ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರನ್ನು ಕಾಡಿದ ಅನಾರೋಗ್ಯ

Last Updated 4 ಆಗಸ್ಟ್ 2017, 10:53 IST
ಅಕ್ಷರ ಗಾತ್ರ

ಬಿಡದಿ (ರಾಮನಗರ): ಈಗಲ್‌ ಟನ್‌ ರೆಸಾರ್ಟ್‌ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯಿಂದಾಗಿ ಇಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್‌ ಶಾಸಕರು ಒತ್ತಡಕ್ಕೆ ಒಳಗಾಗಿದ್ದು, ಗುರು ವಾರ ಕೆಲವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಯನ್ನೂ ಪಡೆದರು.

ಶಾಸಕರಾದ ರಾಜೇಂದ್ರ ಸಿನ್ಹಾ , ಜೋಹಿತಾಬಾಯ್‌ ಪಟೇಲ್‌ ಸೇರಿದಂತೆ ಮೂವರು ಶಾಸಕರು ಬೆಳಿಗ್ಗೆ ಕೆಂಗೇರಿ ಯಲ್ಲಿರುವ ಬಿಜಿಎಸ್‌ ಅಪೋಲೊ ಆಸ್ಪತ್ರೆಗೆ ತೆರಳಿದರು.
ಒಬ್ಬರು ಎದೆನೋವಿನ ಕಾರಣ ಇಸಿಜಿ ಪರೀಕ್ಷೆಗೆ ಒಳಗಾದರೆ, ಉಳಿದ ಇಬ್ಬರು ಜ್ವರ ಹಾಗೂ ಅಧಿಕ ರಕ್ತ ದೊತ್ತಡಕ್ಕೆ ವೈದ್ಯರ ಬಳಿ ಚಿಕಿತ್ಸೆ ಪಡೆ ದರು. ತರುವಾಯ ಮೂವರೂ ರೆಸಾರ್ಟ್‌ಗೆ ಮರಳಿದರು.

ಬಾಲಕೃಷ್ಣ ಭೇಟಿ: ಸಂಸದ ಡಿ.ಕೆ. ಸುರೇಶ್ ಇಡೀ ದಿನ ರೆಸಾರ್ಟ್‌ನಲ್ಲಿಯೇ  ಉಳಿದಿದ್ದರು. ಜೆಡಿಎಸ್‌ನ ಬಂಡಾಯ ಶಾಸಕ ಎಚ್.ಸಿ. ಬಾಲಕೃಷ್ಣ ಸಂಸದರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು. ರೆಸಾರ್ಟ್‌ನ ಹೊರಗೆ ಪತ್ರಕರ್ತರ ಜೊತೆ ಮಾತನಾಡಿದ ಬಾಲ ಕೃಷ್ಣ  ‘ಸಚಿವ ಡಿ.ಕೆ. ಶಿವಕುಮಾರ್ ಮೇಲಿ ನ ಐ.ಟಿ. ದಾಳಿಯು ಅವರನ್ನು ಮಾನಸಿ ಕವಾಗಿ ಕುಗ್ಗಿಸುವ, ರಾಜಕೀಯ ಪ್ರೇರಿತ ದಾಳಿ ಯಾಗಿದೆ’ ಎಂದು ಟೀಕಿಸಿದರು.

‘ರೆಸಾರ್ಟಿನಲ್ಲಿ ಏನೂ ಸಿಗುವುದಿಲ್ಲ ಎಂದು ಐ.ಟಿ. ಅಧಿಕಾರಿಗಳಿಗೆ ಗೊತ್ತಿದ್ದೂ ಹೆದರಿಸುವ ಸಲುವಾಗಿ ದಾಳಿ ನಡೆಸಿ ದ್ದಾರೆ. ಈ ಮೂಲಕ ಹೆಚ್ಚು ಪ್ರಚಾರ ನೀಡಿ ಡಿ.ಕೆ. ಶಿವಕುಮಾರ್ ಅವರನ್ನು ಇಡೀ ದೇಶದಲ್ಲೇ ಹೀರೊ ಮಾಡಿದ್ದಾರೆ’ ಎಂದರು.

‘ರೆಸಾರ್ಟ್‌ ರಾಜಕಾರಣ ಕರ್ನಾಟ ಕಕ್ಕೆ ಹೊಸದೇನಲ್ಲ. ಕೇಂದ್ರದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ. ಮುಂದೆ ಕಾಂಗ್ರೆಸ್ ಕೂಡ ಅಧಿಕಾರಕ್ಕೆ ಬರ ಬಹುದು ಎಂಬುದನ್ನು ಅವರು ಮರೆಯ ಬಾರದು’ ಎಂದು ಎಚ್ಚರಿಸಿದರು. ‘ಗುಜರಾತಿನ ಐದಾರು ಶಾಸಕರ ಜೊತೆಯೂ ಮಾತನಾಡಿದೆ. ಅವರು ಆರಾಮವಾಗಿ ಇದ್ದಾರೆ’ ಎಂದರು.

ಚಿತ್ರತಂಡ ತಂದ ಗೊಂದಲ: ಗುರುವಾರ ಬೆಳಿಗ್ಗೆ 8ರ ಸುಮಾರಿಗೆ ರೆಸಾರ್ಟ್‌ ಮುಂದೆ ಏಕಾಏಕಿ ಬಸ್‌ವೊಂದು ನಿಂತಿದ್ದು, ಶಾಸಕರನ್ನು ಅಲ್ಲಿಂದ ಸ್ಥಳಾಂತರ ಮಾಡಲಾಗುತ್ತಿದೆ ಎಂದು ವದಂತಿ ಹಬ್ಬಿತ್ತು. ‘ರಾಜು ಕನ್ನಡ ಮೀಡಿಯಂ’ ಚಲನಚಿತ್ರದ ಚಿತ್ರೀಕರಣವು ರೆಸಾರ್ಟಿನ ಒಳಗೆ ನಡೆದಿದ್ದು, ನಟ ಸುದೀಪ್‌ ಅತಿಥಿ ಪಾತ್ರದಲ್ಲಿ ಅಭಿನಯಿಸಲಿದ್ದರು.

ಇಡೀ ತಂಡ ಕ್ಯಾರವಾನ್‌ ಬಸ್‌ ಹಾಗೂ 20ಕ್ಕೂ ಹೆಚ್ಚು ವಾಹನಗಳಲ್ಲಿ ರೆಸಾರ್ಟ್‌ ಪ್ರವೇಶಿಸಿತು. ಬಾಗಿಲಲ್ಲಿ ಅವರನ್ನು ತಡೆದ ಭದ್ರತಾ ಸಿಬ್ಬಂದಿ ಪ್ರಶ್ನಿಸತೊಡಗಿದರು. ಕಡೆಗೆ ಹೋಟೆಲ್‌ನ ಸಿಬ್ಬಂದಿ ಮಧ್ಯ ಪ್ರವೇಶಿಸಿ ಒಳಗೆ ಕರೆದೊಯ್ದರು. ರೆಸಾ ರ್ಟ್ ಒಳಗೆ ಸಂಜೆವರೆಗೂ ನಡೆದ ಚಿತ್ರೀ ಕರಣದಲ್ಲಿ ಸುದೀಪ್ ಪಾಲ್ಗೊಂಡರು.

ದೇವಾಲಯಕ್ಕೆ ಭೇಟಿ: ರೆಸಾರ್ಟ್‌ನ ಒಳಗೆ ಇರುವವರ ಪೈಕಿ ಶಾಸಕ ಠಾಕೂರ್ ಎಂಬುವರು ಪರಮ ಆಸ್ತಿಕರಾಗಿದ್ದು, ನಿತ್ಯ ದೇವಾಲಯಗಳಿಗೆ ಭೇಟಿ ನೀಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಈಗಾ ಗಲೇ ಬಿಡದಿ  ಸುತ್ತಲಿನ ಹಲವು ದೇಗು ಲಗಳಿಗೆ ತೆರಳಿರುವ ಅವರು, ಗುರುವಾರ ತಾಲ್ಲೂಕು ಪಂಚಾಯಿತಿ ಸದಸ್ಯ ಗಾಣಕಲ್‌ ನಟರಾಜು ಅವರೊಡನೆ ಸಮೀಪದ ಸಾಯಿಬಾಬಾ ದೇವಸ್ಥಾನಕ್ಕೆ ತೆರಳಿ  ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT