ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪರಾಷ್ಟ್ರಪತಿ ಆಯ್ಕೆ: ಮಧ್ಯಾಹ್ನ 1ರ ವರೆಗೆ ಶೇ 90.83ರಷ್ಟು ಮತ ಚಲಾವಣೆ

Last Updated 5 ಆಗಸ್ಟ್ 2017, 9:58 IST
ಅಕ್ಷರ ಗಾತ್ರ

ನವದೆಹಲಿ: ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಸಂಸದರು ಶನಿವಾರ ಮತ ಚಲಾಯಿಸುತ್ತಿದ್ದು, ಮಧ್ಯಾಹ್ನ 1ರ ವರೆಗೆ ಶೇಕಡಾ 90.83ರಷ್ಟು ಮತಗಳು ಚಲಾವಣೆಯಾಗಿವೆ.

ಉಪರಾಷ್ಟ್ರಪತಿ ಆಯ್ಕೆಗೆ ಎನ್‌ಡಿಎ ಅಭ್ಯರ್ಥಿ ಎಂ. ವೆಂಕಯ್ಯ ನಾಯ್ಡು, ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ಇದೆ.

785 ಮತದಾರರ ಪೈಕಿ 713 ಮತಗಳು ಮಧ್ಯಾಹ್ನ 1ರ ವರೆಗೆ ಚಲಾವಣೆಯಾಗಿವೆ. ಇದು ಶೇ 90.83ರಷ್ಟಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಮುಕುಲ್‌ ಪಾಂಡೆ ತಿಳಿಸಿದ್ದಾರೆ. 

ಬೆಳಿಗ್ಗೆ ಮೊದಲ ಗಂಟೆಯಲ್ಲಿ ತಮ್ಮ ಮತ ಚಲಾಯಿಸಲು ಕಾಯುತ್ತಿದ್ದ ಬಹುತೇಕ ಸಂಸದರು ಹಕ್ಕನ್ನು ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ. 

ಬೆಳಿಗ್ಗೆ 10ಕ್ಕೆ ಮತದಾನ ಆರಂಭವಾಗುವುದಕ್ಕೂ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು ಸರದಿಯಲ್ಲಿ ನಿಂತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT