ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯ ವಿರುದ್ಧ ದಾಳಿಗೆ ಸಿದ್ಧ: ಅಮೆರಿಕ

ಕ್ಷಿಪಣಿ ಪರೀಕ್ಷೆ ವಿರುದ್ಧ ಗುಡುಗು
Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಉತ್ತರ ಕೊರಿಯವು ತನ್ನ ಇಲ್ಲವೇ ಮಿತ್ರ ದೇಶಗಳ ವಿರುದ್ಧ ಕ್ಷಿಪಣಿ ದಾಳಿ ನಡೆಸಿದರೆ ‘ತತ್‌ಕ್ಷಣದ ನಿರ್ದಿಷ್ಟ ಕ್ರಮ’ಗಳನ್ನು ಕೈಗೊಳ್ಳುವುದಾಗಿ ಅಮೆರಿಕ ಎಚ್ಚರಿಸಿದೆ.

ಉತ್ತರ ಕೊರಿಯದ ಆಕ್ರಮಣಕ್ಕೆ ಪ್ರತ್ಯುತ್ತರವಾಗಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಾಗ್ದಾನ ಮಾಡಿದ ಕೆಲ ದಿನಗಳಲ್ಲೇ ಈ ಹೇಳಿಕೆ ಹೊರಬಿದ್ದಿದೆ.

ಜಪಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಟಾರೊ ಕನೊ ಹಾಗೂ ರಕ್ಷಣಾ ಸಚಿವ ಇತ್ಸುನೊರಿ ಒನೊಡೆರಾ ಅವರೊಂದಿಗೆ ಶುಕ್ರವಾರ ಜಂಟಿ ಪ‍ತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ಟಿಲ್ಲರ್‌ಸನ್‌, ‘ಉತ್ತರ ಕೊರಿಯದಿಂದ ಎದುರಾಗಬಹುದಾದ ಯಾವುದೇ ಬಗೆಯ ಸಂಭವನೀಯ ದಾಳಿಗಳನ್ನು ಎದುರಿಸಲು ನಾವು ಸಿದ್ಧ. ಆದರೆ ಸೇನಾ ದಾಳಿ ಮಾತ್ರವೇ ಅಮೆರಿಕದ ಆದ್ಯತೆಯ ಮಾರ್ಗವಾಗಿಲ್ಲ’ ಎಂದು ಹೇಳಿದರು.

‘ಉತ್ತರ ಕೊರಿಯ ದ್ವಿಪಕ್ಷೀಯ ಮಾತುಕತೆಗೆ ಮುಂದಾಗಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯ. ಆ ದೇಶ ಮಾತುಕತೆಗೆ ಮುಂದಾಗುವಂತೆ ಮಾಡುವುದೇ ನಮ್ಮ ಉದ್ದೇಶ. ಆದರೆ ಹಿಂದೆ ನಡೆಸಿದ ಮಾತುಕತೆಗಳಿಗಿಂತ ಈ ಮಾತುಕತೆಯಲ್ಲಿ ವಿಭಿನ್ನವಾದ ತೀರ್ಮಾನ ಹೊರಬರಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT