ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಚಿನ್ನ ಗೆದ್ದ ಸಚಿನ್‌, ಸವಿತಾ

ರಾಜ್ಯ ಮೌಂಟೇನ್‌ ಬೈಕ್‌ ಸೈಕ್ಲಿಂಗ್ ಚಾಂಪಿಯನ್‌ಷಿಪ್‌
Last Updated 12 ಆಗಸ್ಟ್ 2017, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ಪರ್ಧೆಯ ಆರಂಭದಿಂದಲೇ ಉತ್ತಮ ವೇಗ ಕಾಯ್ದುಕೊಂಡ ವಿಜಯಪುರ ಕ್ರೀಡಾನಿಲಯದ ಸಚಿನ್‌ ರಂಜಣಗಿ ಮತ್ತು ಬಾಗಲಕೋಟೆ ಕ್ರೀಡಾ ನಿಲಯದ ಸವಿತಾ ಆಡಗಲ್ಲ ಅವರು ಶನಿವಾರ ಆರಂಭವಾದ ರಾಜ್ಯ ಮೌಂಟೇನ್ ಬೈಕ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ದಿನ ತಲಾ ಎರಡು ಚಿನ್ನದ ಪದಕಗಳನ್ನು ಜಯಿಸಿದರು.

ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಮತ್ತು ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಸ್ಪರ್ಧೆಗಳು ಶಿವಳ್ಳಿ ರಸ್ತೆಯಲ್ಲಿ ನಡೆದವು.

ಬಾಗಲಕೋಟೆ ಕ್ರೀಡಾ ನಿಲಯವನ್ನು ಪ್ರತಿನಿಧಿಸುವ ತುಳಸಿ ಗೆರೆಯ ಸವಿತಾ 14 ವರ್ಷದ ಒಳಗಿನವರ ಬಾಲಕಿಯರ ವಿಭಾಗದಲ್ಲಿ 16 ನಿಮಿಷ 43.05 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಇನ್ನೊಂದು ಚಿನ್ನ ಮಾಸ್‌ ವಿಭಾಗದಲ್ಲಿ ಲಭಿಸಿತು.

ವಿಜಯಪುರ ಕ್ರೀಡಾನಿಲಯ ಸಚಿನ್‌ ರಂಜಣಗಿ 16 ವರ್ಷದ ಒಳಗಿನವರ ಬಾಲಕರ ವಿಭಾಗದಲ್ಲಿ 26 ನಿಮಿಷ 39.50ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೊದಲ ಚಿನ್ನ ಬಾಚಿಕೊಂಡರು. ಎರಡನೇ ಪದಕ 18 ವರ್ಷದ ಒಳಗಿನವರ ವಿಭಾಗದಲ್ಲಿ ಲಭಿಸಿತು. ಎರಡು ದಿನ ನಡೆಯುವ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 130 ಸೈಕ್ಲಿಸ್ಟ್‌ಗಳು ಪಾಲ್ಗೊಂಡಿದ್ದಾರೆ.

ಮೊದಲ ದಿನದ ಫಲಿತಾಂಶ: ಟೈಮ್‌ ಟ್ರಯಲ್‌, ಬಾಲಕರ ವಿಭಾಗ: 14 ವರ್ಷದ ಒಳಗಿನವರು:  ಮಧು ಕಾಡಾಪೂರ (ವಿಜಯಪುರ; ಕಾಲ: 13:43.74ಸೆ.)–1, ಲಾಯಪ್ಪ ಮುಧೋಳ (ಚಂದರಗಿ ಕ್ರೀಡಾ ಶಾಲೆ ; 14:07.77ಸೆ.)–2, ಪ್ರತಾಪ ಪಡಚಿ (ವಿಜಯಪುರ ಕ್ರೀಡಾ ಹಾಸ್ಟೆಲ್‌; 14:45.42ಸೆ.)–3.14 ವರ್ಷದ ಒಳಗಿನವರು: 16 ವರ್ಷದ ಒಳಗಿನವರು:  ಸಚಿನ್‌ ರಂಜಣಗಿ (ವಿಜಯಪುರ; 13:22.59ಸೆ,)–1, ಇ. ಪ್ರಶಾಂತ (13:25.22ಸೆ.)–2, ಮುತ್ತಪ್ಪ ನವನಳ್ಳಿ (ವಿಜಯಪುರ; 13:30.38ಸೆ.)–3.

18 ವರ್ಷದ ಒಳಗಿನವರು: ಸಚಿನ್‌ ರಂಜಣಗಿ (26:39.50ಸೆ.)–1, ಸಂಜು ನಾಯಕ (26:50.56ಸೆ.)–2, ಬಸವರಾಜ ಮಡ್ಡಿ (ಮೂವರೂ ವಿಜಯಪುರ; 28:16.18ಸೆ.)–3.

ಪುರುಷರ ವಿಭಾಗ: ಪೈಗಂಬರ್‌ ನದಾಫ್‌ (ಗದಗ; 27:27.25ಸೆ.)–1, ಶಿವಲಿಂಗಪ್ಪ ಯಳೆಮೇಲಿ (ವಿಜಯಪುರ; 28:54.01)–2, ಪ್ರಶಾಂತ ದೇವಕ್ಕಿ (ವಿಜಯಪುರ; 28:58.28ಸೆ.)–3.  ಮಾಸ್‌ ವಿಭಾಗ (14 ವರ್ಷದ ಒಳಗಿನವರು): ಲಾಯಪ್ಪ ಮುಧೋಳ (ಕ್ರೀಡಾ ಶಾಲೆ ಚಂದರಗಿ; 15:01.22ಸೆ)–1, ಆನಂದ ಮಣ್ಣೂರ (15:04.83ಸೆ.)–2, ಮಧು ಕಾಡಾಪೂರ (ಇಬ್ಬರೂ ವಿಜಯಪುರ; 15:08.43ಸೆ.)–3.

16 ವರ್ಷದ ಒಳಗಿನವರು: ಪರಮೇಶ ಹಿರೇಕುರಬರ (29:40.04ಸೆ,)–1, ಮುತ್ತಪ್ಪಾ ನವಲಳ್ಳಿ (29:41.39ಸೆ.)–2, ಸಂತೋಷ ಬಿಜಾಪುರ (ಮೂವರೂ ವಿಜಯಪುರ ಕ್ರೀಡಾ ನಿಲಯ; 29:42.37ಸೆ.)–3.

ಬಾಲಕಿಯರ ವಿಭಾಗ: 14 ವರ್ಷದ ಒಳಗಿನವರು:  ಸವಿತಾ ಆಡಗಲ್ಲ (ಬಾಗಲಕೋಟೆ; 16:43. 05)–1, ಅಂಕಿತಾ ರಾಠೋಡ (ವಿಜಯಪುರ; 17:21.45ಸೆ.)–2, ಭಾಗ್ಯಶ್ರೀ ಮಠಪತಿ (ಬಾಗಲಕೋಟೆ; 17:47.40ಸೆ.)–3.

16 ವರ್ಷದ ಒಳಗಿನವರು: ಕಾವೇರಿ ಮುರನಾಳ (ಬಾಗಲಕೋಟೆ; 16:00. 15)–1, ಸೌಮ್ಯಾ ಅಂತಾಪೂರ (ಬಾಗಲಕೋಟೆ; 16:04.18ಸೆ.)–2, ಸಹನಾ ಕೋಡಿಗನೂರ (ಕ್ರೀಡಾನಿಲಯ ವಿಜಯಪುರ; 16:04.23ಸೆ.)–3.

18 ವರ್ಷದ ಒಳಗಿನವರು: ಸಾವಿತ್ರಿ ಹೆಬ್ಬಾಳಟ್ಟಿ (ವಿಜಯಪುರ ಕ್ರೀಡಾನಿಲಯ; 16:04.68ಸೆ.)–1, ಕಾವೇರಿ ಮುರನಾಳ (ಬಾಗಲಕೋಟೆ ಜಿಲ್ಲೆ; 16:42.52ಸೆ.)–2, ಆರತಿ ಭಾಟಿ; ವಿಜಯಪುರ; 16:47.14ಸೆ.)–3.

ಮಹಿಳಾ ವಿಭಾಗ: ರೇಣುಕಾ ದಂಡಿನ (ವಿಜಯಪುರ; 16:52.66ಸೆ.)–1, ಸೀಮಾ ಅಡಗಲ್ಲ (ಬಾಗಲಕೋಟೆ ಜಿಲ್ಲೆ; 17:29.33ಸೆ.)–2, ಶಿಲ್ಪಾ ಕಡಕೋಳ (ವಿಜಯಪುರ; 17: 47.18ಸೆ.)–3.

ಮಾಸ್‌ ವಿಭಾಗ (14 ವರ್ಷ ಒಳಗಿನವರು): ಸವಿತಾ ಅಡಗಲ್ಲ (ಬಾಗಲಕೋಟೆ; 17:50.94ಸೆ.)–1, ಅಂಕಿತಾ ರಾಠೋಡ (ವಿಜಯಪುರ ಕ್ರೀಡಾನಿಲಯ; 17:58.01)–2, ಅಕ್ಷತಾ ಬಿರಾದಾರ (ಬಾಗಲಕೋಟೆ ಕ್ರೀಡಾನಿಲಯ; 18:15.06ಸೆ.)–3.

*
ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ವೇದಿಕೆಯಾಗಿರುವ ಕಾರಣ ಸಂಪೂರ್ಣ ಸಾಮರ್ಥ್ಯದೊಂದಿಗೆ ಸೈಕಲ್‌ ಓಡಿಸಿದೆ. ಸಾಕಷ್ಟು ಪೈಪೋಟಿ ಇತ್ತು.
–ಸವಿತಾ ಆಡಗಲ್ಲ,
ಸೈಕ್ಲಿಸ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT