ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸಿರುಕಟ್ಟಿ ಈಜಿ ಗಿನ್ನಿಸ್ ದಾಖಲೆ

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ವೆನೆಜುವೆಲಾ ಮೂಲದ 41 ವರ್ಷದ ವೃತ್ತಿಪರ ಈಜುಗಾರ ಕಾರ್ಲೋಸ್ ಕಾಸ್ಟ್ 3 ನಿಮಿಷ 5 ಸೆಕೆಂಡ್‌ ಸಮಯದಲ್ಲಿ ನೀರಿನಲ್ಲಿ ಉಸಿರುಗಟ್ಟಿ 177ಮೀಟರ್‌ ಉದ್ದ ಈಜುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.

ನೀರಿನ ಮೇಲ್ಭಾಗದಲ್ಲಿ ಒಮ್ಮೆ ಮಾತ್ರ ಉಸಿರಾಡಿ ನೀರಿನಲ್ಲಿ ಮುಳುಗಿ ಈಜಾಡಲು ಮುಂದಾದ ಕಾರ್ಲೋಸ್ ಕಾಸ್ಟ್, 2010ರಲ್ಲಿ 150 ಮೀಟರ್‌ ಉದ್ದ ಕ್ರಮಿಸಿದ್ದರು. ಈ ಬಾರಿ 177 ಮೀಟರ್‌ ದೂರ ಕ್ರಮಿಸುವ ಮೂಲಕ ತಾವೇ ನಿರ್ಮಿಸಿದ್ದ ದಾಖಲೆಯಲ್ಲಿ ಮುರಿದಿದ್ದಾರೆ.

ಕೈ–ಕಾಲುಗಳಿಗೆ ಈಜು ರೆಕ್ಕೆಗಳು, ಮೂಗಿಗೆ ಕ್ಲಿಪ್‌ ಹಾಗೂ ಕಣ್ಣಿಗೆ ಕನ್ನಡಕ ಹೊರೆತುಪಡಿಸಿ ಕಾರ್ಲೋಸ್ ಕಾಸ್ಟ್ ಯಾವುದೇ ಉಸಿರಾಟದ ಉಪಕರಣಗಳನ್ನು ಬಳಸಿರಲಿಲ್ಲ.

ನೆದರ್‌ಲೆಂಡ್‌ನ ವ್ಯಾಪ್ತಿಯ ಬೊನೈರ್ ಸಮುದ್ರದಲ್ಲಿ ಈ ಪ್ರಯತ್ನವನ್ನು ಮಾಡಿದ್ದಾರೆ. ಇಂಟರ್‌ನ್ಯಾಷನಲ್‌ ಅಸೋಸಿಯೇಷನ್ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಪ್ನಿಯ (ಎಐಡಿಎ) ಪ್ರತಿನಿಧಿಗಳು ಇದಕ್ಕೆ ಸಾಕ್ಷಿಯಾಗಿ ಉಪಸ್ಥಿತರಿದ್ದರು.

‘ಸಮುದ್ರದ ಸಂರಕ್ಷಣೆಯ ಉದ್ದೇಶದೊಂದಿಗೆ ಸಮುದ್ರದ ಆಳದಲ್ಲಿ ಈಜುವ ಸ್ಫರ್ಧೆಯನ್ನು ಏರ್ಪಡಿಸಿ ವಿಶೇಷ ದಾಖಲೆಯನ್ನು ನಿರ್ಮಿಸಲು ಬಯಸಿದ್ದೇವೆ’ ಎಂದು ಕಾರ್ಲೋಸ್ ಕಾಸ್ಟ್ ವಿವರಿಸಿದ್ದಾರೆ.

ಯುಟ್ಯೂಬ್‌ನಲ್ಲಿ ಕಾರ್ಲೋಸ್ ಕಾಸ್ಟ್ ಅವರ ಸಾಹಸಮಯ ವಿಡಿಯೊವನ್ನು ಈವರೆಗೆ 77,320 ಮಂದಿ ವೀಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT