ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ

ಶೋಷಿತರು ಎಚ್ಚೆತ್ತುಕೊಳ್ಳಬೇಕು

ಕೆಲವರು ಭಯದ ಕಾರಣದಿಂದ, ಇನ್ನು ಕೆಲವರು ಸ್ಪರ್ಧೆಯಲ್ಲಿ ಗೆಲ್ಲಬೇಕು ಎಂಬ ಕಾರಣದಿಂದ, ಇನ್ನು ಕೆಲವು ಹೊಸಬರು ಏನೂ ಅರಿಯದ ಮುಗ್ಧತೆಯಿಂದ ‘ಕ್ಯಾಸ್ಟಿಂಗ್‌ ಕೌಚ್‌’ಗೆ ಬಲಿಯಾಗುತ್ತಾರೆ.

ಶೋಷಿತರು ಎಚ್ಚೆತ್ತುಕೊಳ್ಳಬೇಕು

ಕ್ಯಾಸ್ಟಿಂಗ್‌ ಕೌಚ್‌ ಇಡೀ ಜಗತ್ತಿನಲ್ಲಿಯೇ ಇರುವ ಸಮಸ್ಯೆ. ಚಿತ್ರರಂಗ ಅಷ್ಟೇ ಅಲ್ಲ, ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಅಸ್ತಿತ್ವದಲ್ಲಿ ಇರುವ ಸಮಸ್ಯೆ ಅದು.
ಯಾರು ಇಂಥ ವ್ಯವಸ್ಥೆಯಲ್ಲಿ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆಯೋ ಅವರು ಇದರ ವಿರುದ್ಧ ಧ್ವನಿಯೆತ್ತಬೇಕು.

ಆದರೆ ನಂತರ ಏನಾಗಿಬಿಡುತ್ತದೆನೋ ಎಂಬ ಭಯದ ಕಾರಣದಿಂದ ಯಾರೂ ಈ ಬಗ್ಗೆ ಮಾತೇ ಆಡುವುದಿಲ್ಲ. ಚಿತ್ರರಂಗದಲ್ಲಿ ನಾವು ನಮ್ಮ ಪ್ರತಿಭೆಯಿಂದ, ಕಲೆಯಿಂದ ಮೇಲಕ್ಕೆ ಬರಬೇಕು. ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿ, ನಮ್ಮ ವೃತ್ತಿಗೆ ಪೂರ್ತಿಯಾಗಿ ಒಪ್ಪಿಸಿಕೊಂಡು ಕೆಲಸ ಮಾಡುತ್ತೇವೆ. ಅಷ್ಟು ಸಾಕು. ಅದನ್ನು ಮೀರಿ ಯಾರೊಂದಿಗೋ ‘ರಾಜಿ’ಯಾಗಿ ಮನಸ್ಸಿಗೆ ಒಪ್ಪದ ದೌರ್ಜನ್ಯವನ್ನು ಸಹಿಸಿಕೊಳ್ಳಬೇಕಾದ ಅವಶ್ಯಕತೆ ಖಂಡಿತ ಇಲ್ಲ.

ಕೆಲವರು ಭಯದ ಕಾರಣದಿಂದ, ಇನ್ನು ಕೆಲವರು ಸ್ಪರ್ಧೆಯಲ್ಲಿ ಗೆಲ್ಲಬೇಕು ಎಂಬ ಕಾರಣದಿಂದ, ಇನ್ನು ಕೆಲವು ಹೊಸಬರು ಏನೂ ಅರಿಯದ ಮುಗ್ಧತೆಯಿಂದ ‘ಕ್ಯಾಸ್ಟಿಂಗ್‌ ಕೌಚ್‌’ಗೆ ಬಲಿಯಾಗುತ್ತಾರೆ.

ಈ ಸಮಸ್ಯೆ ಬಗೆಹರಿಯಲು ಮೊದಲು ಎಲ್ಲದರಲ್ಲಿಯೂ ಜಾಗೃತಿ ಮೂಡಿಸಬೇಕು. ಯಾವುದು ಲೈಂಗಿಕ ದೌರ್ಜನ್ಯ, ಯಾವುದು ನಮ್ಮ ಹಕ್ಕುಗಳು, ದೌರ್ಜನ್ಯವನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಅರಿವು ಮೂಡಿಸಬೇಕು.ಹಾಗೆಯೇ ಕಲಾವಿದರೂ ಯಾವುದೂ ಸಭ್ಯತೆಯ ಗಡಿ ದಾಟಿ ಮುಂದುವರಿಯುತ್ತಿದೆ ಎಂಬುದನ್ನು ಗುರ್ತಿಸಿ ನಿರ್ಬಂಧಿಸುವ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು.

ಹಾಗೆಯೇ ಇಂಥ ಪ್ರಕರಣಗಳು ಬೆಳಕಿಗೆ ಬಂದಾಗ ಸಮಗ್ರವಾಗಿ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಅದೆಲ್ಲಕ್ಕಿಂತ ಹೀಗೆ ಶೋಷಣೆ ಮಾಡುವವರು ಎಚ್ಚೆತ್ತುಕೊಳ್ಳಬೇಕು. ಅವರಿಗೇ ನಾವು ಮಾಡುವುದು ಕೆಟ್ಟ ಕೆಲಸ ಎಂದು ಹೊಳೆಯಬೇಕು.

ನಿರೂಪಣೆ: ಪದ್ಮನಾಭ ಭಟ್‌

Comments
ಈ ವಿಭಾಗದಿಂದ ಇನ್ನಷ್ಟು
ಐಪಿಸಿ ‘354ಡಿ’ ಅಡಿ ದಾಖಲಾದ ಪ್ರಕರಣಗಳ ಜಿಲ್ಲಾವಾರು ವಿವರ

ಹಿಂಬಾಲಿಸುವಿಕೆ
ಐಪಿಸಿ ‘354ಡಿ’ ಅಡಿ ದಾಖಲಾದ ಪ್ರಕರಣಗಳ ಜಿಲ್ಲಾವಾರು ವಿವರ

12 Aug, 2017

ಮೇಷ್ಟ್ರು
ಆನಂದಲಹರಿ

ಬೆಳಗಿನ ಹೊತ್ತು ಸೂರ್ಯನ ಬೆಳಕಿರುತ್ತದೆ.  ರಾತ್ರಿಯಲ್ಲಿ ಚಂದ್ರನ ಬೆಳಕಿರುತ್ತದೆ. ಇದು ನಮ್ಮ ಕಣ್ಣಿಗೆ ಕಾಣುವ ವಿದ್ಯಮಾನ. ಆದರೆ ಇದು ಸತ್ಯವಲ್ಲ; ಬೆಳಗಿನ ಬೆಳಕಿಗೂ ರಾತ್ರಿಯ...

5 Aug, 2017
ಪ್ಲೇಟೋನ ಗುಹೆ

ಪಶ್ಚಿಮದಿಂದ...
ಪ್ಲೇಟೋನ ಗುಹೆ

5 Aug, 2017
ಬದಲಾವಣೆ ಒಳಗಿನಿಂದಲೇ ಬರಬೇಕು

ಅಂತರಾಳ
ಬದಲಾವಣೆ ಒಳಗಿನಿಂದಲೇ ಬರಬೇಕು

29 Jul, 2017
‘ವೃತ್ತಿಪರತೆ ಬರಲಿ’

ಅಂತರಾಳ
‘ವೃತ್ತಿಪರತೆ ಬರಲಿ’

29 Jul, 2017