ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫಸ್ಟ್‌ ಲವ್’ನಲ್ಲಿ ಸಂಗೀತ ಸುಧೆ

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

‘ಫಸ್ಟ್‌ ಲವ್‌’ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಸಜ್ಜಾಗಿ ಬಂದಿತ್ತು. ಆದರೆ, ಚಿತ್ರದ ನಾಯಕಿ ಕವಿತಾ ಗೌಡ ಮಾತ್ರ ವೇದಿಕೆಯಲ್ಲಿ ಕಾಣಸಿಗಲಿಲ್ಲ. ನಾಯಕಿಯೇ ಚಿತ್ರದ ಪ್ರಚಾರಕ್ಕೆ ಬರದಿದ್ದರೆ ಹೇಗೆ? ಏನಾದರೂ ಜಟಾಪಟಿ ನಡೆದಿದೆಯೇ? ಎಂಬ ಪ್ರಶ್ನೆ ಮಾಧ್ಯಮದವರಿಂದ ತೂರಿಬಂತು.

‘ಚಿತ್ರವು ಆಗಸ್ಟ್‌ 18ರಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಒಂದು ತಿಂಗಳ ಹಿಂದೆಯೇ ಚಿತ್ರದ ಪ್ರಸಾರಕ್ಕೆ ಬರುವಂತೆ ಕವಿತಾ ಗೌಡ ಅವರಿಗೆ ಕೋರಿದ್ದೆವು. ಆದರೆ, ನಾನು ತಮಿಳು ಧಾರಾವಾಹಿಯಲ್ಲಿ ಬ್ಯುಸಿಯಿದ್ದೇನೆ ಎಂದು ಹೇಳುತ್ತಿದ್ದಾರೆ. ನಿಗದಿತ ಸಮಯಕ್ಕೆ ಸಂಭಾವನೆ ನೀಡಲಾಗಿದೆ. ಯಾವುದೇ ತೊಂದರೆಯನ್ನೂ ನೀಡಿಲ್ಲ. ಆದರೂ, ಅವರು ಬಂದಿಲ್ಲ’ ಎಂದ ನಿರ್ದೇಶಕ ಮಲ್ಲಿ ಅವರ ಮಾತಿನಲ್ಲಿ ಬೇಸರವಿತ್ತು.‌

‘ಇದು ಸಂಗೀತಮಯವಾದ ರೊಮ್ಯಾಂಟಿಕ್ ಚಿತ್ರ. ವೈದ್ಯಕೀಯ ಕಾಲೇಜೊಂದರಲ್ಲಿ ನಡೆದ ಪ್ರೇಮಕಥೆ ಆಧರಿಸಿದ ಸಿನಿಮಾ. ಚಿತ್ರದ ಕೊನೆಯ 25ರ ನಿಮಿಷದ ಕ್ಲೈಮ್ಯಾಕ್ಸ್‌ನಲ್ಲಿ ನೈಜಕಥೆಯನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ’ ಎಂದು ಸಿನಿಮಾದ ಎಳೆಯನ್ನು ಬಿಡಿಸಿಟ್ಟರು.

ನಿರ್ದೇಶಕರ ಮಾತಿಗೆ ರೇಡಿಯೊ ಜಾಕಿಯಾದ ನಾಯಕ ರಾಜೇಶ್‌ ಕೂಡ ಧ್ವನಿಗೂಡಿಸಿದರು. ‘ಕನ್ನಡದ ನಟಿಯರಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಆರೋಪ ಸರ್ವೇ ಸಾಮಾನ್ಯ. ಆದ್ರೆ, ಪ್ರತಿಭೆ ಗುರುತಿಸಿ ಅವಕಾಶ ನೀಡಿದರೆ ಚಿತ್ರದ ಪ್ರಚಾರಕ್ಕೂ ಬರುವುದಿಲ್ಲ’ ಎಂದು ಅಸಮಾಧಾನ ತೋಡಿಕೊಂಡರು.

ಚಿತ್ರವು ಬಿಡುಗಡೆ ಹಂತದಲ್ಲಿರುವ ಪರಿಣಾಮ ನಿದ್ದೆಗಿಂತ ಅವರಿಗೆ ಟೆನ್ಷನ್‌ ಜಾಸ್ತಿಯಾಗಿದೆಯಂತೆ.

‘ಚಿತ್ರದಲ್ಲಿ ನನ್ನದು ಎರಡು ಶೇಡ್‌ ಇರುವ ಪಾತ್ರ. ಸುರೇಶ್‌ಬಾಬು ಅವರ ಕೈಚಳಕದಲ್ಲಿ ಗೋಲ್‌ಗುಂಬಜ್‌ ವಿಭಿನ್ನವಾಗಿ ಮೂಡಿಬಂದಿದೆ’ ಎಂದರು ರಾಜೇಶ್‌.

ಚಿತ್ರದ ಮತ್ತೊಬ್ಬ ನಾಯಕಿ ಸ್ನೇಹಾ ನಾಯರ್‌ ಅವರಿಗೆ ಇದು ಮೊದಲ ಸಿನಿಮಾ. ‘ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದಷ್ಟೇ ಹೇಳಿ ಮಾತು ಮುಗಿಸಿದರು.

ಚಿತ್ರದ ಬಜೆಟ್‌ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆಯಂತೆ. ಹಾಗಾಗಿ, ಬಜೆಟ್‌ ಮೊತ್ತ ಹೆಚ್ಚಿದಂತೆಲ್ಲಾ ನಿರ್ಮಾಪಕರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದರು ಚಿತ್ರಕ್ಕೆ ಬಂಡವಾಳ ಹೂಡಿರುವ ಜಗನ್‌ಮೋಹನ್‌ ರೆಡ್ಡಿ.

ಸುರೇಶ್‌ ಬಾಬು ಅವರ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT