ಹೈದರಾಬಾದ್‌ನಲ್ಲಿ ಒಂದು ತಿಂಗಳು

ಮಗನಿಗೆ ಬಡತನ ಪರಿಚಯಿಸಿದ ಶ್ರೀಮಂತ ಉದ್ಯಮಿ

ತಂದೆ ಹಾಕಿದ ಸವಾಲನ್ನು ಸ್ವೀಕರಿಸಿದ ಯುವಕ, ಬಡತನ, ಹಣದ ಮೌಲ್ಯ ಮತ್ತು ನಿರುದ್ಯೋಗ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಒಂದು ತಿಂಗಳು ಕಾಲ ಹೈದರಾಬಾದ್‌ನಲ್ಲಿ ಜೀವನ ಸಾಗಿಸಿದ. ಜನಸಾಮಾನ್ಯರ ಬದುಕು ಬವಣೆಗಳನ್ನು ಹತ್ತಿರದಿಂದ ನೋಡುವ ಜತೆಗೆ ತಾನೂ ಅನುಭವಿಸಿದ.

ಹಿತಾರ್ಥ

ಹೈದರಾಬಾದ್‌: ಆತ ಶ್ರೀಮಂತ ಮನೆತನದ ಯುವಕ. ಸೂರತ್‌ನ ಕೋಟ್ಯಧಿಪತಿ ಕುಟುಂಬದ ಈ ಯುವಕ ಅಮೆರಿಕದ ನ್ಯೂಯಾರ್ಕ್‌ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿದ್ದ. ವಜ್ರ, ಚಿನ್ನವನ್ನೇ ನೋಡುತ್ತ ಬೆಳೆದ ಈ ಯುವಕನಿಗೆ ಬಡತನವೆನ್ನುವುದು ಗೊತ್ತೇ ಇರಲಿಲ್ಲ.

ಇಂತಹ ವಾತಾವರಣದಲ್ಲಿ ಬೆಳೆದ ಯುವಕ, ತಂದೆ ಹಾಕಿದ ಸವಾಲನ್ನು ಸ್ವೀಕರಿಸಿ ಬಡತನ, ಹಣದ ಮೌಲ್ಯ ಮತ್ತು ನಿರುದ್ಯೋಗ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಒಂದು ತಿಂಗಳು ಕಾಲ ಹೈದರಾಬಾದ್‌ನಲ್ಲಿ ಜೀವನ ಸಾಗಿಸಿದ. ಜನಸಾಮಾನ್ಯರ ಬದುಕು ಬವಣೆಗಳನ್ನು ಹತ್ತಿರದಿಂದ ನೋಡುವ ಜತೆಗೆ ತಾನೂ ಅನುಭವಿಸಿದ.

ಈತ 23 ವರ್ಷದ ಹಿತಾರ್ಥ ಧೋಲಕಿಯಾ. ವಜ್ರದ ವ್ಯಾಪಾರಿ ಘನಶ್ಯಾಮ ಧೋಲಕಿಯಾ ಅವರ ಏಳನೇ ಪುತ್ರ ಹಿತಾರ್ಥ. ಸೂರತ್‌ನ ಧೋಲಕಿಯಾ ಕುಟುಂಬ ₹6 ಸಾವಿರ ಕೋಟಿ ಮೌಲ್ಯದ ‘ಹರೇ ಕೃಷ್ಣಾ ಡೈಮಂಡ್‌ ಎಕ್ಸ್‌ಪೋರ್ಟ್‌’ನ ಸಂಸ್ಥಾಪಕರು. ಈ ಕಂಪೆನಿ 71 ದೇಶಗಳಲ್ಲಿ ವಹಿವಾಟು ನಡೆಸುತ್ತಿದೆ.

ಒಂದು ದಿನ ಘನಶ್ಯಾಮ ಅವರು ತಮ್ಮ ಪುತ್ರನಿಗೆ ವಿಭಿನ್ನವಾದ ವಾತಾವರಣದಲ್ಲಿ ಒಂದು ತಿಂಗಳು ಕಾಲ ಜೀವನ ಸಾಗಿಸಬೇಕು. ಈ ಸಮಯದಲ್ಲಿ ಮೊಬೈಲ್‌ ದೂರವಾಣಿ ಬಳಸಬಾರದು ಮತ್ತು ಧೋಲಕಿಯಾ ಕುಟುಂಬದ ಹೆಸರನ್ನು ಯಾವುದೇ ಕಾರಣಕ್ಕೂ ಉಪಯೋಗಿಸಿಕೊಳ್ಳಬಾರದು ಎಂದು ಸವಾಲು ಹಾಕಿದರು.

ಈ ಒಂದು ತಿಂಗಳ ಬದುಕು ಹೈದರಾಬಾದ್‌ನಲ್ಲಿ ಸಾಗಿಸಬೇಕಾಗುತ್ತದೆ ಎನ್ನುವುದು ಹಿತಾರ್ಥ ಅವರಿಗೆ ಮುಂಚಿತವಾಗಿ ಗೊತ್ತೇ ಇರಲಿಲ್ಲ. ಮುಂಬೈ ವಿಮಾನ ನಿಲ್ದಾಣದಲ್ಲಿದ್ದಾಗ ಹಿತಾರ್ಥ ಅವರಿಗೆ ಹೈದರಾಬಾದ್‌ಗೆ ತೆರಳುವಂತೆ ತಂದೆ ಘನಶ್ಯಾಮ ಸೂಚಿಸಿದರು.

ಶಂಷಾಬಾದ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜುಲೈ 10ರಂದು  ಹಿತಾರ್ಥ್‌ ಬಂದಿಳಿದಿದರು. ಆಗಇವರ ಜೇಬಿನಲ್ಲಿ ಇದ್ದದ್ದು ಕೇವಲ ₹500.

‘ಮೊದಲ ಬಾರಿ ಹೈದರಾಬಾದ್‌ ನೋಡಿದ್ದೆ. ಸ್ಥಳೀಯ ತಿಂಡಿ ತಿನಿಸುಗಳು ಮತ್ತು ಭಾಷೆ ಗೊತ್ತೇ ಇರಲಿಲ್ಲ. ವಿಮಾನ ನಿಲ್ದಾಣದಿಂದ ಆತ್ಮವಿಶ್ವಾಸದೊಂದಿಗೆ ಹೊರಗೆ ಹೆಜ್ಜೆ ಹಾಕಿ ತಂದೆಯ ಸವಾಲು ಸ್ವೀಕರಿಸಿದೆ’ ಎಂದು ತಮ್ಮ ಅನುಭವಗಳನ್ನು ಹಿತಾರ್ಥ ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.

‘ಯಾರಿಗೂ ನನ್ನ ಮೂಲ ಗುರುತನ್ನು ಹೇಳಬಾರದು ಎಂದು  ತಂದೆ ಸೂಚಿಸಿದ್ದರು ಮತ್ತು ಒಂದು ವಾರಕ್ಕಿಂತ ಹೆಚ್ಚು ಕಾಲ ಒಂದೇ ಉದ್ಯೋಗದಲ್ಲಿರಬಾರದು ಎಂದು ತಿಳಿಸಿದ್ದರು. ಹೀಗಾಗಿ ಬದುಕಲು ಏನಾದರೂ ಒಂದು ಉದ್ಯೋಗ ಕಂಡುಕೊಳ್ಳಲೇಬೇಕಾಗಿತ್ತು’ ಎಂದು ವಿವರಿಸಿದರು.

‘ಹೈದರಾಬಾದ್‌ ಮತ್ತು ಸಿಕಂದರಾಬಾದ್‌ ನಗರಗಳ ಮಾಹಿತಿಯನ್ನು ಮೊದಲು ಸಂಗ್ರಹಿಸಿದೆ. ಬಳಿಕ ಸಿಕಂದರಾಬಾದ್‌ಗೆ ತೆರಳಿ ಕಡಿಮೆ ಬೆಲೆಯ ಹೋಟೆಲ್‌ವೊಂದರಲ್ಲಿ ಕೊಠಡಿ ಪಡೆದೆ. ನಾನು ಗುಜರಾತ್‌ನ ಬಡರೈತನ ಮಗನಾಗಿದ್ದು, ಉದ್ಯೋಗ ಅರಸಿ ಇಲ್ಲಿಗೆ ಬಂದಿದ್ದೇನೆ ಎಂದು ಹೋಟೆಲ್‌ ಮ್ಯಾನೇಜರ್‌ಗೆ ತಿಳಿಸಿದೆ. ಆರಂಭದಲ್ಲಿ ಮ್ಯಾಕ್‌ಡೊನಾಲ್ಡ್‌ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದೆ. ಬಳಿಕ ಮಾರ್ಕೆಟಿಂಗ್‌ ಕಂಪೆನಿಯಲ್ಲಿ ಡೆಲಿವರಿ ಬಾಯ್‌ ಕೆಲಸಕ್ಕೆ ಸೇರಿಕೊಂಡೆ. ಮತ್ತೆ ಉದ್ಯೋಗ ಬದಲಾಯಿಸಿ ಅಡಿದಾಸ್‌ ಶೂ ಕಂಪೆನಿ ಮತ್ತು ಜಡೆ ಬ್ಲೂ ಶೋರೂಂನಲ್ಲಿ ಸೇಲ್ಸ್‌ಮನ್‌ ಕೆಲಸಕ್ಕೆ ಸೇರಿದೆ’ ಎಂದು ವಿವರಿಸಿದರು.

‘ನನಗೆ ಉದ್ಯೋಗ ನೀಡಿದ ಎಲ್ಲರೂ ಹೃದಯವಂತವರಾಗಿದ್ದರು. ಆದರೆ, ನನ್ನ ಕುಟುಂಬದ ವಿವರಗಳ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಅಪರಿಚತನಿಗೆ ಕೆಲಸ ನೀಡುವಾಗ ಈ ರೀತಿ ಪ್ರಶ್ನೆ ಕೇಳುವುದು ಸಹಜ. ಒಂದು ತಿಂಗಳಲ್ಲಿ ರಸ್ತೆಯ ಬದಿ ತಿಂಡಿ ತಿನಿಸುಗಳ ರುಚಿ ಅನುಭವಿಸಿದೆ ಮತ್ತು ಸ್ಥಳೀಯ ಬಸ್‌ಗಳಲ್ಲಿ ಸಂಚರಿಸಿದೆ.ಹೈದರಾಬಾದ್‌ಗೆ ಬಂದಾಗ ₹500 ಇತ್ತು. ಈಗ ನನ್ನಲ್ಲಿ ₹5 ಸಾವಿರ ಇದೆ. ಇಲ್ಲಿ ದೊರೆತ ಅನುಭವ ನನ್ನ ಉದ್ಯಮದಲ್ಲೂ ನೆರವಿಗೆ ಬರುತ್ತದೆ’ ಎಂದು ವಿವರಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ರಿಯಾಲಿಟಿ ಶೋನಲ್ಲಿ ಬಾಲಕಿಗೆ ಮುತ್ತಿಟ್ಟ ಗಾಯಕ ಪಪೋನ್; ದೂರು ದಾಖಲು

ವಾಯ್ಸ್ ಇಂಡಿಯಾ ಕಿಡ್ಸ್
ರಿಯಾಲಿಟಿ ಶೋನಲ್ಲಿ ಬಾಲಕಿಗೆ ಮುತ್ತಿಟ್ಟ ಗಾಯಕ ಪಪೋನ್; ದೂರು ದಾಖಲು

23 Feb, 2018
ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಮೇಲೆ ಹಲ್ಲೆ ಪ್ರಕರಣ: ಸಿಎಂ ಕೇಜ್ರಿವಾಲ್‌ ನಿವಾಸದಲ್ಲಿ ಸಾಕ್ಷ್ಯ ಸಂಗ್ರಹ

ಪೊಲೀಸ್ ತಂಡದ ಶೋಧ
ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಮೇಲೆ ಹಲ್ಲೆ ಪ್ರಕರಣ: ಸಿಎಂ ಕೇಜ್ರಿವಾಲ್‌ ನಿವಾಸದಲ್ಲಿ ಸಾಕ್ಷ್ಯ ಸಂಗ್ರಹ

23 Feb, 2018
ನೀರವ್‌ಗೆ ಸೇರಿದ ದುಬಾರಿ ಬೆಲೆ ವಾಚ್‌ಗಳು ಜಪ್ತಿ

ಮುಂದುವರಿದ ಶೋಧ
ನೀರವ್‌ಗೆ ಸೇರಿದ ದುಬಾರಿ ಬೆಲೆ ವಾಚ್‌ಗಳು ಜಪ್ತಿ

23 Feb, 2018
ಉತ್ತರ ಪ್ರದೇಶ: 18 ವರ್ಷದ ಮಹಿಳೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಸಾರ್ವಜನಿಕ ಸ್ಥಳದಲ್ಲಿ ಕೃತ್ಯ
ಉತ್ತರ ಪ್ರದೇಶ: 18 ವರ್ಷದ ಮಹಿಳೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

23 Feb, 2018
ನಮ್ಮ ಮಾರ್ಗಗಳು ಬೇರೆ; ಆದರೆ ಗುರಿ ಒಂದೇ: ಕಮಲ್‌ ಹಾಸನ್‌ ನಿರ್ಧಾರಕ್ಕೆ ರಜನಿ ಮೆಚ್ಚುಗೆ‌

ಹೊಸ ರಾಜಕೀಯ ಪಕ್ಷ
ನಮ್ಮ ಮಾರ್ಗಗಳು ಬೇರೆ; ಆದರೆ ಗುರಿ ಒಂದೇ: ಕಮಲ್‌ ಹಾಸನ್‌ ನಿರ್ಧಾರಕ್ಕೆ ರಜನಿ ಮೆಚ್ಚುಗೆ‌

23 Feb, 2018