ಬಾಂಗ್ಲಾದೇಶದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದ ಜರಾ ನಿರ್ಧಾರ

ಚಿನ್ನ, ಮೇಕಪ್ ಧಿಕ್ಕರಿಸಿದ ವಧು

’ನನಗನ್ನಿಸುವ ಪ್ರಕಾರ, ಈ ಮನಸ್ಥಿತಿಯನ್ನು ನಾವು ಬದಲಿಸಬೇಕಿದೆ. ಮದುಮಗಳು ಎನಿಸಿಕೊಳ್ಳಲು ಯುವತಿಯೊಬ್ಬಳಿಗೆ ಶ್ವೇತವರ್ಣ ನೀಡುವ ಕ್ರೀಮ್, ಚಿನ್ನದ ನೆಕ್ಲೆಸ್ ಅಥವಾ ದುಬಾರಿ ಸೀರೆ ಅಗತ್ಯವೇ ಇಲ್ಲ. ಇವು ಆಕೆಗೆ ಆತ್ಮವಿಶ್ವಾಸವನ್ನು ತುಂಬುತ್ತವೆ ಎಂಬುದರಲ್ಲಿ ನಂಬಿಕೆಯಿಲ್ಲ’

ಚಿನ್ನ, ಮೇಕಪ್ ಧಿಕ್ಕರಿಸಿದ ವಧು

ಢಾಕಾ‌: ಯಾವುದೇ ಆಭರಣ ಧರಿಸದೇ, ಚೂರೂ ಮೇಕಪ್ ಇಲ್ಲದೇ, ತಮ್ಮ ಅಜ್ಜಿಯ ಕಾಟನ್ ಸೀರೆಯುಟ್ಟು ಹಸೆಮಣೆ ಏರಿದ ಬಾಂಗ್ಲಾದೇಶದ ತಸ್ಮಿಮ್ ಜರಾ ಅವರ ನಿರ್ಧಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಬಡವರಿಗೆ ವೈದ್ಯಕೀಯ ನೆರವು ನೀಡುವ ಸಂಸ್ಥೆಯೊಂದರ ಮುಖ್ಯಸ್ಥೆಯಾಗಿರುವ ಜರಾ, ಮದುವೆಯ ದಿನ ಮದುಮಗಳು ಚಿನ್ನಾಭರಣ ಧರಿಸಲೇಬೇಕೆಂಬ ನಿಯಮವನ್ನು ಪ್ರಶ್ನಿಸಿದ್ದಾರೆ.

’ನನಗನ್ನಿಸುವ ಪ್ರಕಾರ, ಈ ಮನಸ್ಥಿತಿಯನ್ನು ನಾವು ಬದಲಿಸಬೇಕಿದೆ. ಮದುಮಗಳು ಎನಿಸಿಕೊಳ್ಳಲು ಯುವತಿಯೊಬ್ಬಳಿಗೆ ಶ್ವೇತವರ್ಣ ನೀಡುವ ಕ್ರೀಮ್, ಚಿನ್ನದ ನೆಕ್ಲೆಸ್ ಅಥವಾ ದುಬಾರಿ ಸೀರೆ ಅಗತ್ಯವೇ ಇಲ್ಲ. ಇವು ಆಕೆಗೆ ಆತ್ಮವಿಶ್ವಾಸವನ್ನು ತುಂಬುತ್ತವೆ ಎಂಬುದರಲ್ಲಿ ನಂಬಿಕೆಯಿಲ್ಲ’ ಎಂದು ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ. ಇದಕ್ಕೆ 91, 000 ಜನರು ಲೈಕ್ ಮಾಡಿದ್ದರೆ, 24,000 ಬಾರಿ ಇದು ಷೇರ್ ಆಗಿದೆ.

ಜರಾ ಅವರ ನಿರ್ಧಾರವನ್ನು ಅವರ ಕೆಲವು ಸಂಬಂಧಿಕರು ವಿರೋಧಿಸಿದ್ದಾರೆ. ನಿರಾಭರಣರಾಗಿದ್ದ ಜರಾ ಜತೆ ಫೋಟೊ ತೆಗೆಸಿಕೊಳ್ಳಲೂ ಕೆಲವರು ಇಷ್ಟಪಡಲಿಲ್ಲವಂತೆ.

ಜರಾ ಅವರ ಈ ನಿಲುವು ಮುಸ್ಲಿಂ ಬಾಹುಳ್ಯದ ಬಾಂಗ್ಲಾದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮದುವೆಗೆಂದೇ ಬಹುತೇಕ ಕುಟುಂಬಗಳು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುತ್ತವೆ. ಇದು ಅವರನ್ನು ಬಹುಕಾಲ ಸಾಲಕೂಪದಲ್ಲಿ ತೊಳಲಾಡುವಂತೆ ಮಾಡುತ್ತದೆ.

ಈ ನಿರ್ಧಾರವನ್ನು ಟೀಕಿಸಿರುವ ವ್ಯಕ್ತಿಯೊಬ್ಬರು, ಮೇಕಪ್ ಅಥವಾ ಆಭರಣ ಧರಿಸುವುದನ್ನು ವಿರೋಧಿಸುವ ಅಧಿಕಾರ ಜರಾ ಅವರಿಗಿಲ್ಲ ಎಂದಿದ್ದಾರೆ. ಆದರೆ ಜರಾ ಅವರ ಬರಹಕ್ಕೆ ಪ್ರತಿಕ್ರಿಯಿಸಿರುವ ಬಹುತೇಕರು ಅವರ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ಧಾರೆ.

Comments
ಈ ವಿಭಾಗದಿಂದ ಇನ್ನಷ್ಟು
ದಾವೂದ್ ಹಣಕಾಸು ವಹಿವಾಟಿನ ಮೇಲೆ ನಿರ್ಬಂಧ

ಭೂಗತ ಪಾತಕಿ
ದಾವೂದ್ ಹಣಕಾಸು ವಹಿವಾಟಿನ ಮೇಲೆ ನಿರ್ಬಂಧ

23 Aug, 2017
ಸೇನೆ ವಾಪಸ್‌ ಪಡೆದರೆ ಮಾತ್ರ ಪರಿಹಾರ: ಚೀನಾ

ದೋಕಲಾ ಬಿಕ್ಕಟ್ಟು
ಸೇನೆ ವಾಪಸ್‌ ಪಡೆದರೆ ಮಾತ್ರ ಪರಿಹಾರ: ಚೀನಾ

23 Aug, 2017
ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ತೊಲಗಲಿ

ಯುದ್ಧ ಮುಂದುವರಿಸಿದರೆ ತಕ್ಕ ಶಾಸ್ತಿ
ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ತೊಲಗಲಿ

23 Aug, 2017

ಲಂಡನ್‌
ದಾವೂದ್ ಹಣಕಾಸು ವಹಿವಾಟಿನ ಮೇಲೆ ನಿರ್ಬಂಧ

ಬ್ರಿಟನ್‌ನಲ್ಲಿ ಹಣಕಾಸು ವಹಿವಾಟು ನಡೆಸುವವರ ಮೇಲೆ ನಿರ್ಬಂಧ ವಿಧಿಸಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ಪಟ್ಟಿಯಲ್ಲಿ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಹೆಸರು ಸೇರ್ಪಡೆಯಾಗಿದೆ. ದಾವೂದ್‌...

23 Aug, 2017
ಉಗ್ರರಿಗೆ ಆಶ್ರಯ: ಪಾಕ್‌ ವಿರುದ್ಧ ಟ್ರಂಪ್‌ ಕಿಡಿ

ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷ
ಉಗ್ರರಿಗೆ ಆಶ್ರಯ: ಪಾಕ್‌ ವಿರುದ್ಧ ಟ್ರಂಪ್‌ ಕಿಡಿ

23 Aug, 2017