₹50ಕೋಟಿ ಗಳಿಕೆ

ಬಾಕ್ಸಾಫೀಸ್‌ಗೂ ‘ಟಾಯ್ಲೆಟ್‌’ ಬೇಕಂತೆ!

ಅಕ್ಷಯ್ ಕುಮಾರ್ ಅವರ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೂರೇ ದಿನದಲ್ಲಿ ಈ ಚಿತ್ರ 50ಕೋಟಿ ಗಳಿಕೆ ಮಾಡಿದೆ. 

ಬಾಕ್ಸಾಫೀಸ್‌ಗೂ ‘ಟಾಯ್ಲೆಟ್‌’ ಬೇಕಂತೆ!

ಅಕ್ಷಯ್ ಕುಮಾರ್ ಅವರ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೂರೇ ದಿನದಲ್ಲಿ ಈ ಚಿತ್ರ 50ಕೋಟಿ ಗಳಿಕೆ ಮಾಡಿದೆ. ಸಿನಿಮಾ ಕಥೆಯೂ ಹೆಚ್ಚು ಪ್ರಸ್ತುತವಾಗಿರುವ ಕಾರಣಕ್ಕಾಗಿ, ಬಾಯಿ ಪ್ರಚಾರದಿಂದಲೇ ಚಿತ್ರ ಇಷ್ಟೊಂದು ಯಶಸ್ಸುಗಳಿಸಿದೆ. ಆದರೆ ವಿಷಯ ಅದಲ್ಲ.

ಅಕ್ಷಯ್‌ ಕುಮಾರ್ ಪತ್ನಿ, ನಟಿ ಟ್ವಿಂಕಲ್ ಖನ್ನಾ, ಗಂಡನ ಚಿತ್ರದ ಯಶಸ್ಸಿನ ಕುರಿತು ಟ್ವೀಟ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಈ ಭಾರಿ ಸುದ್ದಿಯಾಗಿದೆ. ‘ಮಲಬದ್ಧತೆಯಿಂದ ಬಳಲುತ್ತಿರುವ ಬಾಕ್ಸ್ ಆಫೀಸ್‌ಗೆ ಟಾಯ್ಲೆಟ್‌ನ ಅಗತ್ಯ ಇದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸಾಲು ಸಾಲು ಸೋಲು ಕಂಡಿದ್ದ ಅಕ್ಷಯ್‌ಕುಮಾರ್ ಅವರಿಗೂ ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಚಿತ್ರದ ಗೆಲುವು ನೆಮ್ಮದಿ ಮೂಡಿಸಿದೆ.

ಚಿತ್ರದ ಗೆಲುವಿನಿಂದ ಸಹಜವಾಗಿಯೇ ಖುಷಿಯಾಗಿರುವ ಅಕ್ಷಯ್‌ ಗೆಲುವಿನ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅವರೂ ಮತ್ತು ರಣವೀರ್ ಸಿಂಗ್ ಟಾಯ್ಲೆಟ್‌ನಲ್ಲಿ ನೃತ್ಯ ಮಾಡುತ್ತಿರುವ ಚಿತ್ರವನ್ನು ಅಕ್ಷಯ್‌ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದರು, ಈ ಚಿತ್ರ ಭಾರಿ ವೈರಲ್ ಆಗಿತ್ತು.

ಚಿತ್ರದ ಬಗ್ಗೆ ಹೆಮ್ಮೆಯ ಮಾತನಾಡಿರುವ ಅಕ್ಷಯ್‌ ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳು ಗೆದ್ದೆಗೆಲ್ಲುತ್ತವೆ ಎನ್ನುವ ಮೂಲಕ ತಮ್ಮ ಆ್ಯಕ್ಷನ್‌ ಹೀರೊ ಇಮೇಜಿನಿಂದ ಬರುವ ಸುಳಿವನ್ನೂ ಅಕ್ಷಯ್‌ ನೀಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಪ್ರಶ್ನೋತ್ತರ

ಪುರವಣಿ
ಪ್ರಶ್ನೋತ್ತರ

17 Jan, 2018
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

ಪುರವಣಿ
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

16 Jan, 2018
ಸುಗ್ಗಿ–ಹುಗ್ಗಿ

ಪಿಕ್ಚರ್‌ ಪ್ಯಾಲೇಸ್‌
ಸುಗ್ಗಿ–ಹುಗ್ಗಿ

15 Jan, 2018
ಗೋಡೆಗಳಿಗೊಂದು ಬಣ್ಣದ ಸ್ಪರ್ಶ

ಒಳಾಂಗಣ
ಗೋಡೆಗಳಿಗೊಂದು ಬಣ್ಣದ ಸ್ಪರ್ಶ

12 Jan, 2018
ಖಾದಿ ಉತ್ಸವ, ದೇಸಿ ತಿನಿಸುಗಳ ಘಮ

ರಸಾಸ್ವಾದ
ಖಾದಿ ಉತ್ಸವ, ದೇಸಿ ತಿನಿಸುಗಳ ಘಮ

11 Jan, 2018