ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ನಿತೀಶ್‌ ಸರ್ಕಾರಕ್ಕೆ ವಿಶ್ವಾಸಮತದ ಗೆಲುವು

Last Updated 28 ಜುಲೈ 2017, 9:19 IST
ಅಕ್ಷರ ಗಾತ್ರ

ಪಟ್ನಾ: ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸರ್ಕಾರ ಶುಕ್ರವಾರ ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತದ ಗೆಲುವು ಪಡೆದಿದೆ.

ಆಡಳಿತಾರೂಢ ಜೆಡಿಯು, ಬಿಜೆಪಿ ಮತ್ತು ಇತರರ ಮೈತ್ರಿ ಕೂಟ 131 ವಿಶ್ವಾಸ ಮತ ಗಳಿಸಿದ್ದು, ವಿರೋಧ ಪಕ್ಷ 108 ಮತ ಪಡೆಯಿತು ಎಂದು ಸ್ಪೀಕರ್‌ ವಿಜಯ್‌ಕುಮಾರ್‌ ಚೌಧರಿ ತಿಳಿದ್ದಾರೆ.

ಬಿಹಾರದ ಮುಖ್ಯಮಂತ್ರಿ ಹುದ್ದೆಗೆ ಬುಧವಾರ ಸಂಜೆ ರಾಜೀನಾಮೆ ನೀಡಿದ್ದ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್‌ ಬಿಜೆಪಿ ಬೆಂಬಲದೊಂದಿಗೆ ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರ ಸ್ವೀಕಾರ ಮಾಡಿದ್ದರು.

ಈ ಮೊದಲು ಎನ್‌ಡಿಎ, ಜೆಡಿಯುನ 71, ಬಿಜೆಪಿ 53, ಆರ್‌ಎಲ್‌ಎಸ್‌ಪಿ 2, ಎಲ್‌ಜೆಪಿ 2, ಎಚ್‌ಎಎಂ 1 ಹಾಗೂ ಮೂವರು ಪಕ್ಷೇತರ ಶಾಸಕರನ್ನೊಳಗೊಂಡ ಒಟ್ಟು 132 ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿತ್ತು.

243 ಸದಸ್ಯರ ಬಿಹಾರ ವಿಧಾನಸಭೆಯಲ್ಲಿ ಆರ್‌ಜೆಡಿ 80 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ 27 ಮತ್ತು ಸಿಪಿಐ–ಎಂಎಲ್ ಮೂರು ಶಾಸಕರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT