ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಬು ಪಾತ್ರದಲ್ಲಿ ಟಬು

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ರಣಬೀರ್ ಕಪೂರ್‌ ಅವರು ಸಂಜಯ್ ದತ್‌ ಅವರ ಪಾತ್ರದಲ್ಲಿ ಅಭಿನಯಿಸುತ್ತಿರುವ ಚಿತ್ರದಲ್ಲಿ ಟಬು ಸಹ ಅಭಿನಯಿಸುತ್ತಿದ್ದಾರೆ. ಅದೂ ಸ್ವತಃ ತಮ್ಮದೇ ಪಾತ್ರದಲ್ಲಿ.

ಸಂಜಯ್‌ ದತ್ತ ಅವರೊಂದಿಗೆ ಉತ್ತಮ ಗೆಳೆತನ ಹೊಂದಿದ್ದ ಟಬು ಅವರು ಸಂಜಯ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಹಾಗಾಗಿ ಸಂಜಯ್ ಅವರ ಜೀವನ ಆಧಾರಿತ ಚಿತ್ರದಲ್ಲಿ ಟಬು ಅವರು ಅವರದೇ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರದಲ್ಲಿ ಸಂಜಯ್ ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ನೀಡುವ ದೃಶ್ಯದಲ್ಲಿ ಟಬು ಅಭಿನಯಸಲಿದ್ದಾರೆ. 2004ರಲ್ಲಿ ಸಂಜಯ್‌ದತ್‌ ಅವರಿಗೆ ಮುನ್ನಾಬಾಯ್ ಎಂಬಿಬಿಎಸ್ ಚಿತ್ರಕ್ಕೆ ಫಿಲ್ಮ್‌ಫೇರ್ ಪ್ರಶಸ್ತಿ ದೊರಕಿತ್ತು. ಆಗ ಟಬು ಅವರೇ ಪ್ರಶಸ್ತಿ ಪ್ರದಾನ ಮಾಡಿದ್ದರು. ಸಿನಿಮಾದಲ್ಲಿ ಇದೇ ದೃಶ್ಯವನ್ನು ಮರುಸೃಷ್ಟಿಸಲಾಗುತ್ತಿದೆ.

ಸಂಜಯ್ ಜೀವನ ಆಧಾರಿತ ಚಿತ್ರದಲ್ಲಿ ಹಲವು ಬಾಲಿವುಡ್‌ನ ದಿಗ್ಗಜರು ಹೀಗೆ ತಮ್ಮದೇ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರೋಚಕ ಕಥಾನಕವಾದ ಸಂಜಯ್ ಅವರ ಜೀವನವನ್ನು ತೆರೆಯ ಮೇಲೆ ತರುವ ಜವಾಬ್ದಾರಿಯನ್ನು ಬಾಲಿವುಡ್‌ನ ಹಿಟ್ ನಿರ್ದೇಶಕ ‘3 ಈಡಿಯಟ್ಸ್’ ಖ್ಯಾತಿಯ ರಾಜ್‌ಕುಮಾರ್ ಹಿರಾನಿ ಅವರು ಹೊತ್ತಿದ್ದಾರೆ.

ಬಹುತಾರಾಗಣದ ಈ ಸಿನಿಮಾದಲ್ಲಿ ಮೊನೀಷಾ ಕೊಯಿರಾಲಾ, ಸೋನಂ ಕಪೂರ್, ದಿಯಾ ಮಿರ್ಜಾ, ಅನುಷ್ಕಾ ಶರ್ಮಾ, ಪರೇಶ್ ರಾವಲ್ ಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT