ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ. ಕಳೆದು ಹೋಗೊ ಸರದಿ!

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಆರ್‌. ಶಿವಕುಮಾರ್‌ ಭದ್ರಯ್ಯ ವೃತ್ತಿಯಲ್ಲಿ ವ್ಯಾಪಾರಿ. ಸಭೆ, ಶುಭ ಸಮಾರಂಭಗಳಲ್ಲಿ ಮಿಕ್ಕಿದ ಆಹಾರ ಪದಾರ್ಥ ಸಂಗ್ರಹಿಸಿ ಹಸಿದವರಿಗೆ ನೀಡುವುದು ಅವರ ದಿನನಿತ್ಯದ ಕಾಯಕ. ಅವರ ಈ ಸೇವೆಗೆ 16 ವರ್ಷ ತುಂಬಿದೆ. ಈ ಕಾಯಕದಲ್ಲಿಯೇ ನೆಮ್ಮದಿ ಕಂಡುಕೊಂಡಿರುವ ಅವರು ‘ಮುಖ್ಯಮಂತ್ರಿ ಕಳೆದೊದ್ನಪ್ಪೊ’ ಚಿತ್ರ ನಿರ್ದೇಶಿಸಿ ತೆರೆಗೆ ತರುವ ಖುಷಿಯಲ್ಲಿದ್ದಾರೆ. ಅವರ ಪುತ್ರನೇ ಈ ಚಿತ್ರದ ನಾಯಕನಾಗಿರುವುದು ಅವರ ಸಂತಸಕ್ಕೆ ಕಾರಣಗಳಲ್ಲಿ ಒಂದಾಗಿದೆ.

‘ನಟ ಉಪೇಂದ್ರ ಅವರು ಹೊಸ ಪಕ್ಷ ಕಟ್ಟುವುದಾಗಿ ಘೋಷಿಸಿದ್ದಾರೆ. ಅವರ ಆಶಯ ನನ್ನ ಸಿನಿಮಾದಲ್ಲಿದೆ. ಪ್ರಸ್ತುತ ಜಾತೀಯತೆ ತಾಂಡವವಾಡುತ್ತಿದೆ. ಒಬ್ಬ ವ್ಯಕ್ತಿಯ ಹಿಂದೆ ಯಾರೊಬ್ಬರೂ ಹೋಗಬಾರದು. ಸಮಾಜದಲ್ಲಿ ನಡೆಯುತ್ತಿರುವ ವಾಸ್ತವಗಳ ಮೇಲೆ ಚಿತ್ರ ಬೆಳಕು ಚೆಲ್ಲಲಿದೆ’ ಎಂದರು ಶಿವಕುಮಾರ್.

‘ಕಕ್ಕಸು ಮನೆ ಕದ್ದ ಆರೋಪದ ಮೇಲೆ ಮುಖ್ಯಮಂತ್ರಿ ರಾಜೀನಾಮೆ...’ ಎಂಬ ವಿಷಯದ ಮೇಲೆ ಚಿತ್ರ ಆರಂಭವಾಗುತ್ತದೆಯಂತೆ. ಅಂದಹಾಗೆ ಈ ಚಿತ್ರಕ್ಕೆ ಅವರೇ ಬಂಡವಾಳ ಕೂಡ ಹೂಡಿದ್ದಾರೆ. ‘ಈ ಚಿತ್ರ ಕೇವಲ ರಾಜಕೀಯಮಯವಾಗಿಲ್ಲ. ನವೀರಾದ ಪ್ರೇಮ ಕಥೆಯೂ ಇದರಲ್ಲಿದೆ’ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

(ಆರ್. ಶಿವಕುಮಾರ್)

ನಾಯಕ ಭರತ್‌ ಭದ್ರಯ್ಯ ಅವರಿಗೂ ಇದು ಮೊದಲ ಚಿತ್ರ. ತಡವರಿಸಿ ಮಾತು ಆರಂಭಿಸಿದ ಅವರು, ‘ಚಿತ್ರದಲ್ಲಿ ನನ್ನದು ಪರ್ತಕರ್ತನ ಪಾತ್ರ. ಲವರ್‌ಬಾಯ್‌ ಆಗಿಯೂ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.

ನಾಯಕಿ ಅಮೂಲ್ಯಾ ರಾಜ್‌ಗೂ ಇದು ಪ್ರಥಮ ಸಿನಿಮಾ. ‘ಚಿತ್ರದಲ್ಲಿ ನಾನು ಸಚಿವರ ಪುತ್ರಿಯಾಗಿ ನಟಿಸಿದ್ದೇನೆ’ ಎಂದರು.

‘ಚಿತ್ರದಲ್ಲಿ 4 ಹಾಡುಗಳಿವೆ. ನಾಗೇಂದ್ರಪ್ರಸಾದ್‌, ಶಿವಕುಮಾರ್‌ ಮತ್ತು ಮಂಜು ಕವಿ ಹಾಡು ರಚಿಸಿದ್ದಾರೆ’ ಎಂದರು ಸಂಗೀತ ನಿರ್ದೇಶಕ ವಿ.ಕೆ. ನಯನ್‌.

ಜೆ.ಆರ್.ಎಚ್‌. ಹರೀಶ್‌ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮುಂದಿನ ತಿಂಗಳ ಮೊದಲ ವಾರ ರಾಜ್ಯದಾದ್ಯಂತ ಚಿತ್ರದ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT