ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಸಾಧ್ಯತೆಗಳ ‘ಫೈರ್ ಅಂಡ್ ಸೇಫ್ಟಿ’

Last Updated 13 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನೀವು ಪಿಯುಸಿ ಫೇಲಾಗಿ ಮನೆಯಲ್ಲಿದ್ದೀರಾ? ಮುಂದೆ ಏನು ಮಾಡುವುದು ಎಂಬ ಯೋಚನೆ ನಿಮ್ಮನ್ನು ಕಾಡುತ್ತಿದ್ದರೆ ಚಿಂತೆ ಬಿಡಿ - ಫೇಲಾಗಿದ್ದರೂ ಉತ್ತಮ ಕೋರ್ಸ್‌ ಕಲಿಯುವ ಮೂಲಕ ನಿಮ್ಮ ಭವಿಷ್ಯಕ್ಕೆ ವೇದಿಕೆ ಕಲ್ಪಿಸುವ ಸಂಸ್ಥೆಯೊಂದು ರಾಜ್ಯದಾದ್ಯಂತ ಕಾರ್ಯ ನಿರ್ವಹಿಸುತ್ತಿದೆ. ಅದೇ ‘ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಫೈರ್ ಅಂಡ್ ಸೇಫ್ಟಿ ಎಂಜಿನಿಯರಿಂಗ್’ (MIFSE).

ಇದೀಗ ಪಿಯುಸಿ ಪೂರಕ ಫಲಿತಾಂಶ ಪರೀಕ್ಷೆ ಪ್ರಕಟವಾಗಿದೆ. 3 ಲಕ್ಷಕ್ಕೂ ಹೆಚ್ಚಿನ ಮಂದಿ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇಂಥ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸ ಹಾಗೂ ಉದ್ಯೋಗ ಪಡೆಯುವ ಕನಸು ಕಮರಿ ಹೋಗಬೇಕಿಲ್ಲ. ಇಲ್ಲಿ ಸುರಕ್ಷತಾ ಕ್ಷೇತ್ರದ ಡಿಪ್ಲೊಮಾ ಕಲಿಯುವುದರ ಜೊತೆಗೆ ಪಿಯುಸಿ ಪರೀಕ್ಷೆಗೂ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತದೆ. ದೇಶದಾದ್ಯಂತ ಇರುವ ಎಲ್ಲ ‘ಮಿಫ್ಸೆ’ ಕೇಂದ್ರಗಳಲ್ಲೂ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಡಿಪ್ಲೊಮಾ ಕೋರ್ಸ್ ಆಗಸ್ಟ್ ಮೂರನೇ ವಾರದಲ್ಲಿ ಆರಂಭವಾಗಲಿದೆ.

2007ರಲ್ಲಿ ರಾಜ್ಯ ಸರ್ಕಾರದ ಮಾನ್ಯತೆ ಪಡೆದು ‘ಅಗ್ನಿ ಶಮನ ಮತ್ತು ಸುರಕ್ಷತೆ’ ಕ್ಷೇತ್ರದ ಕೋರ್ಸ್‌ಗಳನ್ನು ನೀಡಲಾರಂಭಿಸಿದ ಮಂಗಳೂರಿನ ‘ಎಮ್‍ಐಎಫ್‍ಎಸ್‍ಇ’ ವಿದ್ಯಾಸಂಸ್ಥೆ ಇದೀಗ ಭಾರತದೆಲ್ಲೆಡೆ 16 ಶಾಖೆಗಳನ್ನು ಹೊಂದಿದೆ. ದೇಶ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ ಸುರಕ್ಷತಾ ಕ್ಷೇತ್ರದ ಕೋರ್ಸ್‌ಗಳನ್ನು ನೀಡುತ್ತಿದೆ. ಮಂಗಳೂರಿನಲ್ಲಿ ಕೇಂದ್ರ ಕಚೇರಿ ಇದ್ದು, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಉಡುಪಿ, ಶಿವಮೊಗ್ಗ, ದಾವಣಗೆರೆ, ತುಮಕೂರು, ಕಲಬುರ್ಗಿ, ಬೆಳಗಾವಿ ಹಾಗೂ ಹೊಸಪೇಟೆಗಳಲ್ಲಿ ಇದರ ಶಾಖೆಗಳಿವೆ. ಇದುವರೆಗೂ 11 ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಸಂಸ್ಥೆಗಳಲ್ಲಿ ಸೇಫ್ಟಿ ಮತ್ತು ಎಚ್‍ಎಸ್‍ಇ ಆಫೀಸರ್‌ಗಳಂತಹ ಉದ್ಯೋಗ ಪಡೆದಿರುವುದೇ ಈ ಸಂಸ್ಥೆಯ ಯಶಸ್ಸಿಗೆ ದೊರೆತಿರುವ ಪ್ರಮಾಣಪತ್ರ.

ರಾಜ್ಯ ಸರ್ಕಾರದ ಮಾನ್ಯತೆ, ಮಂಗಳೂರು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ ಅಲ್ಲದೆ 2016ರಿಂದ ಬೆಂಗಳೂರು ವಿಶ್ವವಿದ್ಯಾಲಯಗಳ ಮುಖಾಂತರ ಸುರಕ್ಷತೆ ಹಾಗೂ ಆರೋಗ್ಯ, ಸಮಾಜ ಶಿಕ್ಷಣ (ಸೇಫ್ಟಿ ಮತ್ತು ಎಚ್‍ಎಸ್‍ಇ) ಕ್ಷೇತ್ರಗಳಲ್ಲಿನ ವಿವಿಧ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡುವುದರಿಂದ ಈ ಕೋರ್ಸ್‌ಗಳನ್ನು ಕಲಿತ ವಿದ್ಯಾರ್ಥಿಗಳು ಕಲಿತ ತಕ್ಷಣ ಉದ್ಯೋಗ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ಸುರಕ್ಷಾ ಕ್ಷೇತ್ರದಲ್ಲಿ ಉದ್ಯೋಗ ನೀಡುವಿಕೆ, ವಿದ್ಯಾಭ್ಯಾಸದ ಸಾಧನೆಗಳು, ವಿದ್ಯಾಕ್ಷೇತ್ರದ ಮೂಲಸೌಕರ್ಯ ಮತ್ತು ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ, ದೆಹಲಿಯ ‘ವರ್ಲ್ಡ್ ವೈಡ್‌ ಅಚೀವರ್ಸ್‌ ಸಂಸ್ಥೆ’ 2015ರಲ್ಲಿ ‘ಏಷ್ಯಾ ಎಜುಕೇಷನ್ ಸಮ್ಮಿತ್ ಅವಾರ್ಡ್‌’ ನೀಡಿ ಭಾರತದ ಸೇಫ್ಟಿ ಕ್ಷೇತ್ರದ ನಂಬರ್–1 ಸಂಸ್ಥೆ ಎಂದು ಅಂಗೀಕರಿಸಿತು. 2014ರಲ್ಲಿ ಎಕ್ಸಲೆನ್ಸ್ ಅವಾರ್ಡ್‌ ಪಡೆದಿದೆ.

ಈ ಕೋರ್ಸ್‌ ಏಕೆ ಬೇಕು?
ಯಾವುದೇ ಒಬ್ಬ ಮನುಷ್ಯ ನೆಮ್ಮದಿಯಾಗಿರಬೇಕಾದರೆ ಸುರಕ್ಷತೆ ಮುಖ್ಯ. ಅದರಂತೆ ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಸುರಕ್ಷತೆ ಅಗತ್ಯ. ಅಮೆರಿಕದಂತಹ ಮುಂದುವರಿದ ದೇಶಗಳು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿವೆ. ಭಾರತ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕಿದೆ. ವಿವಿಧ ಕೈಗಾರಿಕೆಗಳು ಅಂತರರಾಷ್ಟ್ರೀಯ ಕಂಪೆನಿಗಳು, ವಿವಿಧ ಉದ್ಯಮಗಳು ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಇದೀಗ ಸೇಫ್ಟಿ ಕೋರ್ಸ್ ಕಲಿತವರಿಗೆ ಹೆಚ್ಚಿನ ಅವಕಾಶಗಳಿವೆ.

ಮಂಗಳೂರು, ಬೆಂಗಳೂರು ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ 12ರಿಂದ 14 ವಿವಿಧ ಕೋರ್ಸ್‌ಗಳನ್ನು ಕಲಿಸಲಾಗುತ್ತಿದ್ದು, ಅತ್ಯುತ್ತಮ ಪ್ರಾಧ್ಯಾಪಕರ ತಂಡ ಇದೆ. ಡಿಜಿಟಲ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿರುವ ‘ಮಿಫ್ಸೆ’ ಡಿಜಿಟಲ್ ಪರದೆಯ ಮೂಲಕ ತರಗತಿಗಳನ್ನು ನಡೆಸುತ್ತಿದೆ. ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್, ಇ ಪಠ್ಯ ಪುಸ್ತಕ, ಕೋರ್ಸ್‌ಗಳ ಮಲ್ಟಿ ಮೀಡಿಯಾ ವಿಡಿಯೊ ಒದಗಿಸುತ್ತಿದೆ. ಕಾರ್ಖಾನೆಗಳಿಗೆ ಭೇಟಿ ನೀಡಿ ಪ್ರಾಯೋಗಿಕ ಕಲಿಕೆಯೂ ನಡೆಯುತ್ತದೆ.

ಅವಕಾಶಗಳ ಹೆಬ್ಬಾಗಿಲು: ಇಂದು ಎಲ್ಲ ಕ್ಷೇತ್ರಗಳಲ್ಲೂ ಸುರಕ್ಷತೆ ಅಗತ್ಯ. ಆದ್ದರಿಂದ ಇಲ್ಲಿರುವ ಕೋರ್ಸ್‌ಗಳನ್ನು ಕಲಿತರೆ ವಿಪುಲ ಅವಕಾಶಗಳುಂಟು. ಕೈಗಾರಿಕೆಗಳು, ಹೋಟೆಲ್, ವಿಮಾನ ನಿಲ್ದಾಣ, ಶಿಕ್ಷಣ ಸಂಸ್ಥೆ, ಸಾಫ್ಟ್‌ವೇರ್ ಕಂಪೆನಿ, ಆರ್‌ಬಿಐ, ಬ್ಯಾಂಕ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶವಿದೆ.

ಸಂಸ್ಥೆಯಲ್ಲಿ ಸೇಫ್ಟಿ ಡಿಪ್ಲೊಮಾ ಮತ್ತು ಪಿಜಿ ಡಿಪ್ಲೊಮಾ ಕೋರ್ಸ್‌ಗಳನ್ನು ಕಲಿತವರಿಗೆ ಉದ್ಯೋಗ ಕಲ್ಪಿಸಿ ಕೊಡುವುದಕ್ಕಾಗಿಯೇ ಪ್ರತ್ಯೇಕ ನೇಮಕಾತಿ ಘಟಕ (ಪ್ಲೇಸ್‌ಮೆಂಟ್ ಸೆಲ್) ತೆರೆಯಲಾಗಿದೆ. ಉದ್ಯೋಗ ನೇಮಕಾತಿಗೆ ಸಂಬಂಧಿಸಿದಂತೆ ದೇಶ ವಿದೇಶಗಳ 300ಕ್ಕೂ ಹೆಚ್ಚು ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸಂಸ್ಥೆಯ ವಿದ್ಯಾರ್ಥಿಗಳಿಗೆ ಶೇ 100ರಷ್ಟು ಉದ್ಯೋಗ ಅವಕಾಶದ ಖಾತರಿ ನೀಡಲಾಗುತ್ತಿದೆ.

ಸೇಫ್ಟಿ ಅಧಿಕಾರಿ ಹಾಗೂ ಸಿಬ್ಬಂದಿ ಪ್ರಕ್ರಿಯೆ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚು ಜನಪ್ರಿಯವಾಗುತ್ತಿದ್ದು, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳು ತಮ್ಮ ಯೋಜನಾ ವೆಚ್ಚದ ನಿರ್ದಿಷ್ಟ ಭಾಗವನ್ನು ಸುರಕ್ಷತಾ ಕ್ಷೇತ್ರಕ್ಕಾಗಿಯೇ ಮೀಸಲಿಡಲು ಆರಂಭಿಸಿವೆ. ಇದರಿಂದ ಉದ್ಯಮದಲ್ಲಿ ಆಗುವ ಹೆಚ್ಚಿನ ನಷ್ಟವನ್ನು ತಪ್ಪಿಸಬಹುದು.

ನೋಂದಣಿ ಪಡೆಯಲು ಸಂಪರ್ಕಿಸಿ: ದೂರವಾಣಿ 7022289933/ 7204056933

**

ಮಹಿಳೆಯರಿಗೂ ಆದ್ಯತೆ

ಸೇವಾ ಕ್ಷೇತ್ರದಲ್ಲಿ ಸುರಕ್ಷತೆ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿರುವ ಈ ಕಾಲಘಟ್ಟದಲ್ಲಿ ಪರಿಣಿತ ಮಹಿಳಾ ಸುರಕ್ಷತಾ ಅಧಿಕಾರಿಗಳ ಹೆಚ್ಚಿನ ಅವಶ್ಯಕತೆ ಇದೆ. ಆಸ್ಪತ್ರೆ, ಐಟಿ ಕಂಪೆನಿಗಳು, ಹೋಟೆಲ್, ವಿದ್ಯಾ ಸಂಸ್ಥೆಗಳು ಸೇರಿದಂತೆ ಸೇವಾಕ್ಷೇತ್ರಗಳಲ್ಲಿ ಮಹಿಳಾ ಸುರಕ್ಷತಾ ಅಧಿಕಾರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷದಿಂದ ‘ಡಿಪ್ಲೊಮಾ ಇನ್‌ ಸೇಫ್ಟಿ ಆಫ್‌ ಸರ್ವೀಸ್ ಇಂಡಸ್ಟ್ರಿ’ ಎಂಬ ಹೊಸ ಕೋರ್ಸ್‌ ಆರಂಭಿಸಿದ್ದು, ಇದು ಮಹಿಳೆಯರಿಗೆ ಸೀಮಿತವಾಗಿದೆ.

**

ನಮಗೆ ಭವಿಷ್ಯವೇ ಇಲ್ಲ ಎಂದು ಚಿಂತಿಸುತ್ತಿರುವ ವಿದ್ಯಾರ್ಥಿಗಳಿಗೆ ‘ಎಂಐಎಫ್‌ಎಸ್‌ಇ’ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮೂಡಿಸಿದೆ. ಮಾನವ ಸಂಪನ್ಮೂಲ ಹಾಗೂ ಹಣಕಾಸು ವಿಭಾಗಗಳಂತೆ ಸುರಕ್ಷತೆಯೂ ಒಂದು ವಿಭಾಗ. ಸೇಫ್ಟಿ ಕೋರ್ಸ್‌ ಮಾಡಿದವರಿಗೆ ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗಾವಕಾಶಗಳು ಇದ್ದು, ಕಲಿಯುತ್ತಿರುವ ಸಂದರ್ಭಗಳಲ್ಲೇ ಶೇ 60ರಷ್ಟು ವಿದ್ಯಾರ್ಥಿಗಳಿಗೆ ಕೆಲಸ ಸಿಕ್ಕಿದೆ.

-ಆಂಡೊ ಪೌಲ್
ಸಂಸ್ಥೆಯ ಅಧ್ಯಕ್ಷರು

*

-ಡಿ.ಕೆ. ಬಸವರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT