ಗುರುವಾರ, 28 ಮಾರ್ಚ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಅಸ್ಮಿತೆಯ ‘ಭೂಮಿ’ ತೂಕದ ಪ್ರಶ್ನೆ

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮನೆಯಲ್ಲಿ ತುಳಸಿಕಟ್ಟೆಗೆ ಪೂಜೆ ಮಾಡುತ್ತಾ ‘ಜೈ ಗಣೇಶ್ ಜೈಗಣೇಶ್ ದೇವಾ...’ ಎಂದು ಭಕ್ತಿಗೀತೆ ಹಾಡುವ, ಮನೆ ಹೊರಗೆ ಹೊಡೆಯುವ, ಕೊಚ್ಚುವ ರೌಡಿ ಪಾತ್ರದಲ್ಲಿ ಕಾಣಿಸಿಕೊಂಡವರು ಸಂಜಯ್‌ ದತ್‌. ಅವರ ಮುದ್ದಾದ ಮಗಳು ಭೂಮಿ. ಇದೀಗ ದತ್‌ ಮಗಳದೇ ಹೆಸರಿನ ಸಿನಿಮಾ ‘ಭೂಮಿ’ ಸುದ್ದಿ ಮಾಡುತ್ತಿದೆ. ದತ್‌ ಪ್ರಮುಖ ಪಾತ್ರ ವಹಿಸಿರುವ ಸಾಹಸ ಪ್ರಧಾನ ಮತ್ತು ಸ್ತ್ರೀ ಮೌಲ್ಯಗಳನ್ನು ತಿಳಿಸುವ ಸಿನಿಮಾವಿದು. ಈಚೆಗೆ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು. ವಿಡಿಯೊ ವೈರಲ್ ಆಗಿದೆ. ಅದಿತಿ ರಾವ್ ಹೈದರಿ ‘ಭೂಮಿ’ ಪಾತ್ರ ನಿರ್ವಹಿಸಿದ್ದಾರೆ.

ಒಳ್ಳೆಯ ಹುಡುಗನನ್ನು ಹುಡುಕಿ ಮಗಳಿಗೆ ಮದುವೆ ಮಾಡುವುದು ಪ್ರತಿ ತಂದೆಯ ಕನಸು. ಸಂಜಯ್ ದತ್ ಕೂಡ ತನ್ನ ಮಗಳಿಗೆ ಉತ್ತಮ ವರನನ್ನು ಹುಡುಕಿ ಮದುವೆ ತಯಾರಿಯಲ್ಲಿ ಇರುತ್ತಾರೆ. ಅಷ್ಟರಲ್ಲಿ ಕಹಿ ಘಟನೆಗಳು ನಡೆಯುತ್ತವೆ. ಅದರ ಒಟ್ಟು ದೃಶ್ಯರೂಪ ಟ್ರೇಲರ್‌ನಲ್ಲಿ ಕಾಣಸಿಗುತ್ತದೆ. ಒಟ್ಟಾರೆ ಸಿನಿಮಾ ಆ್ಯಕ್ಷನ್ ಜತೆ ಭಾವನಾತ್ಮಕ ಎಳೆ, ಸ್ತ್ರೀ ಸಂವೇದನೆ ಮತ್ತು ಸಾಮಾಜಿಕ ಮೌಲ್ಯಗಳನ್ನು ಒಳಗೊಂಡಿದೆ. ಸಿನಿಮಾವನ್ನು ಓಮುಂಗ್ ಕುಮಾರ್‌ ನಿರ್ದೇಶಿಸಿದ್ದಾರೆ.

ಟ್ರೇಲರ್ ಬಿಡುಗಡೆಯಂದು ಕೊಂಚ ಭಾವನಾತ್ಮಕವಾಗೇ ಮಾತು ಆರಂಭಿಸಿದ ಸಂಜಯ್ ‘ಜೈಲಿನಿಂದ ಬಂದ ಮೇಲೆ ನಾನು ಅಭಿನಯಿಸುತ್ತಿರುವ ಮೊದಲ ಸಿನಿಮಾ ಹಾಗಾಗಿ ಈ ಸಿನಿಮಾ ನನಗೆ ತುಂಬಾ ಮುಖ್ಯ’ ಎಂದಿದ್ದಾರೆ. ಟ್ರೇಲರ್‌ನ ಮತ್ತೊಂದು ವಿಶೇಷ ಏನೆಂದರೆ ಸಂಜಯ್‌ ದತ್‌ ‌ಮಗಳು ತ್ರಿಶಲಾ ದತ್ ಹುಟ್ಟಿದ ದಿನದಂದು ‘ಭೂಮಿ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿರುವುದು. ಇದರಿಂದ ಖುಷಿಗೊಂಡ ಮಗಳು, ಅಪ್ಪ ಸಂಜ ಯ್ ದತ್‌ಗೆ ಶುಭ ಹಾರೈಸಿದ್ದಾಳೆ.

‘ನೀವು ತುಂಬಾ ಆಸ್ಥೆಯಿಂದ ಶ್ರಮವಹಿಸಿ ಮಾಡಿದ ಈ ಸಿನಿಮಾವನ್ನು ನನಗೆ ಉಡುಗೊರೆಯಾಗಿ ನೀಡಿದ್ದೀರಿ ಧನ್ಯವಾದ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ‘For every set back God has a major comeback’ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದು ‘ಭೂಮಿ’ ಸಿನಿಮಾದ ಪೋಸ್ಟರ್‌ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT