ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣ ಕ್ರಾಂತಿ ಮಾಡಿದ ಬಂಥನಾಳ ಶ್ರೀಗಳು’

Last Updated 28 ಜುಲೈ 2017, 6:49 IST
ಅಕ್ಷರ ಗಾತ್ರ

ತಾಂಬಾ: ‘ಶೈಕ್ಷಣಿಕ ಕ್ರಾಂತಿಯ ಹರಿಕಾರ, ಅಕ್ಷರ ದಾಸೋಹಿ ಬಂಥನಾಳದ ಲಿಂಗೈಕ್ಯ ಸಂಗನಬಸವ ಶಿವಯೋಗಿಗಳು ವಿಜಯಪುರ ಜಿಲ್ಲೆಯಾದ್ಯಂತ ಶಿಕ್ಷಣ ಕ್ರಾಂತಿ ಮಾಡಿದ್ದು ಶಿಕ್ಷಣ ಪ್ರೇಮಿಗಳಿಗೆ ಸಂದ ಗೌರವವಾಗಿದೆ’ ಎಂದು ಮಠದ ಪೀಠಾಧಿಪತಿ ಬಂಥನಾಳದ ವೃಷಭ ಲಿಂಗೇಶ್ವರ ಶ್ರೀಗಳು ಹೇಳಿದರು.

ಗ್ರಾಮದ ಸಂಗನಬಸವೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ಬಂಥನಾಳದ ಲಿಂಗೈಕ್ಯ ಸಂಗನಬಸವ  ಮಹಾ ಶಿವಯೋಗಿಗಳ 117ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಸಮಾಜದಲ್ಲಿನ ಅಜ್ಞಾನ, ಮೂಢನಂಬಿಕೆಗಳನ್ನು ಹೋಗ ಲಾಡಿಸಲು ಶಿಕ್ಷಣವೇ ಅತಿ ಮುಖ್ಯ ಸಾಧನ. ನಾಡಿನೆಲ್ಲೆಡೆ ಶಿಕ್ಷಣ ಸಂಸ್ಥೆಗಳನ್ನು  ಸ್ಥಾಪಿಸುವುದರ ಮೂಲಕ ಪೂಜ್ಯರು ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದರು ಎಂದು ಹೇಳಿದರು.

ಅವರು ಜನರು ಕಣ್ಣಿಂದ ಮರೆಯಾ ದರೂ, ಅವರ ಕಾರ್ಯಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ’ ಎಂದು ಸ್ಮರಿಸಿದರು.ಎಸ್.ವಿ.ವಿ. ಸಂಘದ ಚೇರಮನ್ ಜಿ.ಎಸ್. ಹತ್ತಳ್ಳಿ ಮಾತನಾಡಿ, ‘ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ ಶ್ರೀಗಳು ಶಿಕ್ಷಣದದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಬಲವಾಗಿ ನಂಬಿದ್ದರು.

ಹಾಗಾಗಿಯೆ ತಾವು ಪ್ರವಚನ ಮಾಡಿದ ಗ್ರಾಮ ಗಳಲ್ಲೆಲ್ಲ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಜ್ಞಾನ ದಾಸೋಹ ನಡೆಯುವ ವ್ಯವಸ್ಥೆ ಮಾಡಿದ ಕೀರ್ತಿ ಬಂಥನಾಳ ಶ್ರೀಗಳಿಗೆ ಸಲ್ಲುತ್ತದೆ’ ಎಂದು ಹೇಳಿದರು. ಬೆಳಿಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಗನಬಸವ ಶಿವಯೋಗಿಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಶಕುಂತಲಾ ಕಲ್ಲೂರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭಾಗಮ್ಮ ಚಟ್ಟರಕಿ, ಬಿ.ಜಿ.ನಿಂಬಳ, ಸಿದ್ದಯ್ಯ ವಸ್ತ್ರದ, ಅಶೋಕ ಕುಲಕರ್ಣಿ, ವಿಠ್ಠಲ ನಾವದಗಿ, ಪಿ.ಎಸ್‌. ಪಾಟಿಲ, ಚನ್ನಮಲ್ಲಪ್ಪ ಎಸ್. ದೇಗಿನಾಳ, ಮಲಕಪ್ಪ ಸೋಮನಿಂಗ, ವಿ.ಪಿ. ಮರಡಿ, ಎಸ್.ಎಸ್. ಕನಳ, ಎಸ್.ಡಿ. ಭಂಟನೂರ, ಪಿ.ಬಿ. ಕಾಡಯ್ಯ ನಮಠ, ಟಿ.ಎಸ್‌. ಗಿರಿಗೌಡರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT