ಕಾಮ ಕಸ್ತೂರಿ ಗಿಡ: ಆಯುರ್ವೇದ ಗುಣ ಹೊಂದಿರುವ ಕಾಮ ಕಸ್ತೂರಿ ಗಿಡ, ಸೊಳ್ಳೆಯ ಹಾವಳಿಯನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ. ಇದರ ಘಮಕ್ಕೆ ಸೊಳ್ಳೆಗಳು ಕಡಿಮೆಯಾಗುತ್ತವೆ. ಈ ಗಿಡವನ್ನು ಸ್ವಲ್ಪ ಆರೈಕೆ ಮಾಡಿದರೂ ಸಾಕು, ಸಮೃದ್ಧವಾಗಿ ಬೆಳೆಯಬಹುದು. ಚೆನ್ನಾಗಿ ನೀರು ಇಂಗುವ ಮಣ್ಣಿನಲ್ಲಿ ಹುಲುಸಾಗಿ ಬೆಳೆಯುತ್ತದೆ. ಸಸಿಗಳ ಕೆಳಭಾಗದಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳಿ. ಸುಗಂಧಪೂರಿತ ಎಣ್ಣೆಗಾಗಿ ತೋಟಗಳಲ್ಲಿ ಇದನ್ನು ಬೆಳೆಸುತ್ತಾರೆ.