ಸ್ವಾಧ್ಯಾಯ ­­­­

ವೇದ: ಎಲ್ಲ ಕಾಲದ ತಿಳಿವು

‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’. ಈ ಗಾದೆಯನ್ನು ನಾವು ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿರುತ್ತೇವೆ, ಅಥವಾ ಆಡಿರುತ್ತೇವೆ.  ದಿಟ, ಮೇಲ್ನೋಟಕ್ಕೆ ಇದು ಗಾದೆಯ ಸಾರ್ವಕಾಲಿಕತೆಯನ್ನು ಎತ್ತಿಹಿಡಿದಿರುವ ಮಾತು ಎನಿಸುವುದು

ವೇದ: ಎಲ್ಲ ಕಾಲದ ತಿಳಿವು

‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’. ಈ ಗಾದೆಯನ್ನು ನಾವು ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿರುತ್ತೇವೆ, ಅಥವಾ ಆಡಿರುತ್ತೇವೆ.  ದಿಟ, ಮೇಲ್ನೋಟಕ್ಕೆ ಇದು ಗಾದೆಯ ಸಾರ್ವಕಾಲಿಕತೆಯನ್ನು ಎತ್ತಿಹಿಡಿದಿರುವ ಮಾತು ಎನಿಸುವುದು. ಹೌದು, ಇದು ನಿಜ. ಆದರೆ ಇದರ ಜೊತೆಗೆ ಈ ಮಾತು ವೇದದ ಸಾರ್ವಕಾಲಿಕತೆಯನ್ನೂ ಎತ್ತಿಹಿಡಿದಿದೆ. ವೇದದ ಮಾತು ಎಂದಿಗೂ ಸುಳ್ಳಾಗದು ಎಂಬ ನಂಬಿಕೆಯ ಮೇಲೆಯೇ ಈ ಗಾದೆಯ ‘ಸತ್ಯ’ ನಿಂತಿದೆ. ‘ವೇದ’ ಎಂದರೆ ಎಂದಿಗೂ ಬದಲಾಗದ ಅರಿವು, ತಿಳಿವಳಿಕೆ, ಜ್ಞಾನ – ಎಂಬ ನಂಬಿಕೆ ಭಾರತೀಯ ಸಂಸ್ಕೃತಿಯಲ್ಲಿ ಗಾಢವಾಗಿದೆ. ಈ ಗಾದೆಯಲ್ಲೂ ಅದು ಸ್ಪಷ್ಟವಾಗಿಯೇ ಇದೆ. ‘ನಿನ್ನ ಮಾತೇನು ವೇದವಾಕ್ಯವಾ?’ – ಎಂಬ ಮಾತನ್ನು ಆಗಾಗ ಬಳಸುವುದುಂಟು.  ವೇದ ಎನ್ನುವುದು ಎಂದಿಗೂ ಉಲ್ಲಂಘಿಸಲಾಗದ ‘ಮಾತು’ ಎನ್ನುವ ಧ್ವನಿ ಈ ವಾಕ್ಯದಲ್ಲಿದೆ. ಅಷ್ಟೆ ಅಲ್ಲ, ಭಾರತದಲ್ಲಿ ನಾವು ಯಾವುದೇ ವಿದ್ಯೆ, ಕಲೆ, ತಿಳಿವಳಿಕೆ, ಆಚರಣೆ ಗಳನ್ನು ಕುರಿತು ಮಾತನಾಡುವಾಗಲೂ ಅವನ್ನು ವೇದದೊಂದಿಗೆ – ನೇರವಾಗಿಯೋ ಬಳಸಾಗಿಯೋ – ಸಂಬಂಧವನ್ನು ಕಲ್ಪಿಸುತ್ತೇವೆ. ಇಷ್ಟಕ್ಕೂ ‘ವೇದ’ ಎಂದರೇನು?


‘ವೇದ’ ಎನ್ನುವುದನ್ನು ಸರಳವಾಗಿ ವಿವರಿಸಬೇಕು ಎಂದರೆ ಅದನ್ನು ‘ಜ್ಞಾನ’; ‘ಅರಿವು’; ‘ತಿಳಿವಳಿಕೆ’ – ಎನ್ನಬಹುದು. ಒಂದು ವಿಧದಲ್ಲಿ, ಗಾದೆಯ ತಿಳಿವಳಿಕೆಗೂ ವೇದದ ಅರಿವಿಗೂ ಸಂಬಂಧವಿದೆಯೆನ್ನಿ! ಅದು ಹೇಗೆ? ಹೇಗೆಂದರೆ – ಮೊದಲಿಗೆ ಗಾದೆ ಎಂದರೇನು?  ಇದಕ್ಕೆ ಉತ್ತರವನ್ನು ಕಂಡುಕೊಳ್ಳಬೇಕು. ಒಂದು ಸಮುದಾಯ ತನ್ನ ಅನುಭವದ ಹಿನ್ನೆಲೆಯಲ್ಲಿ ಪಡೆದುಕೊಳ್ಳುವ ತಿಳಿವಳಿಕೆಯೇ ‘ಗಾದೆ’.  ಉದಾಹರಣೆಗೆ, ‘ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’ – ಈ ಗಾದೆಯನ್ನೇ ನೋಡಬಹುದು. ಹಲವು ಸಂಸಾರಗಳನ್ನೂ, ಹಲವರು ಅತ್ತೆಯಂದಿರನ್ನೂ ಸೊಸೆಯಂದಿರನ್ನೂ, ಹಲವು ವರ್ಷಗಳ ಚಕ್ರದಲ್ಲಿ ಕಂಡು, ಅದು ಒದಗಿಸುವ ಅನುಭವದಲ್ಲಿ ಮೂಡಿದ ತಿಳಿವಳಿಕೆಯೊಂದು ಈ ಗಾದೆಯ ಗರ್ಭದಲ್ಲಿ ಬೀಜರೂಪದಲ್ಲಿ ಅಡಗಿದೆ. ಹೀಗೆಯೇ ವೇದದ ಅರಿವು ಕೂಡ ಅನುಭವದಲ್ಲಿಯೇ ದಕ್ಕಿರುವಂಥದ್ದಾಗಿರುತ್ತದೆ. ಆದರೆ ವೇದದ  ಅರಿವು ಸಮುದಾಯದ ಅರಿವಿಗಿಂತಲೂ ವ್ಯಕ್ತಿನಿಷ್ಠವಾಗಿರುತ್ತದೆ. ವ್ಯಕ್ತಿಯೊಬ್ಬ ಏಕಾಗ್ರತೆಯಿಂದ ಜಗತ್ತಿನ ರಹಸ್ಯವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಅವನೊಳಗೆ ಮೂಡುವ ಅರಿವೇ ‘ವೇದ’ ಎನಿಸಿಕೊಳ್ಳುತ್ತದೆ. ಅವನ ಈ ಏಕಾಗ್ರತೆಯೇ ‘ತಪಸ್ಸು’; ಹೀಗೆ ತಪಸ್ಸಿನಲ್ಲಿ ನಿರತನಾಗಿ ಅರಿವನ್ನು ಪಡೆಯುವ ವ್ಯಕ್ತಿಯೇ ‘ಋಷಿ’ ಎನಿಸಿಕೊಳ್ಳುತ್ತಾನೆ. ಋಷಿಯಾದವನು ತಾನು ಕಂಡ ಅರಿವನ್ನು ಮಾತಿನ ಮೂಲಕ ವ್ಯಕ್ತಪಡಿಸಿದಾಗ ಅದು ‘ಮಂತ್ರ’ ಎನಿಸಿಕೊಳ್ಳುತ್ತದೆ. ಹೀಗೆ ವೇದ, ಜ್ಞಾನ, ಋಷಿ, ತಪಸ್ಸು – ಇವುಗಳ ನಡುವೆ ನೇರ ನಂಟಿದೆಯೆನ್ನಿ!
ವೇದದ ಬಗ್ಗೆ ಇನ್ನಷ್ಟು ವಿವರಗಳನ್ನು ಮುಂದೆ ನೋಡೋಣ.
 

Comments
ಈ ವಿಭಾಗದಿಂದ ಇನ್ನಷ್ಟು

ವೈಶಾಖದ ಹುಣ್ಣಿಮೆ
ಬಾಲರು ಯಾರು?

ಶಿವರಾತ್ರಿಯಂದು ನಾವು ಜಾಗರಣೆ ಮಾಡುತ್ತೇವೆ, ಅಲ್ಲವೆ? ರಾತ್ರಿ ಮುಂದುವರೆದಂತೆ ನಮಗೆ ನಿದ್ರೆಯ ಸೆಳೆತ ಹೆಚ್ಚುತ್ತಹೋಗುವುದು ಸಹಜ. ಆಗ ‘ಈ ರಾತ್ರಿ ಇನ್ನೂ ಮುಗಿಯುತ್ತಲೇ ಇಲ್ಲ!...

20 Jan, 2018
ಗಾಯನಕ್ಕೆ ಸಿದ್ಧವಾದ ರಾಮಕಥೆ

ರಾಮಾಯಣ ರಸಯಾನ
ಗಾಯನಕ್ಕೆ ಸಿದ್ಧವಾದ ರಾಮಕಥೆ

20 Jan, 2018
’ನಮಗೆ ಕಾವೇರಿ ನೀರೇ ಬೇಡ! ’

ವಿಡಂಬನೆ
’ನಮಗೆ ಕಾವೇರಿ ನೀರೇ ಬೇಡ! ’

13 Jan, 2018

ಅಧ್ಯಯನ
ಸೂರ್ಯ: ಜಗತ್ತಿನ ಕಣ್ಣು

ಸೂರ್ಯನು ಹುಟ್ಟಿದ ಕೂಡಲೇ ಕತ್ತಲು ಸರಿಯುತ್ತದೆ; ಎಲ್ಲರ ಕಣ್ಣಿಗೂ ಕಾಣುವಂಥವನು ಅವನು; ಅವನ ಹುಟ್ಟಿಗೂ ಜಗತ್ತಿನ ಆಗುಹೋಗುಗಳಿಗೂ ನೇರ ಸಂಬಂಧವಿದೆ. ಇವೆಲ್ಲವೂ ಸೂರ್ಯನ ಭೌತಿಕ ವಿವರಗಳು. ...

13 Jan, 2018
ಕಲೆಗಾಗಿ ಕಲೆ ಅಲ್ಲ!

ರಾಮಾಯಣ ರಸಾಯನ 22
ಕಲೆಗಾಗಿ ಕಲೆ ಅಲ್ಲ!

13 Jan, 2018