ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮೂರಲ್ಲೂ ಹಿಡಿಯುತ್ತಿದ್ದರು

Last Updated 14 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನಮ್ಮೂರಲ್ಲೂ ಹಿಡಿಯುತ್ತಿದ್ದರು

ಗಣಂಗೂರು ನಂಜೇಗೌಡ ಅವರ ‘ಹಾವ್‌ಬತ್ತಿ ಶಿಕಾರಿ’ (ಆಗಸ್ಟ್‌ 8) ಲೇಖನ ಸೊಗಸಾಗಿದೆ. ರುಚಿಯಾದ ಈ ಮೀನುಗಳನ್ನು ನಮ್ಮೂರಿನ ಪಕ್ಕದ ನದಿಯಲ್ಲೂ ಹಿಡಿದು ಮಾರಲಾಗುತ್ತಿತ್ತು. ಕೇರಳದ ಕಡೆಯವರು ಈ ಮೀನು ಹಿಡಿಯಲು ಬರುತ್ತಿದ್ದರು. ಅವರು ಮೀನು ಹಿಡಿಯಲು ಹೊರಟರೆಂದರೆ ನಮ್ಮೂರಿನ ಮೀನುಪ್ರಿಯರ ಮನೆಗಳಲ್ಲಿ ಮಸಾಲೆ ರೆಡಿಯಾಗಿ ಬಿಡುತ್ತಿತ್ತು. ಬಿಸಿಯಾದ ಬೂದಿಯಲ್ಲಿ ಹೊರಳಾಡಿಸುತ್ತಾ ಆ ಮೀನಿನ ಚರ್ಮ ತೆಗೆಯಬೇಕಿತ್ತು. ನೀರೊಳಗಿನ ಕಲ್ಲು ಪೊಟರೆಗಳಲ್ಲಿ ಇರುತ್ತಿದ್ದ ಈ ಮೀನುಗಳನ್ನು ಹಿಡಿಯಲು ಮೀನುಗಾರರು ಡೈನಮೈಟ್‌ ಬಳಸಲು ಶುರು ಮಾಡಿದರು.

ಇದರಿಂದ ಮೊಟ್ಟೆಗಳೆಲ್ಲ ನಾಶವಾಗಿ ಈ ಪ್ರಭೇದದ ಮೀನುಗಳ ಸಂಖ್ಯೆಯೇ ಕಡಿಮೆಯಾಗುತ್ತಾ ಬಂತು. ಡೈನಮೈಟ್‌ ತಂದವರನ್ನು ಮೀನು ಹಿಡಿಯದಂತೆ ಊರಜನ ತಡೆದಿದ್ದರು. ಲೇಖನ ಓದಿದಾಗ ಎಲ್ಲವೂ ನೆನಪಾಯಿತು.
-ಅಶ್ವಿನಿ ಪಿ.ಶೆಟ್ಟಿ, ದಕ್ಷಿಣ ಕನ್ನಡ

*

ಪ್ರೇರಣೆದಾಯಕ

ಬಾವಡಿಗಳ ಭಗೀರಥರು ಲೇಖನ ಚೆನ್ನಾಗಿ ಮೂಡಿಬಂದಿದೆ. ಬೇರೆ ಊರುಗಳ ಜನರಿಗೂ ಪ್ರೇರಣೆದಾಯಕವಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಉದ್ಯಮಿಗಳು ಹಾಗೂ ಸಮುದಾಯ ಒಳ್ಳೆಯ ಕೆಲಸಕ್ಕೆ ಕೈಜೋಡಿಸಿದರೆ ದೊಡ್ಡ ಚಮತ್ಕಾರವನ್ನೇ ಮಾಡಬಹುದು ಎಂಬುದಕ್ಕೆ ಬಾವಡಿಗಳನ್ನು ಸ್ವಚ್ಛಗೊಳಿಸಿದ ಪ್ರಸಂಗವೇ ಸಾಕ್ಷಿ.
-ನಾಗರಾಜ ಕಟ್ಟಿ, ಜಮಖಂಡಿ

(ತಾಜ್‌ ಬಾವಡಿ ದುರಸ್ತಿಗೆ ಗುತ್ತಿಗೆದಾರ ಡಿ.ವೈ. ಉಪ್ಪಾರ ಅವರ ಕಂಪೆನಿ ಖರ್ಚು ಮಾಡಿದ್ದು ₹2.5 ಕೋಟಿ. ಲೇಖನದಲ್ಲಿ ಕಣ್ತಪ್ಪಿನಿಂದ ‘ಕೋಟಿ’ ಪದ ಬಿಟ್ಟುಹೋಗಿತ್ತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT