ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

44 ಜನರಿಗೆ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2016ನೇ ಸಾಲಿನ 44 ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಲೇಖಕರು, ಕೃತಿ ಮತ್ತು ಪ್ರಶಸ್ತಿಯ ವಿವರ: ಶ್ರೀನಿವಾಸ ಕಕ್ಕಿಲ್ಲಾಯ ಬೇವಿಂಜೆ– ಆರೋಗ್ಯ ಆಶಯ– ಬಿಸಲೇರಿ ಜಯಣ್ಣ ಮತ್ತು ಬಿಸಿಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ, ರಾಜಶೇಖರ ಇಚ್ಚಂಗಿ– ಡಾ. ಶಿ.ಚ. ನಂದೀಮಠ– ಶ್ರೀಮತಿ ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ. (ಈ ಎರಡು ಪ್ರಶಸ್ತಿಗಳು ತಲಾ ₹ 10,000 ನಗದು ಹಾಗೂ ಫಲಕಗಳನ್ನು ಒಳಗೊಂಡಿವೆ)

ಪ್ರೊ. ಜೀವಂಧರಕುಮಾರ್ ಕೆ. ಹೋತಪೇಟ– ಪರ್ಯೂಷಣ ಪಾನ ದಶಲಕ್ಷಣ ಪರ್ವ– ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ ಪ್ರಶಸ್ತಿ. (₹ 6,000 ನಗದ ಬಹುಮಾನವನ್ನು ಈ ಪ್ರಶಸ್ತಿ ಒಳಗೊಂಡಿದೆ)

ಕೆ. ಅನಂತರಾಮು– ಕಗ್ಗತ್ತಲೆ ಕಾದಂಬರಿ– ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ, ಬಿ.ವಿ. ಭಾರತಿ– ಮಿಸಳ್ ಭಾಜಿ– ಡಿ. ಮಾಣಿಕರಾವ್ ಸ್ಮಾರಣಾರ್ಥ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ, ಮಹಾಬಲೇಶ್ವರ ರಾವ್– ಅಪರಾಧಿಯ ಅಂತರಂಗ– ಡಾ. ಎ.ಎಸ್‌. ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿ ಪ್ರಶಸ್ತಿ, ಟಿ.ಎಸ್‌. ಗೊರವರ– ರೊಟ್ಟಿ ಮುಟಗಿ– ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ, ಸುಮಂಗಲಾ– ಹನ್ನೊಂದನೇ ಅಡ್ಡರಸ್ತೆ– ಶ್ರೀಮತಿ ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ, ಕರ್ಕಿ ಕೃಷ್ಣಮೂರ್ತಿ– ಗಾಳಿಗೆ ಮೆತ್ತಿದ ಬಣ್ಣ– ಪ್ರಕಾಶಕ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿ, ಜಿ. ಪ್ರಶಾಂತ ನಾಯಕ– ಅಂಬೇಡ್ಕರ್ ಮತ್ತು ಕುವೆಂಪು– ಎಲ್. ಬಸವರಾಜು ದತ್ತಿ ಪ್ರಶಸ್ತಿ, ಉಷಾ ನರಸಿಂಹನ್– ಪರ್ಷಿಯಾ ಪರಿಮಳ– ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ, ಮೊಹಮದ್ ಕುಳಾಯಿ– ಕಾಡಂಕಲ್ಲ್ ಮನೆ– ಗುಬ್ಬಿ ಸೋಲೂರು ಮುರುಘಾರಾಧ್ಯ ದತ್ತಿ ಪ್ರಶಸ್ತಿ.

(ಈ ಪ್ರಶಸ್ತಿಗಳು ತಲಾ ₹ 5,000 ನಗದು ಬಹುಮಾನ ಒಳಗೊಂಡಿವೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT