ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ಮಾರ್ಗದಲ್ಲಿದೆಯೇ ಪರಿಹಾರ?

Last Updated 28 ಜುಲೈ 2017, 19:30 IST
ಅಕ್ಷರ ಗಾತ್ರ

ಗರ್ಭಧಾರಣೆಗೆ ತೊಡಕಾಗಿರುವ ಪಿಸಿಒಎಸ್‌ ಸಮಸ್ಯೆಯನ್ನು ನೈಸರ್ಗಿಕವಾಗಿಯೂ ತಗ್ಗಿಸಿಕೊಳ್ಳಲು ಹಲವು ವಿಧಾನಗಳಿವೆ. ಅಕ್ಯುಪಂಚರ್, ಆಹಾರ ಪದ್ಧತಿ, ವ್ಯಾಯಾಮ ಹಾಗೂ ಕೆಲವು ಪೂರಕ ಪೋಷಕಾಂಶಗಳಿಂದ ಪಿಸಿಒಎಸ್ ಸಾಧ್ಯತೆಯನ್ನು ನೈಸರ್ಗಿಕವಾಗಿ ತಗ್ಗಿಸಬಹದು; ಹೀಗೆಯೇ ಗರ್ಭಧಾರಣೆಗೆ ಸಂಬಂಧಿಸಿದ ಚಿಕಿತ್ಸೆಯನ್ನು ಫಲಗೊಳಿಸಿಕೊಳ್ಳಬಲ್ಲ ಹಾದಿಯೂ ಇದೆ.

ವಿಟಮಿನ್‌ಗಳಿಂದ ಎಂಡೋಮಿಟ್ರಿ ಯಾಸಿಸ್‌ ನಿವಾರಣೆ ಸಾಧ್ಯವೇ? ಎಂಡೋಮಿಟ್ರಿಯೋಸಿಸ್ ಸಮಸ್ಯೆ ಇದ್ದು, ಅತಿ ಯಾದ ನೋವು ಕಾಣಿಸಿಕೊಳ್ಳುತ್ತಿದ್ದರೆ, ಎರಡು ಆ್ಯಂಟಿಯಾಕ್ಸಿಡಂಟ್‌ಗಳು ಈ ನೋವನ್ನು ನಿವಾರಿಸಲು ಸಹಾಯ ಮಾಡಬಹುದು. ಅವೆಂದರೆ ವಿಟಮಿನ್ ಸಿ ಹಾಗೂ ವಿಟಮಿನ್ ಇ. ಇವು ಎಂಡೋಮಿಟ್ರಿಯಾಸಿಸ್ ನೋವು ಹಾಗೂ ಗರ್ಭಧಾರಣೆ ಸಂಬಂಧಿ ಸಮಸ್ಯೆಯನ್ನು ತಗ್ಗಿಸಬಹುದಾದ ಸರಳ ದಾರಿಯಾಗಬಹುದು.

ಎಂಡೋಮಿಟ್ರಿಯಾಸಿಸ್ ಇರುವ ಮಹಿಳೆಯರಲ್ಲಿ ‘ಆಕ್ಸಿಡೇಟಿವ್ ಸ್ಟ್ರೆಸ್’ ಎಂದು ಕರೆಯಲಾಗುವ ಒತ್ತಡದ ಪ್ರಮಾಣವೂ ಹೆಚ್ಚಿರುತ್ತದೆ. ದೇಹದಲ್ಲಿ ಕೆಲವು ಅಸಮತೋಲನಗಳು (ಪ್ರತಿರೋಧಕ ಫ್ರೀರಾಡಿಕಲ್‌ಗಳಿಂದ ಆ್ಯಂಟಿಯಾಕ್ಸಿಡಂಟ್‌ಗಳ ಕ್ಷೀಣಿಸುವಿಕೆ) ಕಾಣಿಸಿಕೊಳ್ಳಬಹುದು. ಆದ್ದರಿಂದ ಸಮತೋಲನ ಕಾಯ್ದುಕೊಳ್ಳುವಲ್ಲಿ ಆ್ಯಂಟಿಯಾಕ್ಸಿಡಂಟ್‌ಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ.

ದೇಹದಲ್ಲಿ ವಿಟಮಿನ್ ಸಿ ಮತ್ತು ಇ, ಆ್ಯಂಟಿ ಯಾಕ್ಸಿಡಂಟ್‌ಗಳ ಪ್ರಮಾಣವು ಹೆಚ್ಚಿದಾಗ ಶೇ.43ರಷ್ಟು ಮಹಿಳೆಯರಲ್ಲಿ ನೋವಿನ ಪ್ರಮಾಣ ತಗ್ಗಿರುವುದು ಕಂಡುಬಂದಿದೆ. ಶೇ. 37ರಷ್ಟು ಮಹಿಳೆಯರಲ್ಲಿ ಋತುಚಕ್ರದ ಅವಧಿಯಲ್ಲಿ ಕಾಣಿಸಿಕೊಳ್ಳುವ ನೋವಿನ ಪ್ರಮಾಣ ಕಡಿಮೆಯಾಗಿದೆ, ಹಾಗೂ ಶೇ.24ರಷ್ಟು ಮಹಿಳೆಯರಲ್ಲಿ ಸಂಭೋಗದ ಸಮಯದಲ್ಲಿ ಕಾಣಿಸಿಕೊಳ್ಳುವ ನೋವಿನ ಪ್ರಮಾಣ ತಗ್ಗಿರುವುದು ಕಂಡುಬಂದಿದೆ.

ಎಂಡೋಮಿಟ್ರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಇದೊಂದು ಒಳ್ಳೆಯ ಸುದ್ದಿಯೇ ಎನ್ನಬಹುದು. ಈ ಆ್ಯಂಟಿಯಾಕ್ಸಿಡಂಟ್‌ಗಳು ಎಂಡೋಮಿಟ್ರಿಯಾಸಿಸ್ ಪರಿಣಾಮವನ್ನು ನಿಯಂತ್ರಿಸುತ್ತದೆ; ಮಾತ್ರವಲ್ಲ, ಗರ್ಭಧಾರಣೆಗೂ ಅನುಕೂಲ ಮಾಡಿಕೊಡಬಲ್ಲದು.
ಅತಿಯಾದ ಪ್ರಮಾಣದಲ್ಲಿ ವಿಟಮಿನ್ ಇ ಸೇವನೆಯೂ ರಕ್ತ ಹೆಪ್ಪುಗಟ್ಟುವಿಕೆಯ ಮೇಲೆ ಪರಿಣಾಮವನ್ನುಂಟುಮಾಡುವ ಸಾಧ್ಯತೆಯೂ ಇರುವುದರಿಂದ, ಅದರಲ್ಲೂ ಯಾವುದಾದರೂ ಶಸ್ತ್ರಚಿಕಿತ್ಸೆ ಅಥವಾ ದಂತಚಿಕಿತ್ಸೆಗೆ ಒಳಗಾಗುವುದಾದರೆ ವೈದ್ಯರ ಶಿಫಾರಸ್ಸಿನ ಮೇರೆಗೆ ಮಾತ್ರ ಮುಂದುವರೆಯಬೇಕಾಗುತ್ತದೆ. ಯಾವುದೇ ಪೂರಕ ಪೌಷ್ಟಿಕ ಆಹಾರ ಸೇವಿಸುವ ಮುನ್ನವೂ ವೈದ್ಯರ ಅನುಮತಿ ಮೇರೆಗೆ ಸೇವಿಸುವುದು ಒಳಿತು.

ಖನಿಜಾಂಶಗಳನ್ನು ಮರಳಿ ಪಡೆಯುವುದು:‌ ನೀವು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ, ಪೌಷ್ಟಿಕಾಂಶದ ಕೊರತೆಯ ಕುರಿತೂ ಗಮನ ನೀಡಬೇಕಾಗುತ್ತದೆ. ಗರ್ಭನಿರೋಧಕ ಮಾತ್ರೆಗಳ ಬಳಕೆಯಿಂದ ಉಂಟಾಗುವ ಈ ಪೌಷ್ಟಿಕಾಂಶದ ಕೊರತೆಯು ಗರ್ಭಧಾರಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ಗರ್ಭನಿರೋಧಕ ಮಾತ್ರೆಗಳ ಸೇವನೆಯಿಂದ ಕುಗ್ಗಿದ ನಿರ್ದಿಷ್ಟ ಪೋಷಕಾಂಶಗಳನ್ನು ಸೂಕ್ತ ಮಟ್ಟದಲ್ಲಿ ಮರಳಿ ಪಡೆದುಕೊಂಡರೆ, ಗರ್ಭ ಧಾರಣೆಗೆ ಅಡ್ಡಿಯಾಗದು. ಆದರೆ ಎಷ್ಟು ಕಾಲ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುತ್ತೀರೋ ಈ ಮಾತ್ರೆ ಸಂಬಂಧಿ ಪೌಷ್ಟಿಕಾಂಶದ ಕೊರತೆಯ ಮಟ್ಟವೂ ಹೆಚ್ಚಾಗುತ್ತಹೋಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಫಲವಂತಿಕೆಯ ಪೋಷಕಾಂಶಗಳು: ಸತು, ಸೆಲೆನಿಯಂ ಹಾಗೂ ಮ್ಯಾಗ್ನೀಷಿಯಂ ಅಂಶಗಳು ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವ ಮಹಿಳೆಯರಲ್ಲಿ ಕಡಿಮೆ ಮಟ್ಟದಲ್ಲಿ ಇರುತ್ತವೆ. ಜೊತೆಗೆ ಆ್ಯಂಟಿ ಫರ್ಟಿಲಿಟಿ ಮೆಟಲ್ ಎಂದು ಕರೆಯಲ್ಪಡುವ ಕಾಡ್ಮಿಯಂ ಅಂಶ ಹೆಚ್ಚಿರುತ್ತದೆ.

ದೀರ್ಘಾವಧಿ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಿ ನಂತರ ಮಗುವನ್ನು ಪಡೆಯಲು ಬಯಸುವ ಮಹಿಳೆಯರಿಗೆ ಇದು ಬಹಳ ಮುಖ್ಯವಾದ ಮಾಹಿತಿ. ಗರ್ಭಾಶಯದ ಫಾಲಿಕಲ್‌ಗಳಲ್ಲಿ ಸೆಲೆನಿಯಂ ಮಟ್ಟವು ಕಡಿಮೆಯಾಗುತ್ತಿದ್ದಂತೆ ಗರ್ಭಧರಿಸುವ ಸಾಧ್ಯತೆಯೂ ಕುಗ್ಗುತ್ತಹೋಗುತ್ತದೆ. ದೇಹದ ಅತಿಮುಖ್ಯ ಆ್ಯಂಟಿಯಾಕ್ಸಿಡಂಟ್ ಆದ ಗ್ಲುಟಾಥಿಯೋನ್ ಪೆರಾಕ್ಸಿಡೇಸ್ ಕೂಡ ದುರ್ಬಲಗೊಳ್ಳುತ್ತದೆ. ಗ್ಲುಟಾಥಿಯೋನ್ ಪೆರಾಕ್ಸಿಡೇಸ್ ಅಂಡದ ಗುಣಮಟ್ಟವನ್ನು ಕಾಯ್ದಿರಿಸಲು ಬಹುಮುಖ್ಯ ಕವಚವಾಗಿರುತ್ತದೆ.

ಇದರೊಂದಿಗೆ, ದೇಹದಲ್ಲಿ ಮ್ಯಾಗ್ನೀಷಿಯಂ ಮಟ್ಟ ಕುಗ್ಗಿದರೆ ಗರ್ಭಧರಿಸುವಾಗಿನ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಕೆಟ್ಟ ಪರಿಣಾಮ ಅನುಭವಿಸಬೇಕಾಗುತ್ತದೆ. ಸತುವು ಕೂಡ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಗರ್ಭನಿರೋಧಕ ಮಾತ್ರೆಯನ್ನು ಬಳಸುತ್ತಿದ್ದರೆ ವೈದ್ಯರನ್ನು ಭೇಟಿ ಮಾಡಿ ಪ್ರಸವ ಪೂರ್ವ ವಿಟಮಿನ್‌ಗಳ ಸೇವನೆ ಕುರಿತು ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು. ಈ ವಿಟಮಿನ್‌ಗಳಲ್ಲಿ ಸಾಕಷ್ಟು ಸೆಲೆನಿಯಂ, ಸತುವು ಹಾಗೂ ಮ್ಯಾಗ್ನೀಷಿಯಂ ಅಂಶವಿರುತ್ತದೆ.

ಆಹಾರದಲ್ಲಿ ಲಿಗ್ನಾನ್; ಗರ್ಭಧಾರಣೆಗೆ ಸಹಕಾರಿಯಾಗಬಲ್ಲದೇ? ಲಿಗ್ನಾನ್‌ ಅಂಶ ಹೆಚ್ಚಿರುವ ಆಹಾರವನ್ನು ನಿರಂತರವಾಗಿ ಸೇವಿಸಿದರೆ ಗರ್ಭಧಾರಣೆಯ ಸಾಧ್ಯತೆ ಹೆಚ್ಚುತ್ತದೆ ಎಂಬುದು ತಿಳಿದು ಬಂದಿದೆ. ಈ ಲಿಗ್ನಾನ್ ಫ್ಲಾಕ್ಸ್‌ ಸೀಡ್‌ಗಳಲ್ಲಿ ಹೆಚ್ಚಿದ್ದು, ಪ್ರತಿನಿತ್ಯ ಒಂದು ಅಥವಾ ಎರಡು ಚಮಚ ಪುಡಿ ಮಾಡಿ ಸೇವಿಸಿದರೆ ಒಳಿತು ಎಂದೂ ಇದೆ.

‌ಇದರೊಂದಿಗೆ ಕುಂಬಳ, ಎಳ್ಳು, ಸೂರ್ಯಕಾಂತಿ ಹಾಗೂ ದ್ವಿದಳಧಾನ್ಯಗಳು, ಹಣ್ಣುಗಳು, ಬೆರ್‍ರಿ, ತರಕಾರಿಗಳಲ್ಲಿ ಲಿಗ್ನಾನ್ ಹೇರಳವಾಗಿವೆ. ಫ್ಲಾಕ್ಸ್ ಸೀಡ್‌ ನಂತರ ಎಳ್ಳು, ಲಿಗ್ನಾನ್ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

***

ಯಾವ ಆಹಾರದಲ್ಲಿ ಎಷ್ಟು ಲೆಗ್ನನ್ ಇದೆ?
ಲಿಗ್ನನ್ ಇರುವ ಆಹಾರ ಲಿಗ್ನನ್ ಮಟ್ಟ
(100 ಗ್ರಾಂ ತೂಕದಲ್ಲಿ)
ತೈಲ ಬೀಜಗಳು
ಫ್ಲಾಕ್ಸ್ ಸೀಡ್ 301.129
ಎಳ್ಳು 39,348
ಸೂರ್ಯಕಾಂತಿ ಬೀಜ 891
ಗೋಡಂಬಿ 629

**
ಬ್ರೆಡ್‌ಗಳು

ಫ್ಲಾಕ್ಸ್ ಸೀಡ್ ಬ್ರೆಡ್ 12474
ಬಹುಧಾನ್ಯದ ಬ್ರೆಡ್ 6744
ರೇ ಬ್ರೆಡ್ 320
ಗ್ರನೋಲಾ 764

**
ತರಕಾರಿಗಳು
ಕಾಲೆ 2321
ಬ್ರೊಕೋಲಿ 1325
ಕ್ಯಾಬೇಜ್ 787
ಬ್ರಸಲ್ ಸ್ಪ್ರೌಟ್ 747
ಹಣ್ಣುಗಳು
ಆಪ್ರಿಕಾಟ್ 450
ಸ್ಟ್ರಾಬೆರಿ 334
ಪೀಚ್ 293

ಮುಂದುವರೆಯುವುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT