ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 14–8–1967

Last Updated 13 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹಿಂದೂ ಮಹಾಸಾಗರದಲ್ಲಿ ಅಣು ಸಿಡಿತಲೆಯ ಕ್ಷಿಪಣಿ ಪ್ರಯೋಗಕ್ಕೆ ಚೀನದ ಸಿದ್ಧತೆ
ಟೋಕಿಯೊ, ಆ. 13–
ಹಿಂದೂ ಮಹಾಸಾಗರದಲ್ಲಿ ಇದೇ ಶರತ್ಕಾಲದಲ್ಲಿ ಅನೇಕ ಕಿಲೋ ಟನ್ ಶಕ್ತಿಯ ಅಣ್ವಸ್ತ್ರ ಸಿಡಿತಲೆಯಿಂದ ಕೂಡಿದ ಮಧ್ಯಮ ಪ್ರಮಾಣದ ಬೆಲಿಸ್ಟಿಕ್ ಪ್ರಥಮ ಕ್ಷಿಪಣಿಯ ಹಾರಿಸಲು ಪೀಕಿಂಗ್ ಯೋಜನೆ ಹಾಕಿಕೊಂಡಿರುವಾಗಿ ಜಪಾನಿನ ರಾಷ್ಟ್ರೀಯ ವೃತ್ತಪತ್ರಿಕೆ ‘ಯೋಮಿಯೂರಿ ಷಿಂಬನ್’ ಇಂದು ಇಲ್ಲಿ ವರದಿ ಮಾಡಿತು.

ಆಗ್ನೇಯ ಚೀನಾ ಮತ್ತು ಭಾರತದ ನಡುವಣ ಗಡಿ ಸಮೀಪದಲ್ಲೇ ಹೊಸ ಪ್ರಯೋಗ ಕ್ಷೇತ್ರವೊಂದರಲ್ಲಿ ನೂರಾರು ಮಂದಿ ಅಣು ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಈ ಯೋಜನೆಯಲ್ಲಿ ನಿರತರಾಗಿದ್ದಾರೆಂದೂ ಆ ಪತ್ರಿಕೆ ಪ್ರಕಟಿಸಿದೆ.

ದೆಹಲಿ ಆತಂಕ
ನವದೆಹಲಿ, ಆ. 13–
ಅಣ್ವಸ್ತ್ರ ಸಿಡಿತಲೆ ಇರುವ ಮಧ್ಯಮ ಪ್ರಮಾಣದ ಜೆಲಿಸ್ಟಿಕ್ ಕ್ಷಿಪಣಿಯನ್ನು ಚೀನ ಹಾರಿಸುವ ಸಾಧ್ಯತೆಯ ಸುದ್ದಿ ಇಲ್ಲಿಗೆ ಬಂದಿದೆ ಎಂದು ಗೊತ್ತಾಗಿದೆ. ಟೋಕಿಯೋದಿಂದ ಬಂದಿರುವ ಈ ವರದಿ ವಿಷಯದಲ್ಲಿ ಅಧಿಕೃತ ವೃತ್ತಗಳು ಪ್ರತಿಕ್ರಿಯೆ ವ್ಯಕ್ತಪಡಿಸಲು ನಿರಾಕರಿಸಿದವು. ಕ್ಷಿಪಣಿ ಕ್ಷೇತ್ರದಲ್ಲಿ ಚೀನದ ಬೆಳವಣಿಗೆಯನ್ನು ಗಮನಿಸುತ್ತಿರುವ ತಜ್ಞರುಗಳು ಈ ಬಗ್ಗೆ ‘ಕಳವಳ ಹಾಗೂ ಆತಂಕ’ವನ್ನು ವ್ಯಕ್ತಪಡಿಸಿದ್ದಾರೆ.

‘ಪರಾಯ’ನಾರು?
ಹೈದರಾಬಾದ್, ಆ. 13– ಪಕ್ಷಾಂತರಗೊಳ್ಳುವ ಶಾಸಕರನ್ನು ಸಮಾಜದ ‘ಪರಯರು’ ಎಂದು ಪರಿಗಣಿಸಬೇಕು. ಆಡಳಿತ ಸುಧಾರಣಾ ಮಂಡಳಿಯ ಅಧ್ಯಕ್ಷ ಹಾಗೂ ಪಾರ್ಲಿಮೆಂಟ್ ಸದಸ್ಯ ಶ್ರೀ ಕೆ. ಹನುಮಂತಯ್ಯ ಅವರ ಸಲಹೆಯಿದು.

‘ವೈಯಕ್ತಿಕ ಲಾಭಕ್ಕಾಗಿಯೇ ಅವರು ಪಕ್ಷಾಂತರಗೊಳ್ಳುವುದು’ ಎಂದು ಅವರು ತಿಳಿಸಿದರು. ವಿಧಾನಸಭೆಗಳಲ್ಲಿ ಪಕ್ಷಾಂತರ ಮಾಡುವವರನ್ನು ಸಮಾಜ ಬಹಿಷ್ಕರಿಸಬೇಕೆಂದು ‘ಸ್ವಾತಂತ್ರ್ಯ ಹೋರಾಟ’ ಕುರಿತ ವಿಚಾರಗೋಷ್ಠಿಯೊಂದರಲ್ಲಿ ಭಾಷಣ ಮಾಡುತ್ತ ಅವರು ಹೇಳಿದರು.

ನಾಗಾರ್ಜುನ ಸಾಗರಕ್ಕೆ ‘ಕ್ರೆಸ್ಟ್’ಗೇಟ್: ಮಹಾರಾಷ್ಟ್ರ– ಮೈಸೂರು ನಿಲುವಿನಲ್ಲಿ ಏಕತೆ

ನವದೆಹಲಿ, ಆ. 13– ನಾಗಾರ್ಜುನ ಅಣೆಕಟ್ಟೆಗೆ ‘ಕ್ರೆಸ್ಟ್’ ಗೇಟುಗಳನ್ನು ಅಳವಡಿಸುವ ಆಂಧ್ರ ಸರ್ಕಾರದ ನಿರ್ಧಾರ ವಿರುದ್ಧ ತೀವ್ರ ಪ್ರತಿಭಟನೆ ಸಲ್ಲಿಸಿರುವ ಮೈಸೂರು ಮತ್ತು ಮಹಾರಾಷ್ಟ್ರ ಸರ್ಕಾರಗಳೆರಡೂ ಆ ಬಗ್ಗೆ ಒಂದೇ ರೀತಿಯ ನಿಲುವು ತಾಳಿವೆ.

ಕೈಮಗ್ಗದ ಸಮಸ್ಯೆ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ
ವಿಜಯವಾಡ, ಆ. 13–
ಮೈಸೂರು, ಮದರಾಸ್ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಕೈಮಗ್ಗದ ಕೈಗಾರಿಕೆ ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಚರ್ಚಿಸುವುದಕ್ಕಾಗಿ ಆ ರಾಜ್ಯಗಳ ಮುಖ್ಯಮಂತ್ರಿಗಳು ಈ ತಿಂಗಳ 19 ರಂದು ಬೆಂಗಳೂರಿನಲ್ಲಿ ಸಭೆ ಸೇರುವರು. ಆಂಧ್ರ ವಿಧಾನಸಭಾ ಸದಸ್ಯ ಶ್ರೀ ಪ್ರಗಡ ಕೋಟಯ್ಯ ಅವರು ಈ ಅಂಶವನ್ನು ಈ ರಾತ್ರಿ ಇಲ್ಲಿ ಹೇಳಿದರು.

ಅಲ್ಪ ಸಂಖ್ಯಾತರ ವಿಶ್ವಾಸ ಗಳಿಸಲು ಮತ್ತೆ ಕಾಂಗ್ರೆಸ್ ಯತ್ನ (ಪ್ರಜಾವಾಣಿ ಪ್ರತಿನಿಧಿಯಿಂದ)
ನವದೆಹಲಿ, ಆ. 13–
ಕಳೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಇತರ ಅಲ್ಪಸಂಖ್ಯಾತರಂತೆ ಅನೇಕ ಭಾರತೀಯ ಕ್ರೈಸ್ತರೂ ಸಹ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಲಿಲ್ಲವೆನ್ನುವುದನ್ನು ಕಾಂಗ್ರೆಸ್ ಹೈಕಮಾಂಡ್ ತುಂಬ ತಡವಾಗಿ ಕಂಡುಹಿಡಿದಿದೆ.

ಇದುವರೆಗೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದ ಭಾರತೀಯ ಕ್ರೈಸ್ತರು ಈ ಬಾರಿ ಹೀಗೆ ಮಾಡಲು ಕಾರಣವೇನು ಎನ್ನುವುದರ ಬಗ್ಗೆ ಕಾಂಗ್ರೆಸ್ ತನಿಖೆ ನಡೆಸಲಿದೆ. ದಕ್ಷಿಣ ಮುಂಬಯಿ ಪಾರ್ಲಿಮೆಂಟರಿ ಕ್ಷೇತ್ರದಲ್ಲಿ ಶ್ರೀ ಜಾರ್ಜ್ ಫರ್ನಾಂಡೀಸ್ ಅವರು ಶ್ರೀ ಎಸ್.ಕೆ. ಪಾಟೀಲ್ ಅವರನ್ನು ಸೋಲಿಸಿದುದನ್ನು ಇದಕ್ಕೆ ಉದಾಹಣೆಯಾಗಿ ನೀಡಲಾಗುತ್ತಿದೆ. ಆ ಕ್ಷೇತ್ರದಲ್ಲಿ ಕ್ರೈಸ್ತರು ಜಾತಿಯ ತಳಹದಿಯ ಮೇಲೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿದರು ಎನ್ನುವುದು ಕೆಲವರ ಭಾವನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT