ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಡ್ರಾಮಾ ಜೂನಿಯರ್ಸ್'ನಲ್ಲಿ ಬ್ರಾಹ್ಮಣರ ಅವಹೇಳನ; ಝೀ ವಾಹಿನಿ ವಿರುದ್ಧ ಸಾಮಾಜಿಕ ತಾಣದಲ್ಲಿ ಟೀಕಾ ಪ್ರಹಾರ!

Last Updated 8 ಆಗಸ್ಟ್ 2017, 14:10 IST
ಅಕ್ಷರ ಗಾತ್ರ

ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಷೋ ಡ್ರಾಮಾ ಜೂನಿಯರ್ಸ್ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಟೀಕಾ ಪ್ರಹಾರವಾಗುತ್ತಿದೆ. ಡ್ರಾಮಾ ಜ್ಯೂನಿಯರ್ಸ್ ನಲ್ಲಿ ಆಗಸ್ಟ್ 5 ಶನಿವಾರ ಪ್ರಸಾರವಾದ ಮಕ್ಕಳ 'ಡ್ರಾಮಾ'ದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಲಾಗಿದೆ ಎಂದು ಬ್ರಾಹ್ಮಣ ಸಮುದಾಯ  ಝೀ ವಾಹಿನಿ ಮತ್ತು ಡ್ರಾಮಾ ಜೂನಿಯರ್ಸ್ ತಂಡದ ವಿರುದ್ಧ ಗುಡುಗಿದೆ.

ಅಂಥದ್ದೇನಿತ್ತು?

ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ಸುಮಿತ್, ಶ್ರಾವ್ಯ, ಶ್ರೀಷಾ ಮತ್ತು ಅನುಪ್ ಗೃಹ ಪ್ರವೇಶದ ಡ್ರಾಮಾವೊಂದನ್ನು ಪ್ರದರ್ಶಿಸಿದ್ದರು. ಆ ಡ್ರಾಮಾದಲ್ಲಿ ಬ್ರಾಹ್ಮಣ ಪೂಜಾರಿಗಳ ಪಾತ್ರವಿದೆ. ಇದರಲ್ಲಿ ಪೂಜೆ ಮಾಡಲು ಬರುವ ಬ್ರಾಹ್ಮಣರನ್ನು ಹೀನಾಯವಾಗಿ ತೋರಿಸಿದ್ದು ಮಾತ್ರವಲ್ಲ ಕಾಮಭಂಗಿಗಳನ್ನು ಪ್ರದರ್ಶಿಸುವ ಪ್ರಹಸನ ನಡೆದಿದೆ ಎಂದು ಬ್ರಾಹ್ಮಣ ಸಮುದಾಯ ವಾಹಿನಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದೆ.

ಫೇಸ್‍ಬುಕ್‍ನಲ್ಲಿ ಝೀ ವಾಹಿನಿ ಮಾತ್ರ ಅಲ್ಲ, ತೀರ್ಪುಗಾರರ ವಿರುದ್ಧವೂ ಆಕ್ರೋಶ

ವಾಹಿನಿ ಕ್ಷಮೆ ಕೇಳಲಿ

ಬ್ರಾಹ್ಮಣರು ಯಾಕೆ  ಸಿಟ್ಟಾಗಬೇಕು?

ಬ್ರಾಹ್ಮಣರನ್ನು ಅವಹೇಳನ ಮಾಡಲಾಗಿದೆ ಎಂದು ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತವಾಗಿರುವ ಜತೆಗೆ ಕೆಲವು ನೆಟಿಜನ್ ‍ಗಳು ಬ್ರಾಹ್ಮಣರು ಯಾಕೆ ಸಿಟ್ಟಾಗಬೇಕು? ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT