ಸಂಕ್ಷಿಪ್ತ ಸುದ್ದಿ

ನಿರ್ಮಾಣಗೊಳ್ಳಲಿದೆ ವಿಶ್ವದಲ್ಲೆ ಅತಿ ದೊಡ್ಡ ಹೊದಿಕೆ

‘4,500 ಚದರ ಮೀಟರ್‌ ಗಾತ್ರದಲ್ಲಿ ನಿರ್ಮಾಣವಾಗುತ್ತಿರುವ ಈ ಹೊದಿಕೆ ವಿಶ್ವದಲ್ಲೇ ಅತೀ ದೊಡ್ಡ ಹೊದಿಕೆಯಾಗಲಿದೆ. ಇದನ್ನು ಬಾಹ್ಯಾಕಾಶದಿಂದಲೂ ಕಾಣಬಹುದು’ ಎಂದು ಸಂಘಟನೆಯ ಕೆರೋಲಿನ್‌ ಸ್ಟೇನ್‌ ಹೇಳಿದ್ದಾರೆ

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್‌ ಮಂಡೇಲಾ ಅವರ ಭಾವಚಿತ್ರವಿರುವ ಬೃಹತ್‌ ಹೊದಿಕೆಯೊಂದನ್ನು ಇಲ್ಲಿನ ವಿವಿಧ ಕಾರಾಗೃಹಗಳಲ್ಲಿರುವ ಕೈದಿಗಳು ಸಿದ್ಧಪಡಿಸುತ್ತಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಮಂಡೇಲಾ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ‘64 ಬ್ಲಾಂಕೆಟ್ಸ್‌ ಪಾರ್‌ ಮಂಡೇಲಾ’ ಸಂಘಟನೆಯು ಈ ಯೋಜನೆಯನ್ನು ಹಮ್ಮಿಕೊಂಡಿದೆ.

‘4,500 ಚದರ ಮೀಟರ್‌ ಗಾತ್ರದಲ್ಲಿ ನಿರ್ಮಾಣವಾಗುತ್ತಿರುವ ಈ ಹೊದಿಕೆ ವಿಶ್ವದಲ್ಲೇ ಅತೀ ದೊಡ್ಡ ಹೊದಿಕೆಯಾಗಲಿದೆ. ಇದನ್ನು ಬಾಹ್ಯಾಕಾಶದಿಂದಲೂ ಕಾಣಬಹುದು’ ಎಂದು ಸಂಘಟನೆಯ ಕೆರೋಲಿನ್‌ ಸ್ಟೇನ್‌ ಹೇಳಿದ್ದಾರೆ

ಕೀನ್ಯಾ ಅಧ್ಯಕ್ಷರಾಗಿ ಉಹುರು ಕೆನ್ಯಾಟ್ಟಾ ಆಯ್ಕೆ

ನೈರೋಬಿ (ಎಎಫ್‌ಬಿ): ವಿವಾದಿತ ಚುನಾವಣೆಯಲ್ಲಿ ಶೇಕಡಾ 54.27 ಮತಗಳೊಂದಿಗೆ ಕೀನ್ಯಾ ಅಧ್ಯಕ್ಷ ಉಹುರು ಕೆನ್ಯಾಟ್ಟಾ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗವು ಫಲಿತಾಂಶ ಪ್ರಕಟಿಸಿದೆ. ಪ್ರತಿಸ್ಪರ್ಧಿ ರೈಲಾ ಒಡಿಂಗಾ ಶೇಕಡಾ 44.74 ಮತ ಪಡೆದಿದ್ದಾರೆ ಎಂದು ತಿಳಿಸಿದೆ.

’ಕಾನೂನಿನ ಅಗತ್ಯತೆ ಪೂರೈಸಿದ ನಂತರ, ಉಹುರು ಕೆನ್ಯಾಟ್ಟಾ ಅವರನ್ನು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ’ ಎಂಬುದನ್ನು ಘೋಷಿಸುತ್ತೇನೆ ಎಂದು ಚುನಾವಣಾ ಆಯೋಗದ ಮುಖ್ಯಸ್ಥ ವಾಫುಲಾ ಚೆಬುಕಟ್ಟಿ ತಿಳಿಸಿದರು.

ಸಸ್ಯ ಆಧಾರಿತ ಜೈಕಾ ಲಸಿಕೆಗಳ ಅಭಿವೃದ್ಧಿ

ವಾಷಿಂಗ್ಟನ್‌ (ಪಿಟಿಐ): ವಿಶ್ವದ ಮೊದಲ ಜೈಕಾ ಲಸಿಕೆಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಇದು ಸೊಳ್ಳೆ ಹರಡುವ ವೈರಸ್‌ಗಳ ವಿರುದ್ಧ ಇತರೆ ಲಸಿಕೆಗಳಿಗಿಂತ ಪರಿಣಾಮಕಾರಿ, ಅಗ್ಗ ಹಾಗೂ ಸುರಕ್ಷಿತ ಔಷಧಿಯಾಗಿದೆ.

ಪ್ರಸ್ತುತ ಜೈಕಾ ಎದುರಿಸಲು ಪರಿಣಾಮಕಾರಿ ಲಸಿಕೆಗಳು ಹಾಗೂ ಚಿಕಿತ್ಸೆಗಳು ಲಭ್ಯವಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

ಪ್ರವಾಹಕ್ಕೆ ಹನ್ನೊಂದು ಬಲಿ

ಟೆಹರಾನ್‌: ಈಶಾನ್ಯ ಇರಾನ್‌ನಲ್ಲಿ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಹನ್ನೊಂದು ಮಂದಿ ಮೃತಪಟ್ಟು ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ರೆಡ್‌ ಕ್ರೆಸೆಂಟ್‌ ವರದಿ ಮಾಡಿದೆ.

ಈ ಅವಘಡದಲ್ಲಿ ಮೃತಪಟ್ಟ ಹನ್ನೊಂದು ಮಂದಿಯ ಪೈಕಿ ಎಂಟು ಮಂದಿ ಖೊರಾಸನ್‌ ರಝಾವಿ ಪ್ರಜೆಗಳು. ಇಬ್ಬರು ಗೊಲೆಸ್ತಾನಿಯರು, ಒಬ್ಬರು ಉತ್ತರ ಖೊರಸನ್‌ನ ಪ್ರಜೆ ಎಂದು ತಿಳಿದುಬಂದಿದೆ. ಶುಕ್ರವಾರ ಬಿರುಗಾಳಿ ಸಹಿತ ಮಳೆಯಿಂದಾಗಿ ಐದು ಪ್ರಾಂತ್ಯಗಳಲ್ಲಿ ಪ್ರವಾಹ ಉಂಟಾಗಿದ್ದು, ಕೆಲವು ಗ್ರಾಮಗಳು ಶನಿವಾರ ಸಂಪರ್ಕ ಕಳೆದುಕೊಂಡಿವೆ.

Comments
ಈ ವಿಭಾಗದಿಂದ ಇನ್ನಷ್ಟು
ಪಾಕಿಸ್ತಾನದಲ್ಲಿ ಚರ್ಚ್‌ ಮೇಲೆ ಉಗ್ರರ ದಾಳಿ: 8 ಜನರ ಹತ್ಯೆ, 44 ಜನರಿಗೆ ಗಾಯ

ಆತ್ಮಾಹುತಿ ದಾಳಿ
ಪಾಕಿಸ್ತಾನದಲ್ಲಿ ಚರ್ಚ್‌ ಮೇಲೆ ಉಗ್ರರ ದಾಳಿ: 8 ಜನರ ಹತ್ಯೆ, 44 ಜನರಿಗೆ ಗಾಯ

17 Dec, 2017

2016ರಲ್ಲಿ ಜಾರಿಯಾದ ತೀರ್ಪಿಗೆ ಆಕ್ಷೇಪ
ಶಿಕ್ಷೆಗೆ ಗುರಿಯಾಗಿದ್ದ ನಾಯಿಗೆ ಜೀವದಾನ

12 ವರ್ಷದ ಬಾಲಕಿಯನ್ನು ಕಚ್ಚಿ ಮರಣದಂಡನೆಗೆ ಗುರಿಯಾಗಿದ್ದ ನಾಯಿಗೆ ಜೀವದಾನ ಸಿಕ್ಕಿದೆ. 2016ರ ಅಕ್ಟೋಬರ್‌ನಲ್ಲಿ ಸಂತಕ್ವಿನ್‌ ನಗರದ ನ್ಯಾಯಾಧೀಶರು ನಾಯಿಗೆ ಶಿಕ್ಷೆ ವಿಧಿಸಿದ್ದರು. ಇದಕ್ಕೆ...

17 Dec, 2017

ಅಮೆರಿಕದ ಅಧ್ಯಯನ ವರದಿ
ಗರ್ಭಿಣಿಯರಲ್ಲಿ ಮಧುಮೇಹ; ಮಗುವಿನ ಹೃದಯಕ್ಕೆ ಹಾನಿ

ಗರ್ಭ ಧರಿಸಿದ ಆರಂಭದ ಹಂತದಲ್ಲಿ ಕಂಡುಬರುವ ಮಧುಮೇಹದಿಂದಾಗಿ ಹುಟ್ಟುವ ಮಗುವಿನ ಹೃದಯಕ್ಕೆ ಹಾನಿಯಾಗುವ ಸಂಭವವಿರುತ್ತದೆ ಎಂದು ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಮೆಡಿಸಿನ್‌...

17 Dec, 2017
ಎಚ್‌1ಬಿ ವೀಸಾ ನಿಯಮ ಬದಲು ಪತ್ನಿ–ಪತಿಯ ಉದ್ಯೋಗಕ್ಕೆ ಕತ್ತರಿ?

ಭಾರತೀಯರಿಗೆ ತೊಂದರೆಯಾಗುವ ಸಾಧ್ಯತೆ
ಎಚ್‌1ಬಿ ವೀಸಾ ನಿಯಮ ಬದಲು ಪತ್ನಿ–ಪತಿಯ ಉದ್ಯೋಗಕ್ಕೆ ಕತ್ತರಿ?

17 Dec, 2017
ಚಂಡಮಾರುತ: ಫಿಲಿಪ್ಪೀನ್ಸ್‌ನಲ್ಲಿ ಮೂವರು ನಾಪತ್ತೆ

ಸಮರ್‌ ದ್ವೀಪದಲ್ಲಿ ಹಾನಿ
ಚಂಡಮಾರುತ: ಫಿಲಿಪ್ಪೀನ್ಸ್‌ನಲ್ಲಿ ಮೂವರು ನಾಪತ್ತೆ

17 Dec, 2017