ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಣಚುಕಲ್ಲಿನಲ್ಲಿ ತೋಟ

Last Updated 27 ಜುಲೈ 2017, 19:30 IST
ಅಕ್ಷರ ಗಾತ್ರ

ಮನೆಯಲ್ಲೊಂದು ಕೈತೋಟ ಮಾಡುವ ಇಚ್ಛೆ ಇರುವವರು ಬೆಣಚು ಕಲ್ಲು ಅಥವಾ ಬೆಣ್ಣೆ ಕಲ್ಲುಗಳನ್ನು ಬಳಸಿ ಪುಟ್ಟ ಕೈತೋಟಗಳನ್ನು ಮಾಡಬಹುದು.

ಕಲ್ಲಿನ ಕುಂಡ: ಮಧ್ಯಮ ಗಾತ್ರದ ಬೆಣ್ಣೆ ಕಲ್ಲುಗಳನ್ನು ಒಂದಕ್ಕೊಂದು ಅಂಟಿಸಿ ಕುಂಡದ ಆಕಾರ ತಯಾರಿಸಬಹುದು. ಇದರೊಳಗೆ ಮಣ್ಣು, ಗೊಬ್ಬರ ಮತ್ತು ತೆಂಗಿನ ನಾರು ಹರಡಿ ಗಿಡ ನೆಡಬಹುದು. ಇಲ್ಲ ಕುಂಡದ ಒಳಭಾಗದಲ್ಲಿ ಸಿಮೆಂಟ್‌ ಮೆತ್ತಿ ನೀರು ತುಂಬಿಸಿ ತೆರೆದ ಅಕ್ವೇರಿಯಂನಂತೆ ಮಾಡಿ ಮೀನು ಸಾಕಬಹುದು.

ಕಾರಂಜಿ: ನಾಲ್ಕು ಕಬ್ಬಿಣದ ಸರಳನ್ನು ಒಂದು ಅಡಿ ಅಂತರ ಬಿಟ್ಟು ಭೂಮಿಗೆ ನೆಡಿ. ಒಂದು ಸರಳಿಗೂ ಮತ್ತೊಂದು ಸರಳಿಗೂ ನೀರು ಹರಿಯಲು ಅವಕಾಶವಾಗುವಂತೆ ಎತ್ತರದಲ್ಲಿ ವ್ಯಾತ್ಯಾಸವಿರಲಿ. ನಂತರ ವೃತ್ತಾಕಾರದ ತಗಡಿನ ತಟ್ಟೆಯನ್ನು ಸರಳುಗಳ ತುದಿಗೆ ಅಂಟಿಸಿ, ಎರಡು ದಿನ ಸರಳು ಮತ್ತು ತಗಡು ಅಂಟಿಕೊಳ್ಳಲು ಬಿಡಿ. ನಂತರ ಒಳಗೆ ನೀರು ಉಳಿಯುವಂತೆ ಸಣ್ಣಸಣ್ಣ ಕಟ್ಟೆಗಳ ರೂಪದಲ್ಲಿ ಬೆಣ್ಣೆ ಕಲ್ಲುಗಳನ್ನು ತಗಡಿನ ಸುತ್ತಾ ಅಂಟಿಸಿ. ಇದು ಒಣಗಿದ ನಂತರ ಬಿಳಿ ಸಿಮೆಂಟ್‌ಗೆ ಬಣ್ಣವನ್ನು ಮಿಶ್ರಣ ಮಾಡಿ ಕಲ್ಲಿನ ಒಳ ಭಾಗದಲ್ಲಿ ಮೆತ್ತಿ. ಇದು ಕಲ್ಲುಗಳ ನಡುವೆ ತೂತು ಉಳಿಯುವಂತೆ ಮಾಡುತ್ತದೆ. ನೀರಿನ ಸಂಪರ್ಕಕ್ಕೆ ಸರಳಿನ ಹಿಂಭಾಗದಲ್ಲಿ ಪೈಪ್‌ ಅಳವಡಿಸಿ. ಈಗ ಕಾರಂಜಿ ಸಿದ್ಧ. ಐದಾರು ಗಿಡದ ಕುಂಡದ ನಡುವೆ ಈ ಒಂದು ಕಾರಂಜಿ ಇಟ್ಟರೆ, ಪುಟಾಣಿ ಕೈತೋಟ ಸಿದ್ಧವಾಗುತ್ತದೆ.

ತಂತಿ ಕುಂಡ: ತಂತಿಯಲ್ಲಿ ವಿವಿಧ ವಿನ್ಯಾಸದ ಕಲ್ಲಿನ ಪುಟ ಕೈತೋಟ ಮಾಡಬಹುದು. ಬೇಕೆನಿಸಿದ ಆಕಾರ, ಎತ್ತರ ಹಾಗೂ ದಪ್ಪದಲ್ಲಿ ತಂತಿಗಳನ್ನು ಕಟ್ಟಿ ಒಂದು ತಂತಿಯ ಕುಂಡವನ್ನು ಮಾಡಿಕೊಳ್ಳಿ. ತಂತಿ ವಿನ್ಯಾಸದೊಳಗೆ ಸಣ್ಣಸಣ್ಣ ಬೆಣ್ಣೆಕಲ್ಲುಗಳನ್ನು ತುಂಬಿಸಿ, ಮಧ್ಯದಲ್ಲಿ ಮಣ್ಣು, ಗೊಬ್ಬರ ಹಾಕಿ. ತಯಾರಿಸಿದ ಆಕಾರದ ಸುತ್ತ ಸಣ್ಣ ಗಿಡಗಳನ್ನು ನೆಡಬಹುದು. ಬಾಲ್ಕನಿ, ರೂಮಿನ ಕಿಟಕಿಯೊಳಗೆ ಇಡಬಹುದಾದ ಪುಟ ವಿನ್ಯಾಸಗಳನ್ನೂ ಇದರಲ್ಲಿ ತಯಾರಿಸಬಹುದು. ಐದಾರು ಕುಂಡಗಳನ್ನು ಇಟ್ಟುಕೊಳ್ಳುವ ಬದಲು, ಇಂಥ ಒಂದೇ ವಿನ್ಯಾಸದ ತಂತಿ ಕುಂಡದಲ್ಲಿ ಹಲವು ಗಿಡಗಳನ್ನು ನೆಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT