನೀಡಿದರು ನಾಯಕಿ ಮಾನ್ಯಾ.

ಇದೊಂದು ಹಾಸ್ಯ ಪ್ರಧಾನ ಚಿತ್ರ ಎಂದು ತಂಡ ಹೇಳಿಕೊಂಡಿದೆ. ನಟ ಹಾಗೂ ಡಾನ್ಸರ್ ಪ್ರಭುದೇವ ಅವರ ತಂದೆ ಸುಂದರಂ ಮಾಸ್ಟರ್ ಅವರು ಈ ಚಿತ್ರದಲ್ಲಿ ಪ್ರಮುಖವಾದ ಪಾತ್ರವೊಂದನ್ನು ನಿಭಾಯಿಸಲಿದ್ದಾರಂತೆ. ಅವರದ್ದು ಜ್ಞಾನಿಯೊಬ್ಬರ ಪಾತ್ರ, ಅವರ ಮಾತು ಕೇಳಿ ತಿರ್ಬೋಕಿಗಳು ಬದಲಾಗುತ್ತಾರೆ ಎಂದು ತಂಡ ಹೇಳಿದೆ.

ಹಿರಿಯ ನಟ ಎಂ.ಡಿ. ಕೌಶಿಕ್ ಅವರು ಈ ಚಿತ್ರದಲ್ಲಿ ಹೆಣ್ಣುಮಗಳ ತಂದೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT