ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿ; ಭಾರತ ತಂಡದ ಜಯಭೇರಿ

Last Updated 27 ಜುಲೈ 2017, 19:30 IST
ಅಕ್ಷರ ಗಾತ್ರ

ಚೆಸ್ಟರ್‌ಫೀಲ್ಡ್‌ : ಮಂಜೋತ್‌ ಕಾಲ್ರಾ (122; 117ಎ, 16ಬೌಂ, 2ಸಿ) ಅವರ ಮನಮೋಹಕ ಶತಕ ಹಾಗೂ ಮಧ್ಯಮ ವೇಗಿ ಕಮಲೇಶ್‌ ನಾಗರಕೋಟಿ (112ಕ್ಕೆ10) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ 19 ವರ್ಷದೊಳಗಿನವರ ಭಾರತ ತಂಡದವರು ಇಂಗ್ಲೆಂಡ್‌ ವಿರುದ್ಧದ ನಾಲ್ಕುದಿನಗಳ ಮೊದಲ ಟೆಸ್ಟ್‌ ಪಂದ್ಯದಲ್ಲಿ 334ರನ್‌ಗಳಿಂದ ಜಯಭೇರಿ ಮೊಳಗಿಸಿದ್ದಾರೆ.

ಚೆಸ್ಟರ್‌ಫೀಲ್ಡ್‌ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಹಿಮಾನ್ಸು ರಾಣಾ ಸಾರಥ್ಯದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 133.4 ಓವರ್‌ಗಳಲ್ಲಿ 519ರನ್‌ ಗಳಿಸಿತ್ತು.

ಇದಕ್ಕುತ್ತರವಾಗಿ ಆಂಗ್ಲರ ನಾಡಿನ ತಂಡ ಮೊದಲ ಇನಿಂಗ್ಸ್‌ನಲ್ಲಿ 54.2 ಓವರ್‌ಗಳಲ್ಲಿ 195ರನ್‌ಗಳಿಗೆ ಆಲೌಟ್‌ ಆಯಿತು.

324ರನ್‌ಗಳ ಬೃಹತ್‌ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ರಾಣಾ ಬಳಗ 32 ಓವರ್‌ಗಳಲ್ಲಿ 6 ವಿಕೆಟ್‌ಗೆ 173ರನ್‌ ಪೇರಿಸಿ ಡಿಕ್ಲೇರ್‌ ಮಾಡಿಕೊಂಡಿತು.ಈ ಮೂಲಕ ಇಂಗ್ಲೆಂಡ್‌ ಗೆಲುವಿಗೆ 497ರನ್‌ಗಳ ಕಠಿಣ ಗುರಿ ನೀಡಿತ್ತು.

ಈ ಮೊತ್ತ ಬೆನ್ನಟ್ಟಿದ ಮ್ಯಾಕ್ಸ್‌ ಎಡ್ವರ್ಡ್‌ ಹೋಲ್ಡನ್‌ ಪಡೆ 46.1 ಓವರ್‌ಗಳಲ್ಲಿ 163ರನ್‌ಗಳಿಗೆ ಹೋರಾಟ ಮುಗಿಸಿತು.

ಸಂಕ್ಷಿಪ್ತ ಸ್ಕೋರ್‌ 
ಭಾರತ: ಮೊದಲ ಇನಿಂಗ್ಸ್‌
133.4 ಓವರ್‌ಗಳಲ್ಲಿ 519 (ಪೃಥ್ವಿ ಶಾ 86, ಶುಭಮನ್‌ ಗಿಲ್‌ 29, ಮಂಜೋತ್‌ ಕಾಲ್ರಾ 122, ಪರಾಗ್‌ ದಾಸ್‌ 68, ಮನೀಷ್‌ಭಾಯ್‌ ದೇಸಾಯಿ 89, ಕಮಲೇಶ್‌ ನಾಗರಕೋಟಿ 19, ಶಿವಂ ಮಾವಿ ಔಟಾಗದೆ 41; ಚಾರ್ಲಸ್‌ ಟಂಗ್‌ 69ಕ್ಕೆ3, ಹೆನ್ರಿ ಬ್ರೂಕಸ್‌ 85ಕ್ಕೆ3, ಗುರಮರ್‌ ಸಿಂಗ್‌ ವಿರ್ದಿ 134ಕ್ಕೆ3).

ಇಂಗ್ಲೆಂಡ್‌: ಪ್ರಥಮ ಇನಿಂಗ್ಸ್‌
54.2 ಓವರ್‌ಗಳಲ್ಲಿ 195 (ಹ್ಯಾರಿ ಬ್ರೂಕ್‌ 17, ಮ್ಯಾಕ್ಸ್‌ ಹೋಲ್ಡೆನ್‌ 32, ರಯಾನ್‌ ಪಟೇಲ್‌ 38, ವಿಲಿಯಂ ಜಾಕ್ಸ್‌ 46; ಕಮಲೇಶ್‌ ನಾಗರಕೋಟಿ 49ಕ್ಕೆ5, ಶಿವಂ ಮಾವಿ 51ಕ್ಕೆ4, ಹಿಮಾನ್ಸು ರಾಣಾ 11ಕ್ಕೆ1).

ಭಾರತ: ಎರಡನೇ ಇನಿಂಗ್ಸ್‌
32 ಓವರ್‌ಗಳಲ್ಲಿ 6 ವಿಕೆಟ್‌ಗೆ 173 ಡಿಕ್ಲೇರ್ಡ್‌ (‌ ಪೃಥ್ವಿ ಶಾ 69, ಶುಭಮನ್ ಗಿಲ್‌ 25, ಪರಾಗ್‌ ದಾಸ್‌ 50; ಮ್ಯಾಥ್ಯೂ ಜೇಮ್ಸ್‌ ಪಾಟ್ಸ್‌ 20ಕ್ಕೆ3, ಗುರಮರ್‌ ಸಿಂಗ್‌ ವಿರ್ದಿ 63ಕ್ಕೆ2).

ಇಂಗ್ಲೆಂಡ್‌: ದ್ವಿತೀಯ ಇನಿಂಗ್ಸ್‌
46.1 ಓವರ್‌ಗಳಲ್ಲಿ 163 (ಡೇವಿಡ್‌ ಎಡ್ವರ್ಡ್‌ ಹೋಲ್ಡನ್‌ 60, ರಯಾನ್‌ ಪಟೇಲ್‌ 14, ಜಾರ್ಜ್‌ ಬಾರ್ಟ್‌ಲೆಟ್‌ 18, ಜೇಮ್ಸ್‌ ಪಾಟ್ಸ್‌ 20;ಕಮಲೇಶ್‌ ನಾಗರಕೋಟಿ 63ಕ್ಕೆ5, ಶಿವಂ ಮಾವಿ 47ಕ್ಕೆ2, ಹಿಮಾನ್ಸು ರಾಣಾ 8ಕ್ಕೆ1, ಅಶೋಕ್‌ ಸಂಧು 14ಕ್ಕೆ2).

ಫಲಿತಾಂಶ: ಭಾರತಕ್ಕೆ 334ರನ್‌ಗಳ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT