ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳಬಹದು

Last Updated 28 ಜುಲೈ 2017, 19:30 IST
ಅಕ್ಷರ ಗಾತ್ರ

* ನನ್ನ ಹೆಸರು ಯಾಸ್ಮೀನ. ವಯಸ್ಸು 30. ಗಂಡ ಇಹಲೋಕವನ್ನು ತ್ಯಜಿಸಿದ್ದಾರೆ. ಒಂದು ಗಂಡು, ಒಂದು ಹೆಣ್ಣುಮಗು ಇದೆ. ವೃತ್ತಿಯಿಂದ ನಾನು ಟೇಲರ್ ಆಗಿದ್ದು ಈ ದುಬಾರಿ ಕಾಲದಲ್ಲಿ ಜೀವನ ನಡೆಸುವುದು ಕಷ್ಟ ಸಾಧ್ಯ ವಾಗುತ್ತಿದೆ. ನನಗೆ ತಂದೆ ತಾಯಿಯ ಆಸರೆಯೂ ಇಲ್ಲದಂತಾಗಿದೆ. ನಾನು ಸ್ವಭಾವತಃ ಸ್ವತಂತ್ರವಾಗಿ ಎಲ್ಲರೊಡನೆ ಬೆರೆಯುತ್ತೇನೆ. ಹೆಚ್ಚಾಗಿ ಮಾತನಾಡುವ ಮನಸ್ಸಿನವಳಾಗಿದ್ದೇನೆ. ಆದರೆ ಸಮಾಜದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ. ನಮ್ಮ ಸಂಬಂಧಿಕರಿಂದಲೇ ಅನೇಕ ಚುಚ್ಚು ಮಾತುಗಳಿಂದ ಸಾಕಾಗಿದೆ. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷ ಗತಿಸಿದರೂ ಮಹಿಳೆ ಸಬಲೆ ಆಗಿಲ್ಲ. ಇದರಿಂದ ಮಾನಸಿಕ ಖಿನ್ನತೆಯಿಂದ ನೊಂದಿದ್ದೇನೆ. ಇದರಿಂದ ಪಾರಾಗಲು ಏನಾದರೂ ಪರಿಹಾರವಿದೆಯೇ?

ಒಂಟಿಯಾಗಿ ಮಕ್ಕಳನ್ನು ಸಾಕಿ ಸಲಹುವುದು ಎಷ್ಟು ಕಷ್ಟ ಎಂಬುದು ಅರ್ಥವಾಗುತ್ತದೆ. ಎಲ್ಲವನ್ನೂ ಏಕಾಂಗಿಯಾಗಿ ನಿಭಾಯಿಸುವುದು ಅಷ್ಟು ಸುಲಭವಲ್ಲ. ನೀವು ಈ ವಿಷಯದಲ್ಲಿ ತುಂಬಾ ಧೈರ್ಯವಂತರು ಹಾಗೂ ನಿಮ್ಮನ್ನು ಇದಕ್ಕೆ ಮೆಚ್ಚಲೇಬೇಕು. ಈಗ ಸದ್ಯಕ್ಕೆ ನಿಮ್ಮ ಗಮನ ಏನಿದ್ದರೂ ನಿಮ್ಮ ಮಕ್ಕಳ ಮೇಲೆ ಇರಬೇಕು. ಅವರನ್ನು ಒಳ್ಳೆಯ ವ್ಯಕ್ತಿಗಳನ್ನಾಗಿ ರೂಪಿಸುವುದು ನಿಮ್ಮ ಜವಾಬ್ದಾರಿ. ನಿಮ್ಮ ಸುತ್ತಲ ಜನರು ಏನು ಹೇಳುತ್ತಾರೆ ಎಂಬುದರ ಕುರಿತು ಯೋಚಿಸಬೇಡಿ. ಅದರಿಂದ ಏನೂ ಬದಲಾವಣೆ ಸಾಧ್ಯವಿಲ್ಲ. ನಿಮಗೆ ನೀವು ಸರಿ ಎನಿಸುವುದು ಮುಖ್ಯ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿರಲಿ. ಕೆಲವೊಮ್ಮೆ ಜೀವನ ಕಠಿಣ ಎನಿಸುತ್ತದೆ. ಆದರೆ ಅದೇ ಎಲ್ಲವನ್ನೂ ಎದುರಿಸುವ ಶಕ್ತಿಯನ್ನೂ ನೀಡುತ್ತದೆ.

* ನಾನು ಅನಿತಾ. ಅಂತಿಮ ವರ್ಷದ ಪದವಿ ಓದುತ್ತಿದ್ದೇನೆ. ನಾನು 5ರಿಂದ 10ನೇ ತರಗತಿವರೆಗೂ ಹಾಸ್ಟೆಲ್‌ನಲ್ಲಿ ಓದಿದ್ದು. 10ನೇ ತರಗತಿ ಇರುವಾಗ ಒಬ್ಬರು ಶಿಕ್ಷಕ ನನ್ನನ್ನು ತುಂಬ ಇಷ್ಟಪಟ್ಟಿದ್ದರು. ನಾನೂ ಅವರನ್ನು ಇಷ್ಟಪಟ್ಟಿದ್ದೆ. ಪಿಯುಸಿಗೆ ಬಂದಾಗ ಅವರ ಮೇಲೆ ಇಷ್ಟ ಕಡಿಮೆ ಆಯಿತು. ಅದೇ ಸಮಯದಲ್ಲಿ ಅವರಿಗೂ ಬೇರೆ ಕಡೆ ಕೆಲಸ ಸಿಕ್ಕಿತು. ಅಲ್ಲಿ ಒಬ್ಬರನ್ನು ಇಷ್ಟಪಟ್ಟಿದ್ದರು.ಆ ವಿಷಯವನ್ನು ನನಗೆ ಅವರು ಹೇಳಿದಾಗ ನಾನು ಕೋಪ ಮಾಡಿಕೊಂಡು ಬೇರೆಯವರನ್ನು ಇಷ್ಟಪಟ್ಟೆ. ಅದು ಗೊತ್ತಾಗಿ ಅವರನ್ನು ಮದುವೆಯಾಗುವಂತೆ ಹೇಳಿದರು. ಆದರೆ ನಾನು ಒಪ್ಪಲಿಲ್ಲ. ಆದರೂ ಇದುವರೆಗೂ ನನ್ನ ಜೊತೆ ಚೆನ್ನಾಗೇ ಮಾತನಾಡುತ್ತಿದ್ದರು. ಈಗ ನಾನು ಮದುವೆಯಾಗೋಣ ಎಂದರೆ ಅವರು ಒಪ್ಪುತ್ತಿಲ್ಲ. ನನಗೆ ಅವರನ್ನು ಬಿಟ್ಟು ಬದುಕೋಕೆ ಆಗುತ್ತಿಲ್ಲ. ಏನು ಮಾಡುವುದು ಎಂದು ಸಲಹೆ ನೀಡಿ.

ಪ್ರೀತಿ ಮಾಡಲು, ಬಾಳ ಸಂಗಾತಿ ಯಾರು ಎಂದು ನಿರ್ಧರಿಸಲು ಹತ್ತನೇ ತರಗತಿ ಯೋಗ್ಯ ವಯಸ್ಸಲ್ಲ. ಅದು ಕೇವಲ ಆಕರ್ಷಣೆ. ಮತ್ತು ಆಗಾಗ್ಗೆ ಈ ರೀತಿ ಸಂಬಂಧಗಳನ್ನು ಬದಲಾಯಿಸುವುದೂ ಯೋಗ್ಯವಲ್ಲ. ಸದ್ಯಕ್ಕೆ ನಿಮ್ಮ ಆದ್ಯತೆ ಏನಿದ್ದರೂ ಓದಿನ ಕಡೆಗಿರಲಿ. ನಿಮ್ಮ ಬದುಕಿನ ಗುರಿಯ ಬಗ್ಗೆ ಸ್ಪಷ್ಟತೆ ಇರಲಿ. ಆಗ ಪ್ರೀತಿ ಹಾಗೂ ಮದುವೆ ಸರಿಯಾದ ಸಮಯಕ್ಕೆ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT