ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಟಲ್‌ ಹಾವೇ ಹಾವೊಳು ವಿಷವೇ..

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಎಲ್ಲಾದರೂ ಹಾವು ಕಾಣಿಸಿಕೊಂಡರೆ ಜೀವ ನಡುಗಿ ಹೋಗುತ್ತದೆ. ಅಂಥದರಲ್ಲಿ ಮೈ ಮೇಲೆಯೇ ಹಾವು ಹರಿದು ಬಂದರೆ! ಅದರಲ್ಲೂ ಅತ್ಯಂತ ವಿಷಕಾರಿ ಎನ್ನಲಾಗುವ ‘ರ‍್ಯಾಟಲ್‌’ ಹಾವು!

ವಾಷಿಂಗ್ಟನ್‌ ಮೂಲದ ನಿಕ್ ಬಿಶಪ್ ಎಂಬ ಪರಿಸರ ತಜ್ಞರಿಗೆ ಅಂತಹ ಸಂದರ್ಭವೊಂದು ಎದುರಾಗಿತ್ತು. ತಮ್ಮ ಮೇಲೆ ಎರಗಿ ಬಂದ ಹಾವನ್ನು  ಅವರು ಆಟವಾಡಿಸಿ ಕಳಿಸಿದ್ದಾರೆ. ಹಾವುಗಳ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಲೆಂದು ಅಮೆರಿಕದ ಕಾಡುಗಳಲ್ಲಿ ಸಂಚರಿಸುತ್ತಿದ್ದ ವೇಳೆ ನಿಕ್‌ ಜೊತೆ ಸರಸವಾಡಲು ಆ ಹಾವು ಬಂದಿತ್ತು. ಈ ದೃಶ್ಯವನ್ನು ನಿಕ್‌ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈಗ ಈ ವಿಡಿಯೊ ವೈರಲ್ ಆಗಿದೆ.

</p><p>ನಿಕ್‌ ಮೇಲೆ ಎರಗಿ ಬಂದದ್ದು ಸಾಮಾನ್ಯ ಹಾವೇನಲ್ಲ. ಜಗತ್ತಿನ ಅತಿ ಹೆಚ್ಚು ವಿಷಕಾರಿ ಹಾವಾದ ರಾಟಲ್‌ ಸ್ನೇಕ್ (rattle snake) ನಿಕ್‌ ಕಾಲಿನ ಮೇಲೆ ಹರಿದಾಡಿದೆ. ಮಿಸುಕಾಡಿದರೂ ಹಾವು ಕಚ್ಚುತ್ತದೆ ಎಂಬ ಅರಿವು ಇದ್ದ ನಿಕ್‌ ಅಲ್ಲಾಡದೆ ನಿಂತಲ್ಲೇ ನಿಂತುಬಿಟ್ಟಿದ್ದಾರೆ. ಮನುಷ್ಯರನ್ನು ಕಂಡೂ ಭಯ ಬೀಳದ ಈ ಹಾವು ನಿಕ್‌ ಕಾಲಿನ ಮೇಲೆ ಆಟವಾಡಿದೆ. ಇದನ್ನು ಓಡಿಸಲು ಬಾಲವನ್ನು ಮುಟ್ಟಲು ಯತ್ನಿಸಿದಾಗ ಹಾವು ನಿಧಾನಕ್ಕೆ ಹಿಂದೆ ಸರಿದಿದೆ. ಹಾವು ಹಿಂದೆ ಹೋಗುತ್ತಿದ್ದಂತೆ ನಿಕ್‌ ಪಕ್ಕಕ್ಕೆ ಸರಿದಿದ್ದಾರೆ.</p><p>ಈ ಹಾವಿನ ಬಗ್ಗೆ ವಿಡಿಯೊದಲ್ಲಿ ನಿಕ್‌ ವಿವರಿಸಿದ್ದಾರೆ. ಯುಟ್ಯೂಬ್‌ನಲ್ಲಿ ಈ ವಿಡಿಯೊ 8.43 ಲಕ್ಷಬಾರಿ ವೀಕ್ಷಣೆಯಾಗಿದೆ. ಫೇಸ್‌ಬುಕ್‌ನಲ್ಲಿ ಈ ವಿಡಿಯೊ 1 ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗಿದೆ.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT