ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ಉಗ್ರರು, ಇಬ್ಬರು ಸಿಬ್ಬಂದಿ ಸಾವು

ಇರಾಕ್‌ ರಾಯಭಾರ ಕಚೇರಿ ಮೇಲೆ ಐ.ಎಸ್‌ ಆತ್ಮಹತ್ಯಾ ದಾಳಿ
Last Updated 31 ಜುಲೈ 2017, 20:21 IST
ಅಕ್ಷರ ಗಾತ್ರ

ಕಾಬೂಲ್‌: ಇಲ್ಲಿನ ಇರಾಕ್‌ ರಾಯಭಾರ ಕಚೇರಿ ಗುರಿಯಾಗಿಸಿಕೊಂಡು ಐಎಸ್‌ ಉಗ್ರರು ಸೋಮವಾರ ದಾಳಿ ನಡೆಸಿದ್ದಾರೆ. ದಾಳಿಕೋರರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಅಫ್ಗಾನಿಸ್ತಾನದ ಭದ್ರತಾ ಪಡೆಗಳು ಮೂವರನ್ನು ಕೊಲ್ಲಲು ಯಶಸ್ವಿಯಾಗಿವೆ.

ಮೊದಲಿಗೆ ರಾಯಭಾರ ಕಚೇರಿಯ ಪ್ರವೇಶ ದ್ವಾರದ ಬಳಿಕ ಆತ್ಮಹತ್ಯಾ ದಾಳಿಕೋರನೊಬ್ಬ ತನ್ನನ್ನು ತಾನೇ ಸ್ಫೋಟಿಸಿಕೊಂಡ. ನಂತರ ಮೂವರು ಉಗ್ರರು ಕಟ್ಟಡದೊಳಕ್ಕೆ ನುಗ್ಗಿದರು.

‘ಇರಾಕ್‌ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಫ್ಗಾನಿಸ್ತಾನದ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ಮೂವರು ಪೊಲೀಸರು ಗಾಯಗೊಂಡಿದ್ದಾರೆ’ ಎಂದು ಒಳಾಡಳಿತ ಸಚಿವಾಲಯದ ವಕ್ತಾರ ನಜೀಬ್‌ ಧಾನಿಶ್‌ ಹೇಳಿದ್ದಾರೆ.

ದಾಳಿಯಲ್ಲಿ ಸಂಭವಿಸಿರುವ ಸಾವು ನೋವುಗಳ ಬಗ್ಗೆ ಗೊಂದಲಗಳಿವೆ. ಇಬ್ಬರು ಪೊಲೀಸರ ಶವಗಳು ರಸ್ತೆಯಲ್ಲಿ ಬಿದ್ದುದನ್ನು ನೋಡಿದ್ದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಐಎಸ್‌ ಹೊಣೆ: ದಾಳಿಯ ಹೊಣೆಯನ್ನು ಐಎಸ್‌ ಹೊತ್ತುಕೊಂಡಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅದು, ತನ್ನ ಹೋರಾಟಗಾರರು ಏಳು ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾರೆ ಎಂದು ಹೇಳಿದೆ.

ಇರಾಕ್‌ ಮತ್ತು ಸಿರಿಯಾದಲ್ಲಿ ಸಂಘಟನೆಗೆ ಆಗುತ್ತಿರುವ ಸೋಲಿನಿಂದ ಹತಾಶೆಗೊಂಡಿರುವ ಐಎಸ್‌, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ದಾಳಿ ಸಂಘಟಿಸಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT