ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಗುವ ಕಟ್ಟಡ...

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬ್ರೆಜಿಲ್‌ನ ಸ್ವೀಟ್ ವೊಲಾರ್ಡ್‌ ಪ್ರಪಂಚದ ಮೊದಲ ತಿರುಗುವ ಬಹುಮಹಡಿ ಕಟ್ಟಡ. 2001ರಲ್ಲಿ ಲೋಕಾರ್ಪಣೆಯಾದ ಈ ಕಟ್ಟಡ 150 ಅಡಿ ಎತ್ತರವಿದ್ದು, 15 ಮಹಡಿಗಳನ್ನು ಹೊಂದಿದೆ.

ಸ್ವೀಟ್‌ ವೊಲಾರ್ಡ್‌ ಅನ್ನು ವಿನ್ಯಾಸ ಮಾಡಿದ್ದ ಮೊರೊ ಸಿವಿಸ್ ಎಂಬ ಕಟ್ಟಡ ನಿರ್ಮಾಣ ಸಂಸ್ಥೆಯ ಆರ್ಕಿಟೆಕ್ಟ್‌ ಬ್ರೂನೊ ಡಿ ಫ್ರಾನ್ಸೊ ಎಂಬುವವರು ಇದನ್ನು ವಿನ್ಯಾಸ ಮಾಡಿದ್ದಾರೆ. ಇದು ಇರುವುದು ಬ್ರೆಜಿಲ್‌ನ ಕುರ್ಟಿಬಾ ಜಿಲ್ಲೆಯ ಇಕೊವಿಲ್ಲಾ ಎಂಬಲ್ಲಿ.

ಕಟ್ಟಡದ ಮಧ್ಯಭಾಗದ ಟೊಳ್ಳು ಸ್ಥಂಬದ ಮೂಲಕ ಪೈಪುಗಳನ್ನು ಹಾಯಿಸಿ ಪ್ರತಿ ಮಹಡಿಗೆ ನೀರು ಮತ್ತು ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಕಟ್ಟಡವನ್ನು ಎರಡೂ ದಿಕ್ಕಿನಲ್ಲಿ ತಿರುಗುವಂತೆ ವಿನ್ಯಾಸ ಮಾಡಲಾಗಿದ್ದು. ಒಂದು ಗಂಟೆ ಅವಧಿಯಲ್ಲಿ 360 ಡಿಗ್ರಿ ತಿರುಗುತ್ತದೆ. ಪ್ರತಿ ಮಹಡಿಯೂ ಸ್ವತಂತ್ರವಾಗಿ ತಿರುಗುವಂತೆ ವಿನ್ಯಾಸ ಮಾಡಲಾಗಿದೆ. ಈ ಕಟ್ಟಡದ ಒಂದು ಅಪಾರ್ಟ್‌ಮೆಂಟ್‌ನ ಬೆಲೆ ₹2.56 ಕೋಟಿ.

ಇದರ ಪ್ರತಿ ಅಪಾರ್ಟ್‌ಮೆಂಟ್‌ಗಳಿಗೆ ವಿಶೇಷ ತಂತ್ರಜ್ಞಾನ ಹೊಂದಿದ ಗಾಜುಗಳನ್ನು ಬಳಸಲಾಗಿದ್ದು, ಇವು ಬಣ್ಣ ಬದಲಿಸುವ ಸಾಮರ್ಥ್ಯ ಹೊಂದಿವೆ. ತಿರುಗುವಾಗ ಒಂದೊಂದು ಮಹಡಿ ಒಂದೊಂದು ಬಣ್ಣದಲ್ಲಿ ಗೋಚರಿಸುತ್ತದೆ.

ಈ ಬಹುಮಹಡಿ ಕಟ್ಟಡವು ಬ್ರೆಜಿಲ್‌ನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. ಬ್ರೆಜಿಲ್‌ನ 30 ಮತ್ತು ಹೊರದೇಶಗಳ ಹಲವು ಕಟ್ಟಡ ನಿರ್ಮಾಣ ಕಂಪೆನಿಗಳಿಗೆ ಈ ಕಟ್ಟಡವು ಅಧ್ಯಯನ ವಸ್ತು‌ವೂ ಆಗಿದೆ.

ಈಗ ಇದೇ ಮಾದರಿಯಲ್ಲಿ ದುಬೈನಲ್ಲಿ ತಿರುಗುವ ಬೃಹತ್‌ ಕಟ್ಟಡ ನಿರ್ಮಾಣಕ್ಕೆ ನೀಲ ನಕ್ಷೆ ಸಿದ್ದಪಡಿಸಿದ್ದು, ಅದರ ನಿರ್ಮಾಣ 2020ಕ್ಕೆ ಮುಕ್ತಾಯವಾಗಲಿದೆ ಎಂದು ಹೇಳಲಾಗಿದೆ. ದುಬೈನಲ್ಲಿ ನಿರ್ಮಿಸಲಾಗುತ್ತಿರುವ ತಿರುಗುವ ಬಹುಮಹಡಿ ಕಟ್ಟಡ 480 ಮೀಟರ್ ಉದ್ದ ಇರಲಿದ್ದು, 80 ಮಹಡಿಗಳು ಇರಲಿವೆ. ದುಬೈನ ತಿರುಗುವ ಕಟ್ಟಡವನ್ನು ಡೇವಿಡ್ ಎಚ್.ಫಿಷರ್‌ ಎಂಬುವವರು ವಿನ್ಯಾಸ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT