ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಟೆಸ್ಟ್‌: ಭಾರತದ ವಿರುದ್ಧ ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾ

Last Updated 28 ಜುಲೈ 2017, 5:42 IST
ಅಕ್ಷರ ಗಾತ್ರ

ಗಾಲ್‌: ಇಲ್ಲಿನ ಗಾಲ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ– ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ 133.1 ಓವರ್‌ಗಳಲ್ಲಿ 600 ರನ್‌ ಗಳಿಸಿ ಆಲೌಟ್‌ ಆಯಿತ್ತು.

ಗುರುವಾರ ಮೊದಲ ಇನಿಂಗ್ಸ್‌ ಆರಂಭಿಸಿದ ಶ್ರೀಲಂಕಾ 44 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 154 ರನ್‌ ಗಳಿಸಿತ್ತು.

ಆರಂಭಿಕ ಸಂಕಷ್ಟ: ಮೊದಲ ಇನಿಂಗ್ಸ್‌ ಆರಂಭಿಸಿದ ಶ್ರೀಲಂಕಾ ತಂಡ ಆರಂಭಿಕ ಸಂಕಷ್ಟ ಎದುರಿಸಿತು. ಎರಡನೇ ಓವರ್‌ ಬೌಲ್‌ ಮಾಡಿದ ಉಮೇಶ್‌ ಯಾದವ್‌, ಐದನೇ ಎಸೆತದಲ್ಲಿ ದಿಮುತ್‌ ಕರುಣಾರತ್ನೆ (2) ಅವರನ್ನು ಎಲ್‌ಬಿಡಬ್ಲ್ಯು ಬಲೆಯಲ್ಲಿ ಸಿಲುಕಿಸಿ ಪ್ರವಾಸಿ ಪಡೆಗೆ ಮೇಲುಗೈ ಒದಗಿಸಿದರು. ವೇಗಿ ಮೊಹಮ್ಮದ್‌ ಶಮಿ, 15ನೇ ಓವರ್‌ನ ಎರಡನೇ ಎಸೆತದಲ್ಲಿ ಧನುಷ್ಕಾ ಗುಣತಿಲಕ (16; 37ಎ, 2ಬೌಂ) ಮತ್ತು ಆರನೇ ಎಸೆತದಲ್ಲಿ ಕುಶಾಲ್‌ ಮೆಂಡಿಸ್‌ (0) ವಿಕೆಟ್‌ ಉರುಳಿಸಿ ಆತಿಥೇಯರ ಗಾಯದ ಮೇಲೆ ಉಪ್ಪು ಸವರಿದರು.

ಆದರೆ, ಉಪುಲ್‌ ತರಂಗ (64; 93ಎ, 10ಬೌಂ) ಮತ್ತು ಏಂಜೆಲೊ ಮ್ಯಾಥ್ಯೂಸ್‌ (ಬ್ಯಾಟಿಂಗ್‌ 54; 91ಎ, 8ಬೌಂ, 1ಸಿ) ನಾಲ್ಕನೇ ವಿಕೆಟ್‌ಗೆ 57ರನ್‌ ಗಳಿಸಿ ತಂಡಕ್ಕೆ ಆಸರೆಯಾದರು.

ಸದ್ಯ ಶುಕ್ರವಾರ ಮೂರನೇ ದಿನದಾಟ ಮುಂದುವರಿಸಿರುವ ಶ್ರೀಲಂಕಾ 59 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿದೆ( ಏಂಜೆಲೊ ಮ್ಯಾಥ್ಯೂಸ್‌ 83, ದಿಲ್ರುವಾನ್‌ ಪೆರೇರಾ ಬ್ಯಾಟಿಂಗ್‌  28 ರಂಗನಾ ಹೆರತ್‌ ಬ್ಯಾಟಿಂಗ್‌ 00).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT