ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಸಂತೆಯಲ್ಲಿ...

Last Updated 9 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

2017 ಹ್ಯುಂಡೈ ವರ್ನಾ ಬಿಡುಗಡೆಗೆ ಸಿದ್ಧತೆ

ಹ್ಯುಂಡೈ ತನ್ನ 5ನೇ ತಲೆಮಾರಿನ ವರ್ನಾ ಸೆಡಾನ್ ಅನ್ನು ಪರಿಚಯಿಸುವ ಸಿದ್ಧತೆಯಲ್ಲಿದೆ. ಭಾರತದಲ್ಲಿ ಇದೇ ಆಗಸ್ಟ್ 22ಕ್ಕೆ ವರ್ನಾ ಬಿಡುಗಡೆಗೊಳ್ಳಲಿದ್ದು, 21ರವರೆಗೆ ಬುಕ್ಕಿಂಗ್ ಇರಲಿದೆ.

ಕೆ2 ಪ್ಲಾಟ್‌ಫಾರ್ಮ್‌ನ ಮೇಲೆ ವರ್ನಾ ಅಭಿವೃದ್ಧಿಗೊಂಡಿದೆ. ಹೊಸ ಕ್ಯಾಸ್ಕೇಡ್ ವಿನ್ಯಾಸದ ಫ್ರಂಟ್ ಗ್ರಿಲ್ ಇದ್ದು, ಇದನ್ನು ಹ್ಯುಂಡೈನ ಹೊಸ ವಿನ್ಯಾಸ ಭಾಷೆ ಎಂದು ಪರಿಗಣಿಸಲಾಗಿದೆ. ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿದ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಪ್ರೊಜೆಕ್ಟರ್ ಫಾಗ್‌ಲ್ಯಾಂಪ್‌, 16 ಇಂಚಿನ ಡೈಮಂಡ್ ಕಟ್ ಅಲಾಯ್ ಚಕ್ರಗಳು, ಎಲ್‌ಇಡಿ ಟೇಲ್ ಲ್ಯಾಂಪ್ ಕ್ಲಸ್ಟರ್‌ಗಳು ಹಾಗೂ ಶಾರ್ಕ್ ಫಿನ್ ಆ್ಯಂಟೆನಾ ಸೆಡಾನ್‌ಗೆ ಹೊಸ ನೋಟ ದಕ್ಕಿಸಿದೆ.

ಆಟೊ ಲಿಂಕ್ ಕನೆಕ್ಟೆಡ್ ಕಾರ್‌ ಟೆಕ್ನಾಲಜಿ, ರಿಯರ್ ಎಸಿ ವೆಂಟ್‌ಗಳು, 7 ಇಂಚಿನ ಆಡಿಯೊ ವಿಡಿಯೊ ನೇವಿಗೇಷನ್ ಟಚ್‌ಸ್ಕ್ರೀನ್ ಇನ್ಫೊಟೇನ್ಮೆಂಟ್ ಸಿಸ್ಟಂ, ಐಪಿಎಸ್ ಪ್ಯಾನೆಲ್, ವಾಯ್ಸ್ ರೆಕಗ್ನಿಷನ್, ಎಲೆಕ್ಟ್ರಿಕ್ ಸನ್‌ರೂಫ್ ಹೀಗೆ ಆಯ್ಕೆಗಳೂ ಸಾಕಷ್ಟಿವೆ. ಸುರಕ್ಷತೆಗೆ 6 ಏರ್‌ಬ್ಯಾಗ್, ಫ್ಲೋರ್ ಕಾರ್ಪೆಟ್ ಹುಕ್, ಪಾರ್ಕಿಂಗ್ ಸೆನ್ಸರ್, ಸೆನ್ಸಿಂಗ್ ಆಟೊ ಡೋರ್ ಲಾಕ್ ಇದೆ.121 ಬಿಎಚ್‌ಪಿ 1.6 ಲೀಟರ್ ಪೆಟ್ರೋಲ್ ಹಾಗೂ 126ಬಿಎಚ್‌ಪಿ 1.6 ಲೀಟರ್ ಡೀಸೆಲ್ ಎಂಜಿನ್ ಇದ್ದು,
6 ಸ್ಪೀಡ್ ಮ್ಯಾನ್ಯುಯಲ್ ಹಾಗೂ 6 ಸ್ಪೀಡ್ ಆಟೊಮೆಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ. ಇದರ ಬೆಲೆ ಒಂಬತ್ತು ಲಕ್ಷ ರೂಪಾಯಿ ಎಂದು ನಿರೀಕ್ಷಿಸಲಾಗಿದೆ.

***

ಗಿಕ್ಸರ್ ಎಸ್‌ಎಫ್ ‘ಎಬಿಎಸ್’ ಬುಕ್ಕಿಂಗ್ ಆರಂಭ

ಎಬಿಎಸ್ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ) ಇರುವ ಸುಜುಕಿ ಗಿಕ್ಸರ್ ಎಸ್‌ಎಫ್‌ ಸದ್ಯಕ್ಕೇ ಶೋರೂಂಗೆ ಬರಲು ಸಜ್ಜಾಗಿದೆ. ಈ ಅಪ್‌ಡೇಟೆಡ್‌ ಬೈಕ್‌ಗೆ ಬುಕ್ಕಿಂಗ್ ಕೂಡ ಆರಂಭಗೊಂಡಿದೆ.

ಸುಜುಕಿಯು ಸದ್ಯಕ್ಕೆ ಈ ಎಬಿಎಸ್ ಅನ್ನು ತನ್ನ ಎಫ್‌1 ಹಾಗೂ ಗಿಕ್ಸರ್ ಎಸ್‌ಎಫ್‌ಗಳಲ್ಲಿ ಅಳವಡಿಸಿದೆ. ಇದು ಈ ವಿಭಾಗದಲ್ಲಿ ಸುರಕ್ಷಾ ಆಯ್ಕೆ ಹೊಂದಿರುವ ಮೊದಲ ಬೈಕ್ ಆಗಿದೆ. ಬೈಕಿನ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಅದೇ 154.9 ಸಿಸಿ ಸಿಂಗಲ್ ಸಿಲಿಂಡರ್ ಏರ್‌ಕೂಲ್ಡ್ ಮೋಟಾರು ಹೊಂದಿರಲಿದೆ.

ನಿಖರವಾಗಿ ಈ ಬೈಕ್‌ನ ಎಕ್ಸ್ ಶೋರೂ ಬೆಲೆಯನ್ನು ತಿಳಿಸಲಾಗಿಲ್ಲ. ಆದರೆ ಡೀಲರ್‌ಗಳ ಪ್ರಕಾರ ಈ ಎಬಿಎಸ್ ಆಯ್ಕೆಗೆ ಹೆಚ್ಚುವರಿಯಾಗಿ ₹ 7 ಸಾವಿರ ಬೆಲೆ ಹೆಚ್ಚಿರುವುದಾಗಿ ತಿಳಿದುಬಂದಿದೆ. ಒಟ್ಟಾರೆ ₹96,000 ಎಕ್ಸ್‌ ಶೋ ರೂಂ ಬೆಲೆ ಎಂದು ಪರಿಗಣಿಸಲಾಗಿದೆ.

***

ಟಾಟಾದಿಂದ ಮೊದಲ ಎಲೆಕ್ಟ್ರಿಕ್ ಕಾರು

ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಟಾಟಾ ಮೋಟಾರ್ಸ್ ತನ್ನ ಮೊದಲ ಎಲೆಕ್ಟ್ರಿಕ್ ವಾಹನವನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.

ಈ ಟಾಟಾ ಟಿಯಾಗೊ ಎಲೆಕ್ಟ್ರಿಕ್ ವಾಹನ ಬೋಲ್ಟ್ ಬಿಇವಿ ಮಾದರಿಯಿಂದ ಹಲವು ಅಂಶಗಳನ್ನು ತೆಗೆದುಕೊಂಡಿದ್ದು, ಬೋಲ್ಟ್‌ನ ಎಲೆಕ್ಟ್ರಿಕ್ ಆವೃತ್ತಿಯಾಗಿ ಇದನ್ನು ಕಾಣಬಹುದು.

ಟಾಟಾ ಮೋಟಾರ್ಸ್ ಯುಕೆಯ ಟಾಟಾ ಮೋಟಾರ್ಸ್ ಯುರೋಪಿಯನ್ ಟೆಕ್ನಿಕಲ್ ಸೆಂಟರ್‌ನೊಂದಿಗೆ ಕೂಡಿ, ಬ್ಯಾಟರಿಯಿಂದ ಕಾರ್ಯ ನಿರ್ವಹಿಸುವ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿಪಡಿಸುವ ಕೆಲಸದಲ್ಲಿ ನಿರತವಾಗಿದೆ. ಶೀಘ್ರವೇ ಟಾಟಾ ಟಿಯಾಗೊ ಎಲೆಕ್ಟ್ರಿಕ್ ವಾಹನವನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದಾಗಿಯೂ ತಿಳಿಸಿದೆ.

ಯುಕೆಯಲ್ಲಿ ಲೋ ಕಾರ್ಬನ್ ಕಾರುಗಳ ಕುರಿತು ನಡೆದ ಕಾರ್ಯಕ್ರಮದಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಅವಶ್ಯಕತೆ ಹೆಚ್ಚುತ್ತಿರುವುದರಿಂದ ಕಡಿಮೆ ಬೆಲೆಗೆ ಅದನ್ನು ಹೊರತರುವ ತಯಾರಿ ನಡೆದಿರುವುದಾಗಿಯೂ ತಿಳಿದುಬಂದಿದೆ.

ಸಂಪೂರ್ಣ ಎಲೆಕ್ಟ್ರಿಕ್ ಬಸ್ ಅಭಿವೃದ್ಧಿ ಆಲೋಚನೆಯಿದ್ದು, ಹೊಗೆ ಉಗುಳುವ ಪ್ರಮಾಣ ತಗ್ಗಿಸುವ ಉದ್ದೇಶ ಇದರ ಹಿಂದಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT